ಕಾಸರಗೋಡು : ರವಿವಾರ ಕಾಸರಗೋಡು ಜಿಲ್ಲೆಯಲ್ಲಿ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದ ಏಳು ವರ್ಷದ ಬಾಲಕನಿಗೂ ಕೊರೋನಾ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಜೂನ್ 5 ರಂದು ರೈಲಿನಲ್ಲಿ ಬಂದ ಮಂಗಲ್ಪಾಡಿ ನಿವಾಸಿಗಳಾದ ತಂದೆ ಮತ್ತು ಮಗಳಿಗೆಗೆ ಸೇರಿದಂತೆ ಮೇ 23 ರಂದು ಕಾರಿನಲ್ಲಿ ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿ ಪಂಚಾಯತ್ ನ ಏಳು ವರ್ಷದ ಬಾಲಕ, ಸೋಂಕು ದೃಢಪಟ್ಟಿದೆ.
ಜೂನ್ 13ರಂದು ದುಬೈಯಿಂದ ಬಂದ ಪಳ್ಳಿಕೆರೆ, ಜೂನ್ 12 ರಂದು ಕುವೈಟ್ ನಿಂದ ಬಂದ ಚೆಂಗಳ, ಜೂನ್ 11 ರಂದು ಕುವೈಟ್ ನಿಂದ ಬಂದ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಗಳಿಗೆ ಸೋಂಕು ತಗಲಿ ರುವುದು ದೃಢಪಟ್ಟಿದೆ.
ಶನಿವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು.
Click this button or press Ctrl+G to toggle between Kannada and English