ಜೂನ್ 21 ಖಂಡಗ್ರಾಸ ಚೂಡಮಣಿ ಸೂರ್ಯಗ್ರಹಣ, ಯಾವರಾಶಿಯವರಿಗೆ ಕಷ್ಟ, ಏನು ಮಾಡಬೇಕು

11:01 PM, Sunday, June 14th, 2020
Share
1 Star2 Stars3 Stars4 Stars5 Stars
(No Ratings Yet)
Loading...

solar-eclipsಮಂಗಳೂರು : ಜೂನ್ 21 ರವಿವಾರ ಗೋಚರಿಸಲಿರುವ ಕಂಕಣ ಗ್ರಹಣ ಆಫ್ರಿಕಾಖಂಡದ ಕೊಂಗೊ(RC) ದಿಂದ ಪ್ರಾರಂಭವಾಗಿ ಕೊಂಗೊ (DRC) , ಸೂಡಾನ್, ಇಥಿಯೋಪಿಯಾ , ಸೌದಿ ಅರೇಬಿಯಾ , ಪಾಕಿಸ್ತಾನದ ಬಲೂಚಿ , ಸಿಂದ್ ಪಂಜಾಬ್ , ಉತ್ತರ ಭಾರತದ‌ ಕೆಲವು ಪ್ರಾಂತ್ಯಗಳು , ಟಿಬೇಟ್, ಚೀನಾ , ತೈವಾನ್ ಮೂಲಕ ಹಾದು ಹೋಗುವುದು.

ಇದು  2020ರ ವರ್ಷದ ಮೊದಲ ಸೂರ್ಯಗ್ರಹಣ. ಈ ಸಮಯದಲ್ಲಿ ಸೂರ್ಯನು ಪ್ರಕಾಶಮಾನವಾದ ಉಂಗುರದಂತೆ ಕಾಣುತ್ತಾನೆ.  ಪ್ರತಿ 18 ವರ್ಷಗಳಿಗೊಮ್ಮೆ ಈ ರೀತಿಯ ಸೂರ್ಯಗ್ರಹಣ ಕಾಣಿಸಿಕೊಳ್ಳುವುದೆಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಸೂರ್ಯಗ್ರಹಣವು ಖಗೋಳದಲ್ಲಿ ನಡೆಯುವ ವಿದ್ಯಾಮಾನವಾಗಿದ್ದು, ಇಲ್ಲಿ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯೆ ಬರುತ್ತಾನೆ. ಆಗಾಗ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯೆ ಬರುತ್ತಾನೆ. ಆದರೆ ಚಂದ್ರನು ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳದಂತೆ ಅಡ್ಡಬಂದಾಗ, ಭೂಮಿಯ ಮೇಲೆ ನೆರಳು ಬೀಳುತ್ತದೆ. ಈ ಪ್ರಕ್ರಿಯೆಯನ್ನೇ ಸೂರ್ಯಗ್ರಹಣವೆಂದು ಕರೆಯುತ್ತಾರೆ. ಈ ಘಟನೆಯು ಯಾವಾಗಲೂ ಅಮಾವಾಸ್ಯೆಯಂದು ನಡೆಯುತ್ತದೆ.

ಭಾರತದಲ್ಲಿ  ರಾಜಸ್ಥಾನ , ಪಂಜಾಬ್ ,ಹರ್ಯಾಣ , ಹಿಮಾಚಲ ಪ್ರದೇಶ , ಉತ್ತರಾಖಂಡ ಇತ್ಯಾದಿ ಉತ್ತರ ಭಾರತದ ಪ್ರಾಂತ್ಯಗಳ ಕೆಲವು ಪ್ರದೇಶಗಳಲ್ಲಿ ಕಂಕಣಗ್ರಹಣವಾಗಿಯೂ , ಕರ್ಣಾಟಕವೂ ಸೇರಿದಂತೆ ಭಾರತದ ಉಳಿದೆಲ್ಲಾ ಪ್ರದೇಶಗಳಲ್ಲಿ ಖಂಡಗ್ರಾಸವಾಗಿಯೂ ಗೋಚರಿಸುವುದು. ಜ್ಯೋತಿಷ್ಯದ ಪ್ರಕಾರ ಕೊರೊನಾ ಸಾಂಕ್ರಾಮಿಕ ರೋಗವು 2019ರ ಕೊನೆಯ ಸೂರ್ಯಗ್ರಹಣದ ದಿನದಿಂದ ಆರಂಭವಾಯಿತು ಮತ್ತು ಈ ವರ್ಷದ ಕೊನೆಯ ಸೂರ್ಯಗ್ರಹಣದಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಗ್ರಹಣವು ಜೂನ್‌ 21ರಂದು ಬೆಳಗ್ಗೆ 10:31ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 2:30ಕ್ಕೆ ಕೊನೆಗೊಳ್ಳುತ್ತದೆ, ಗ್ರಹಣವು 12:18ಕ್ಕೆ ಪೂರ್ಣ ಪರಿಣಾಮ ಬೀರುತ್ತದೆ. ಇದು ಗ್ರಹಣದ ಮಧ್ಯಕಾಲ. ಒಟ್ಟು 3 ಗಂಟೆ 33 ನಿಮಿಷಗಳ ಕಾಲ ಈ ಪ್ರಕ್ರಿಯೆಯು ನಡೆಯಲಿದೆ. ಗ್ರಹಣ ಮೋಕ್ಷ ಮಧ್ಯಾಹ್ನ 2 ಗಂಟೆಗೆ ಇರುತ್ತದೆ. ಸೂರ್ಯಗ್ರಹಣದ ಸೂತಕದ ಅವಧಿ ಗ್ರಹಣದ ಹನ್ನೆರಡು ಗಂಟೆಗಳ ಮೊದಲು ಅಂದರೆ ಜೂನ್‌ 20 ರ ರಾತ್ರಿ 9:25ರಿಂದ ಪ್ರಾರಂಭವಾಗುತ್ತದೆ. ಸೂತಕದ ಅಂತ್ಯವು ಗ್ರಹಣ ಮೋಕ್ಷದೊಂದಿಗೆ ಅಂತ್ಯಗೊಳ್ಳುತ್ತದೆ.

ಮೃಗಶಿರಾ – ಆರ್ದ್ರಾ ನಕ್ಷತ್ರ ಮಿಥುನ ರಾಶಿಯಲ್ಲಿ ಸೂರ್ಯನಿಗೆ ರಾಹುಗ್ರಹಣವು. ಮೃಗಶಿರೆಯಲ್ಲಿ ಸ್ಪರ್ಶ , ಆರ್ದ್ರೆಯಲ್ಲಿ ಮೋಕ್ಷ . ಈ ನಕ್ಷತ್ರ ರಾಶಿಯವರಿಗೂ ಕರ್ಕಟ-ವೃಶ್ಚಿಕ-ಮಕರ ರಾಶಿಗಳವರಿಗೂ ಅರಿಷ್ಟವಿದೆ. ಜನ್ಮನಕ್ಷತ್ರ ,ಜನ್ಮರಾಶಿ , ಜನ್ಮರಾಶಿಯಿಂದ 2-4 , – 5-7-8-9-12 ನೇ ರಾಶಿಯಲ್ಲಿ ಗ್ರಹಣವಾದರೆ ಅರಿಷ್ಟವೆಂದು ಕೆಲವು ಗ್ರಂಥಗಳಲ್ಲಿ ಹೇಳಿದೆ. ಯಥಾ ಶಕ್ತಿ ಜಪ, ಸ್ವರ್ಣದಾನ , ಗೋದಾನ , ಉಪರಾಗಶಾಂತಿಯಿಂದ ಅರಿಷ್ಟ ನಿವೃತ್ತಿ, ಹಿಂದಿನ ದಿನ ರಾತ್ರಿ 10 ಘಂಟೆಯ ನಂತರ ಭೋಜನ ನಿಷಿದ್ಧ . ಗ್ರಹಣ ಮೋಕ್ಷಾನಂತರ ಸ್ನಾನ ನಾಡಿ ಭೋಜನವು. ರವಿವಾರ ಸೂರ್ಯಗ್ರಹಣವಾಗಿರುವುದ ರಿಂದ ಇದು ಚೂಡಮಣಿ ಎಂಬ ಯೋಗ ವಿಶೇಷತೆಯನ್ನು ಹೊಂದಿದ್ದು ಗ್ರಹಣ ಕಾಲದಲ್ಲಿ ಮಾಡುವ ಸ್ನಾನ- ಜಪ-ಯಾಗ-ದಾನಾದಿ ಸತ್ಕರ್ಮಗಳಿಗೆ ಅನಂತ ಫಲ ಸಿಗುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಈ ಬಾರಿ ಕೊರೋನಾ ದಿಂದಾಗಿ ದೇವಸ್ಥಾನಗಳಲ್ಲಿ ಗ್ರಹಣ ದೋಷಗಳಿಗೆ ಪೂಜೆ, ಪರಿಹಾರಗಳು ಸಲ್ಲಿಸುವಂತಿಲ್ಲ, ಏನಿದ್ದರೂ ಮನೆಯಲ್ಲಿಯೇ ಮಾಡಿಕೊಳ್ಳಬೇಕು.

ಉಡುಪಿ ಗ್ರಹಣ ಸ್ಪರ್ಶ ಮೋಕ್ಷಾದಿ ವಿವರಗಳು

ಗ್ರಹಣ ಸ್ಪರ್ಶ ಪೂರ್ವಾಹ್ನ ಘಂ 10:04
ಗ್ರಹಣ ಮಧ್ಯ ಪೂರ್ವಾಹ್ನ ಘಂ 11:37
ಗ್ರಹಣ ಮೋಕ್ಷ ಅಪರಾಹ್ನ ಘಂ 01:22

ಗ್ರಹಣ ಆದ್ಯಂತ ಪುಣ್ಯ ಕಾಲ 3ಘಂ 18ಮೀ
ಗ್ರಾಸಮಾನ : 513/1000

ದ.ಕ ಹಾಗು ಉಡುಪಿ ಜಿಲ್ಲೆಯ ಕೆಲವು ‌ಪ್ರಮುಖ ಪ್ರದೇಶದ ಗ್ರಹಣ ಸ್ಪರ್ಶ ಮೊಕ್ಷಾದಿ ವಿವರಗಳು

ಸ್ಪರ್ಶ ಮಧ್ಯ ಮೋಕ್ಷ

ಮಂಗಳೂರು 10:04 11:37 01:22
ಬಂಟ್ವಾಳ 10:05 11:37 01:22
ಪುತ್ತೂರು 10:05 11:38 01:22
ಸುಬ್ರಹ್ಮಣ್ಯ 10:07 11:39 01:24
ಸುಳ್ಯ 10:06 11:38 01:23
ಕುಂದಾಪುರ 10:04 11:37 01:23
ಕಾರ್ಕಳ 10:05 11:38 01:23
ಧರ್ಮಸ್ಥಳ 10:06 11:39 01:24

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English