ಮಂಗಳೂರಿ ನಲ್ಲಿ ಪ್ರಪ್ರಥಮ ಸುಸಜ್ಜಿತ ಪಂಚತಾರ ಹೋಟೆಲ್ ದೀಪ ಗ್ರಾಂಡ್ಯೂರ್ ಗೆ ಶಿಲಾನ್ಯಾಸ

3:58 PM, Tuesday, November 27th, 2012
Share
1 Star2 Stars3 Stars4 Stars5 Stars
(No Ratings Yet)
Loading...

Deepa Grandeurಮಂಗಳೂರು :ಮಂಗಳೂರು ನಗರದಲ್ಲಿ ಇದೇ ಮೊದಲ ಬಾರಿಗೆ ದೀಪ ಡೆವಲಪರ್ಸ್ ಸಂಸ್ಥೆಯಿಂದ ನಗರದ ಎಂ.ಜಿ.ರಸ್ತೆಯಲ್ಲಿ ದೀಪ ಗ್ರಾಂಡ್ಯೂರ್ ಎಂಬ ಸುಸಜ್ಜಿತವಾದ ಪಂಚತಾರ ಹೊಟೇಲನ್ನು ಸ್ಥಾಪಿಸಲಾಗುವುದಾಗಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಜನತಾ ಕನ್ಟ್ರಕ್ಷನ್ ಸಂಸ್ಥೆಯ ಆಡಳಿತ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು. ಮಂಗಳೂರಿನಲ್ಲಿ ಈ ವರೆಗೆ ಪಂಚತಾರಾ ಹೋಟೆಲ್ ಇಲ್ಲದೇ ಇದ್ದು ಇದು ಮೊದಲ ಹೊಟೇಲಾಗಿದೆ. ಮತ್ತು ಇದರ ಜೊತೆಗೆ ಪಕ್ಕದಲ್ಲಿ ಸುಸಜ್ಜಿತ ಸೌಕರ್ಯವುಳ್ಳ ವಸತಿ ಹಾಗೂ ವಾಣಿಜ್ಯ ಸಂಕೀರ್ಣವನ್ನು ಕೂಡ ಸ್ಥಾಪಿಸಲಾಗುವುದು. ಈ ಎರಡು ಕಟ್ಟಡಗಳಿಗೂ ನವೆಂಬರ್ 29 ರ ಬೆಳಿಗ್ಗೆ 11.52 ಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದು ಅವರು ತಿಳಿಸಿದರು.

ದೀಪ ಗ್ರಾಂಡ್ಯೂರ್ 25 ಅಂತಸ್ತುಗಳ ವಿಶ್ವ ದರ್ಜೆಯ ಹೊಟೇಲ್ ಆಗಲಿದ್ದು ತಳ ಅಂತಸ್ತಿನಲ್ಲಿ ಸುಮಾರು 400 ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲಾಗುವುದು ಹಾಗು ನೆಲ ಅಂತಸ್ತಿನಲ್ಲಿ 6250 ಚದರ ಅಡಿಗಳ ಎಂಟ್ರೆನ್ಸ್ ಲಾಬಿ, ಪ್ರತ್ಯೇಕ ಅಡಿಗೆ ಮನೆಯೊಂದಿಗೆ 1750 ಚದರ ಅಡಿ ವಿಸ್ತೀರ್ಣದ ಸಸ್ಯಾಹಾರಿ ರೆಸ್ಟೋರೆಂಟ್, ಒಂದನೇ ಮಹಡಿಯಲ್ಲಿ 6200 ಚದರ ಅಡಿಯ ಮಾಂಸಾಹಾರಿ ರೆಸ್ಟೊರೆಂಟ್, 3250 ಚದರ ಅಡಿ ವಿಸ್ತೀರ್ಣದ ಸ್ಪೆಶಾಲಿಟಿ ರೆಸ್ಟೋರೆಂಟ್ ಮತ್ತು 1750 ಚದರ ಅಡಿಯ ಲಾಂಜ್ ಬಾರ್ ಹೊಂದಲಿದ್ದು, ಇನ್ನೂ ಅನೇಕ ವ್ಯವಸ್ಥೆಗಳನ್ನು ಹೊಂದಲಿದೆ ಎಂದರು.

ಪಂಚತಾರ ಹೋಟೆಲ್ ದೀಪಾ ಗ್ರಾಂಡ್ಯೂರ್ ಗೆ ಶಿಲಾನ್ಯಾಸವನ್ನು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್ ನೆರವೇರಿಸಲಿದ್ದು, ದಿವ್ಯ ದೀಪ ಹೈಟ್ಸ್ ಗೆ ಶಿಲಾನ್ಯಾಸವನ್ನು ಮಂಗಳೂರು ಗಣೇಶ್ ಬೀಡಿ ವರ್ಕ್ಸ್ ಆಡಳಿತ ನಿರ್ದೇಶಕ ಜಗನ್ನಾಥ್ ಶೆಣೈ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು.

ದಿವ್ಯ ದೀಪಾ ಹೈಟ್ಸ್ ಮೊದಲ 5 ಮಹಡಿಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ಹೊಂದಲಿದ್ದು, ಈ ಸಂಕೀರ್ಣದ ಎಲ್ಲಾ ನಿವೇಶನಗಳಲ್ಲೂ ಸಮುದ್ರ ವೀಕ್ಷಣೆಗೆ ಅವಕಾಶವಿದೆ. ಇದರ ಎಲ್ಲಾ ಕೋಣೆಗಳು ಶೌಚಾಲಯ ಸಹಿತವಾಗಿರಲಿದ್ದು, ಸೂಕ್ತ ತರದ ಗಾಳಿ ಬೆಳಕಿನ ವ್ಯವಸ್ಥೆ ಹಾಗೂ ಆಧುನಿಕ ಜೀವನ ಶೈಲಿಗೆ ಪೂರಕವಾದ ಅತ್ಯಾಧುನಿಕ ವ್ಯವಸ್ಥೆಗಳಿಗೆ ಪೂರಕವಾಗಿ ನಿರ್ಮಾಣಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ದೀಪಾ ಡೆವಲಪರ್ಸ್ ನ ಆಡಳಿತ ಪಾಲುದಾರೆ ಶರ್ಮಿಳಾ ರಮೇಶ್ ಕುಮಾರ್, ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English