ಮೀನಿನ ಚಿಪ್ಸ್ ಮತ್ತು ಮಸಾಲೆ ಲೋಕಾರ್ಪಣೆ

9:53 PM, Friday, June 19th, 2020
Share
1 Star2 Stars3 Stars4 Stars5 Stars
(No Ratings Yet)
Loading...

Fish-Bi-productsಬೆಂಗಳೂರು: ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಕೊಳ್ಳುವ ಸಣ್ಣ ಉದ್ದಿಮೆಗಾರರಿಗೆ ಮೀನು ಮತ್ತು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಅವಶ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಮತ್ಸಭಂದನ ಸಂಸ್ಥೆಯೊಡನೆ ಮೀನಿನ ಸಸಾರಜನಕ ಪೌಷ್ಟಿಕ ಆಹಾರವನ್ನು ” ಮೀನಿನ ಮೌಲ್ಯವರ್ಧಿತ ಚಿಪ್ಸ್ ಮತ್ತು ಮೀನಿನ ಮಸಾಲೆ ಪಧಾರ್ಥ”ಗಳನ್ನು ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಿದರು.

ಇಂದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೂತನ ಪದಾರ್ಥಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ನಿಗಮವು ಕಳೆದ 48 ವರ್ಷಗಳಲ್ಲಿ ಮೀನುಗಾರರ ಮತ್ತು ಮೀನುಗಾರಿಕ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಗ್ರ ಗುಣಮಟ್ಟ ನಿರ್ವಹಣೆಯ ದೃಷ್ಟಿಯಲ್ಲಿ, ಸಾಮಾಜಿಕ ಕಳಕಳಿಯೊಂದಿಗೆ, ತಾಜ ಮೀನು, ಘನೀಕೃತ ಮೀನು, ಮೌಲ್ಯವರ್ಧಿತ ಮೀನಿನ ಉತ್ಪನ್ನಗಳ ಮಾರಾಟ ಹಾಗೂ “ಶೀತಲ ಸರಪಣಿ” ಯನ್ನು ಸದೃಢಗೊಳಿಸಿ, ಕೇಂದ್ರ ಮತ್ತು ರಾಜ್ಯದ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಗಳ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಂಡು ನಿರಂತರ ಅಭಿವೃದ್ಧಿ ಪಥದೆÀಡೆಗೆ ಸಾಗುತ್ತಿದೆ ಎಂದು ಹೇಳಿದರು.

ನಿಗಮವು ಮೀನುಗಾರರಿಗೆ ಮಂಜುಗಡ್ಡೆ, ಡೀಸೆಲ್ ಮತ್ತು ಮೀನುಗಾರಿಕಾ ಸಲಕರಣೆಗಳನ್ನು ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡುವುದು. ಮೀನುಗಾರರು ಹಿಡಿದ ಮೀನನ್ನು ಮಾರಾಟ ಮಾಡುವ ಮುಖಾಂತರ ಮೀನುಗಾರರು ಹಿಡಿದ ಮೀನಿಗೆ ಉತ್ತಮ ಬೆಲೆ ನೀಡುವಿಕೆ, ಮೀನಿನ ರಫ್ತು ಸಂಸ್ಕರಣ ಸೌಲಭ್ಯಗಳನ್ನು ಕಲ್ಪಿಸುವುದು, ಮೀನು ಮಾರಾಟಕ್ಕಾಗಿ ಮೀನು ಮಾರಾಟ ಘಟಕ, ಶೀತಲ ಸರಪಣಿ, ಶೈತ್ಯುಗಾರ, ಮೀನು ಉಪಾಹಾರ ಗೃಹ ಸ್ಥಾಪನೆಯಂತಹ ಅಭಿವೃದ್ಧಿ ಕೆಲಸಗಳಿಂದ ನಿಗಮವು ಮೀನುಗರರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English