ಕರಾವಳಿಯ ದೇವಸ್ಥಾನಗಳಲ್ಲಿ ಸೂರ್ಯಗ್ರಹಣದ ಬಳಿಕ ವಿಶೇಷ ಪೂಜೆ ಪುನಸ್ಕಾರ

9:09 PM, Sunday, June 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

solar-eclips ಮಂಗಳೂರು :  ಭಾನುವಾರ ಸೂರ್ಯಗ್ರಹಣದ ಬಳಿಕ ಕರಾವಳಿಯ ದೇವಸ್ಥಾನಗಳಲ್ಲಿ ಶುದ್ಧತೆ ಆರಂಭವಾಗಿದೆ. ಗ್ರಹಣ ಮೋಕ್ಷದ ನಂತರ ದೇವಸ್ಥಾನಗಳನ್ನು ಶುಚಿಗೊಳಿಸಿ, ಬಳಿಕ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು.

ಇಂದು ಬೆಳಗ್ಗೆ 10 ಗಂಟೆ 04 ನಿಮಿಷಕ್ಕೆ ಗ್ರಹಣ ಪ್ರಾರಂಭವಾಗಿದ್ದು, ಮಧ್ಯಾಹ್ನ 1.22ಕ್ಕೆ ಮುಕ್ತಾಯಗೊಂಡಿದೆ. ಇದು ಖಂಡಗ್ರಾಸ ಗ್ರಹಣವಾಗಿದ್ದು, ಉತ್ತರ ಭಾರತದ ಕೆಲವು ಪ್ರದೇಶಗಳು ಮತ್ತು ಕರ್ನಾಟಕದಲ್ಲಿ ಈ ಅಪೂರ್ವ ಖಗೋಳ ವಿದ್ಯಮಾನ ಶೇ. 45 ರಷ್ಟು ಗೋಚರಿಸಿದೆ.

ಕರಾವಳಿಯ ಹಲವೆಡೆ ಕೆಲ ಕಾಲ ಮೋಡ ಕವಿದ ವಾತಾವರಣದಿಂದಾಗಿ ಸೂರ್ಯಗ್ರಹಣ ವೀಕ್ಷಣೆಗೆ ಅಡ್ಡಿಯಾಯಿತು. ಬಳಿಕ ಸೂರ್ಯಗ್ರಹಣದ ವೀಕ್ಷಣೆ ಮಾಡಲಾಯಿತು. ಮಕ್ಕಳು ವಿಜ್ಞಾನ ತಂತ್ರಜ್ಞಾನ ಇಲಾಖೆಯಿಂದ ಮಾನ್ಯತೆ ಪಡೆದ ಕನ್ನಡಕಗಳಿಂದ ಆಕಾಶ ವೀಕ್ಷಣೆ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English