ಕೋವಿಡ್ ನಿಂದ ರಾಜ್ಯ ಪ್ರವಾಸೋದ್ಯಮಕ್ಕೆ ಸುಮಾರು 6 ರಿಂದ 7 ಸಾವಿರ ಕೋಟಿ ರೂ.ನಷ್ಟ- ಸಚಿವ ಸಿ.ಟಿ.ರವಿ

7:59 PM, Tuesday, June 23rd, 2020
Share
1 Star2 Stars3 Stars4 Stars5 Stars
(No Ratings Yet)
Loading...

ct Raviಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಾದ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ ಸಂಪೂರ್ಣ ಕುಸಿದುಬಿದ್ದಿದ್ದು, ಸುಮಾರು 6ರಿಂದ 7 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಕೋವಿಡ್-19 ಪರಿಣಾಮ ರಾಜ್ಯದ ಯಾವುದೇ ಪ್ರವಾಸಿ ತಾಣಗಳಿಗೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಪ್ರವಾಸಿಗಳು ಆಗಮಿಸುತ್ತಿಲ್ಲ. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರವಾಸೋದ್ಯ ಕ್ಷೇತ್ರಕ್ಕೆ ಬರುತ್ತಿದ್ದ ಸುಮಾರು 6ರಿಂದ 7 ಸಾವಿರ ಕೋಟಿ ರೂ.ನಷ್ಟು ಆದಾಯ ನಷ್ಟ ಉಂಟಾಗಿದೆ. ಇದರಿಂದ ಇಲಾಖೆಯನ್ನು ಮುನ್ನೆಡೆಸುವುದೇ ಸವಾಲಿನ ಕೆಲಸವಾಗಿ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಂಗಲ್ರೆಸ್ಟಾರ್ಟ್, ಕೆಎಸ್ಟಿಡಿಸಿ, ಟ್ಯಾಕ್ಸಿ ಸೇರಿದಂತೆ ಮತ್ತಿತರ ಮೂಲಗಳಿಂದ ಬರುತ್ತಿದ್ದ ಆದಾಯ ಸಂಪೂರ್ಣವಾಗಿ ನಿಂತುಹೋಗಿದೆ. ಇನ್ನು ಖಾಸಗಿಯವರ ಲೆಕ್ಕ ನಮಗೆ ಈವರೆಗೂ ಸಿಕ್ಕಿಲ್ಲ. ಅದು ಸೇರ್ಪಡೆಯಾದರೆ ಇನ್ನು ಹೆಚ್ಚಿನ ನಷ್ಟವಾಗುವ ಸಾಧ್ಯತೆ ಇದೆ ಎಂದರು.

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇನ್ನುಮುಂದೆ ತಮಿಳುನಾಡು, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಏಕರೂಪ ಪ್ರವೇಶ ತೆರಿಗೆಯನ್ನು ಜಾರಿಗೆ ತರಲು ಸಿಎಂಗೆ ಮನವಿ ಮಾಡಿದ್ದೇವೆ.

ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಕಿದ್ದು, ಈ ಸಂಬಂಧ ಬೇರೆ ಬೇರೆ ರಾಜ್ಯಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚು ಪ್ರವೇಶ ತೆರಿಗೆ ಇದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಪ್ರವಾಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ನಮಗೆ ಏಕರೂಪ ಪ್ರವೇಶ ತೆರಿಗೆ ಪದ್ದತಿ ಬಂದರೆ ಹೊರರಾಜ್ಯ ಮತ್ತು ವಿದೇಶಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ತೆಲಂಗಾಣ, ಗೋವಾ, ಮಹಾರಾಷ್ಟ್ರ ಸೇರಿದಂತೆÀ ದಕ್ಷಿಣ ರಾಜ್ಯವನ್ನೊಳಗೊಂಡ ಏಕರೂಪ ಪ್ರವೇಶ ತೆರಿಗೆಪದ್ದತಿ ಜಾರಿ ಮಾಡುವ ಪ್ರಸ್ತಾವನೆ ನಮ್ಮ ಮುಂದಿದೆ ಎಂದರು.

ನಮ ರಾಜ್ಯದಲ್ಲಿರುವ ಪ್ರವಾಸಿ ತಾಣಗಳಲ್ಲಿ ಚಲನಚಿತ್ರ, ಚಿತ್ರೀಕರಣ, ಮಾಡಲು ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಲಿದ್ದೇವೆ. ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡುವುದರಿಂದ ನಮಗೆ ನಷ್ಟ ಉಂಟಾಗುತ್ತದೆ. ಇದನ್ನು ತಪ್ಪಿಸಲು ನಮ್ಮ ತಾಣಗಳನ್ನು ಅಲ್ಲಿನ ಪರಿಸರಕ್ಕೆ ತಕ್ಕಂತೆ ಪರಿಸರಸ್ನೇಹಿ ವೇದಿಕೆಯನ್ನು ಸಿದ್ದಪಡಿಸಲಿದ್ದೇವೆ. ಈ ಸಂಬಂಧ ನಿರ್ದೇಶಕರು ಮತ್ತು ನಿರ್ಮಾಪಕರ ಜೊತೆ ಮಾತುಕತೆ ನಡೆಸಿರುವುದಾಗಿ ವಿವರಿಸಿದರು.

ಇನ್ನು ಮುಂದೆ ಕೆಎಸ್ಟಿಡಿಸಿ ಮೂಲಕವೇ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಪ್ರವಾಸವನ್ನು ಆಯೋಜಿಸಲಿದ್ದೇವೆ. ಪ್ರವಾಸಿಗರ ರಕ್ಷಣೆ, ದೇವರ ದರ್ಶನ, ಸುರಕ್ಷಿತವಾಗಿ ಕರೆತರುವುದು ಎಲ್ಲವನ್ನು ಇಲಾಖೆ ವತಿಯಿಂದಲೇ ಮಾಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸಲು ನಾವು ಎಲ್ಲ ರೀತಿಯ ವಿವಿಧ ಯೋಜನೆಗಳನ್ನು ರೂಪಿಸಿದ್ದೇವೆ. ಕಲೆ, ಭಾಷೆ, ಸಂಸ್ಕøತಿ, ಆಚಾರವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಸಮಾಜ ಕಲ್ಯಾಣ ಸಚಿವರು ಹಾಗೂ ಬಂಜಾರ ಅಭಿವೃದ್ದಿ ನಿಗಮದ ಅಧ್ಯಕ್ಷರ ಜೊತೆ ನಿನ್ನೆ ಮಾತುಕತೆ ನಡೆಸಿದ್ದೇವೆ.

ಬಂಜಾರ ಸಂಸ್ಕøತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ದೃಷ್ಟಿಯಿಂದ ಕೊಪ್ಪಳದ ಬಹದ್ದೂರ ಬಾಂಡಾ ಸ್ಥಳದಲ್ಲಿ ಬಂಜಾರ ಕಲ್ಚರಲ್ ಹೆರಿಟೇಜ್ ಸ್ಥಾಪಿಸಲಾಗುವುದು. ಇದೇ ರೀತಿ ಪರಿಶಿಷ್ಟ ಜಾತಿ/ ಪಂಗಡದ ಸಂಸ್ಕøತಿ, ಜನಪದ ಕಲೆಗಳು, ಆಚಾರವಿಚಾರ, ಆಹಾರಪದ್ಧತಿಯನ್ನು ಪ್ರವಾಸಿಗರಿಗೆ ಪರಿಚಯಿಸುವ ದೃಷ್ಟಿಯಿಂದ ರಾಮನಗರದ ಜನಪದ ಲೋಕದ ಬಳಿ ಆದಿವಾಸಿ ಕಲ್ಚರಲ್ ಹೆರಿಟೇಜ್ ನಿರ್ಮಾಣ ಮಾಡಲಾಗುವುದು. ನಮ್ಮ ಸಂಸ್ಕøತಿಯನ್ನು ಪೆÇೀಷಣೆ ಹಾಗೂ ವಿದೇಶಿಗರಿಗೆ ಪರಿಚಯಿಸುವ ಉದ್ದೇಶ ಇರಲಿದೆ ಎಂದು ತಿಳಿಸಿದರು.

ಲಾಕ್ಡೌನ್ ಜಾರಿಯಿಂದಾಗಿ ಟೂರಿಸ್ಟ್ ಟ್ಯಾಕ್ಸಿ ಅಸೋಸಿಯೇಷನ್ ಅವರು ನಷ್ಟದಲ್ಲಿದ್ದರು. ತಮಗೆ ವಾಹನ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂಬ ನೋವನ್ನು ತೋಡಿಕೊಂಡಿದ್ದರು. ಹೀಗಾಗಿ ಈ ತಿಂಗಳ ಅಂತ್ಯದೊಳಗೆ ಶೇ.50ರಷ್ಟು ವಾಹನ ತೆರಿಗೆಯನ್ನು ಪಡೆಯಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.

ಪ್ರಧಾನಿಯವರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಪರಿಕಲ್ಪನೆಯಡಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ , ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳನ್ನು ಒಂದೇ ಸಚಿವಾಲಯ ಹಾಗೂ ಆಯುಕ್ತಾಲಯದಡಿ ವಿಲೀನಗೊಳಿಸಿ ಅನವಶ್ಯಕ ಹುದ್ದೆಗಳನ್ನು ರದ್ದುಪಡಿಸಿ ಆಡಳಿತಾತ್ಮಕ ವೆಚ್ಚವನ್ನು ಕಡಿತಗೊಳಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

ನಮ್ಮ ಇಲಾಖೆ ವ್ಯಾಪ್ತಿಯಡಿ 1768 ಹುದ್ದೆಗಳು ಮಂಜೂರಾಗಿದ್ದವು. ಇದರಲ್ಲಿ 865 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. 900 ಹುದ್ದೆಗಳು ಖಾಲಿ ಇವೆ. ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುವ ಶೇ.60ರಷ್ಟು ಹುದ್ದೆಗಳು ಖಾಲಿ ಇವೆ ಎಂದರು.

ಮುಖ್ಯವಾಗಿ ಪ್ರವಾಸೋದ್ಯಮ ಇಲಾಖೆಗೆ 312 ಹುದ್ದೆಗಳು ಮಂಜೂರಾಗಿದ್ದವು. ಅದರಲ್ಲಿ 200 ಭರ್ತಿಯಾಗಿ 112 ಖಾಲಿ ಇವೆ. ಕ್ರೀಡಾ ಯೋಜನಾ ಇಲಾಖೆಯಿಂದ ಇನ್ನು 219 ಹುದ್ದೆಗಳು ಮಂಜೂರಾಗಿ 87 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. 132 ಖಾಲಿ ಉಳಿದಿವೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ 278 ಹುದ್ದೆ ಮಂಜೂರಾಗಿದ್ದರೆ 114 ಭರ್ತಿಯಾಗಿ 164 ಖಾಲಿ ಇವೆ. ಪತ್ರಗಾರ ಇಲಾಖೆಯಲ್ಲಿ 105 ಹುದ್ದೆ ಮಂಜೂರಾಗಿದ್ದರೆ 34 ಭರ್ತಿ, 78 ಖಾಲಿ ಇವೆ. ಗೆಜೆಟೆಡ್ನಲ್ಲಿ 37 ಹುದ್ದೆಗಳು ಮಂಜೂರಾಗಿ 12 ಭರ್ತಿಯಾಗಿವೆ. ಯುವಜನ ಸಬಲೀಕರಣ ಇಲಾಖೆಯಲ್ಲಿ 257 ಹುದ್ದೆ ಮಂಜೂರಾಗಿದ್ದರೆ, 135 ಹುದ್ದೆಗಳು ಖಾಲಿ ಇದೆ. ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ 565 ಮಂಜೂರಾಗಿದ್ದು, 295 ಭರ್ತಿ, 270 ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English