ಕುಣಿಗಲ್ : ತಾಲೂಕಿನ ಕೋಡಿಹಾಳ್ಯದ ನಿವಾಸಿ ದೇವರಾಜ್ ಎಂಬಾತನನ್ನು ಕೇವಲ 50 ರೂಪಾಯಿಗಾಗಿ ಸ್ನೇಹಿತನ ಕೊಲೆ ಮಾಡಿದ ಆರೋಪದ ಮೇಲೆ ಅಮೃತೂರು ಪೊಲೀಸರು ಬಂಧಿಸಿದ್ದಾರೆ.
ಈತ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಯಲ್ಲಿ ಹೂವಿನ ದಲ್ಲಾಳಿಯಾಗಿ ಕೆಲಸ ಮಾಡಿದ್ದನು. ಜೂ.10ರಂದು ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಆರೋಪಿ ದೇವರಾಜ್ ಮತ್ತು ಆತನ ಸ್ನೇಹಿತ ರಾಜಣ್ಣ ಇಬ್ಬರೂ ಯಡಿಯೂರ ರೈಲ್ವೆ ಹಳಿ ಬಳಿ ಮದ್ಯಪಾನ ಮಾಡಿ ಊಟ ಮಾಡಿದ್ದರು.
ಊಟದ ನಂತರ 50 ರೂ. ಚಿಲ್ಲರೆಗಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಆಗ ಆರೋಪಿ ದೇವರಾಜ್ ತನ್ನ ಸ್ನೇಹಿತ ರಾಜಣ್ಣನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ.
ಡಿವೈಎಸ್ಪಿ ಜಗದೀಶ್ ಅವರ ಮಾರ್ಗದರ್ಶನ ಮೇರೆಗೆ ಸಿಪಿಐ ನಿರಂಜನ್ ಕುಮಾರ್, ಪಿಎಸೈ ಮಂಜು ಅವರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
Click this button or press Ctrl+G to toggle between Kannada and English