ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಜೂನ್ 22, ಸೋಮವಾರ ವರದಿಯಾಗಿದೆ.
ಹೊಸ ಪ್ರಕರಣಗಳ ಪೈಕಿ 11 ಮಂದಿ ವಿದೇಶದಿಂದ ಮರಳಿದವರಾಗಿದ್ದಾರೆ. ಒಬ್ಬರ ಪಾಸಿಟಿವ್ ಪ್ರಕರಣ ಐ ಎಲ್ ಐ ಎಂದು ಗುರುತಿಸಲಾಗಿದೆ. 7 ಪುರುಷರಲ್ಲಿ ಸೋಂಕು ದೃಢಪಟ್ಟರೆ, 45 ವರ್ಷದ ಓರ್ವ ಮಹಿಳೆಯಲ್ಲೂ ಪಾಸಿಟಿವ್ ಕಂಡುಬಂದಿದೆ. ಇಬ್ಬರು ಯುವಕರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ನಡುವೆ ಸೋಮವಾರದಂದು 257 ಮಂದಿಯ ವರದಿ ನೆಗೆಟಿವ್ ಬಂದಿದೆ. ಹನ್ನೆರಡು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ.
Click this button or press Ctrl+G to toggle between Kannada and English