ತಲ್ಚೇರ್‌ ರಸಗೊಬ್ಬರ ಕಾರ್ಖಾನೆ ಪುನಶ್ಚೇತನ ಯೋಜನೆ ಅವಧಿಯಲ್ಲಿ ಪೂರ್ಣಗೊಳಿಸಲು ಸದಾನಂದ ಗೌಡ ಸೂಚನೆ

11:46 PM, Tuesday, June 23rd, 2020
Share
1 Star2 Stars3 Stars4 Stars5 Stars
(4 rating, 1 votes)
Loading...

DVS-TFLನವದೆಹಲಿ : ಒರಿಸ್ಸಾದ ತಲ್ಚೇರನಲ್ಲಿರುವ ರಸಗೊಬ್ಬರ ಕಾರ್ಖಾನೆಯ (ಟಿಎಎಲ್‌) ಪುನಶ್ಚೇತನ ಕಾಮಗಾರಿಗಳನ್ನು ತ್ವರಿತಗೊಳಿಸಲು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಟಿಎಫೆಲ್‌ ವ್ಯವಸ್ಥಾಪಕ ನಿರ್ದೇಶಕ  ಎಸ್.‌ ಎನ. ಯಾದವ್‌, ನಿರ್ದೇಶಕ (ಆಪರೇಷನ್ಸ್)‌  ಎಸ್‌ ಗಾವಡೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ದೆಹಲಿಯಲ್ಲಿ ಇಂದು ಯೋಜನೆಯ ಪ್ರಗತಿ ಪರಿಶೀಲಿಸಿದರು.

ಯೋಜನೆಯ ಪ್ರಗತಿ ಬಗ್ಗೆ ವಿವರ ನೀಡಿದ ಯಾದವ್‌ ಅವರು – ಕೊರೊನಾ ರೋಗ ಹಾಗೂ ಲಾಕ್ಡೌನ್‌ನಿಂದಾಗಿ ಮಾನವ ಸಂಪನ್ಮೂಲ ಹಾಗೂ ಅಗತ್ಯ ಸರಕುಗಳ ಕೊರತೆಯಾಗಿತ್ತು, ಈಗ ಮತ್ತೆ ಕೆಲಸ ಆರಂಭವಾಗಿದೆ, ಇದುವರಗಿನ ಪ್ರಗತಿಯ ಪ್ರಕಾರ ಯೋಜನೆ ಪೂರ್ಣಗೊಳ್ಳುವುದು ನಿಗದಿತ ವೇಳಾಪಟ್ಟಿಗಿಂತ (ಸೆಪ್ಟೆಂಬರ್‌ 2023) 6 ತಿಂಗಳು ವಿಳಂಬವಾಗಬಹುದಾಗಿದೆ ಎಂದರು.

ಇದಕ್ಕೊಪ್ಪದ ಸಚಿವರು ವ್ಯರ್ಥವಾಗಿರುವ ಸಮಯವನ್ನು ತುಂಬಿಕೊಳ್ಳಲ ಏನೆಲ್ಲಾ ಅಗತ್ಯವಿದೆಯೋ ಅದನ್ನು ಮಾಡಿ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸದಲ್ಲಿ ಸ್ವಲ್ಪವೂ ವಿಳಂಬ ಮಾಡುವುದಿಲ್ಲ. ಅಗತ್ಯ ಬೆಂಬಲ, ಸಹಕಾರ ನೀಡುತ್ತೇವೆ. ಒಟ್ಟಿನಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಯಬೇಕು ಎಂದು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಗೇಲ್‌ ಇಂಡಿಯಾ (GAIL 29.67%), ಆರ್‌.ಸಿ.ಎಫ್‌ (RCF 29.67%) ಕೋಲ್‌ ಇಂಡಿಯಾ(CIL 29.67%) ಹಾಗೂ ಎಫ್‌ಸಿಐಎಲ್ಲಿನ (FCIL’s 10.99 %.) ಜಂಟಿ ಉದ್ಯಮವಾಗಿರುವ ಟಿಎಫ್‌ಎಲ್‌ ಪನಶ್ಚೇತನಕ್ಕಾಗಿ 13270 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಅತ್ಯಂತ ತಾಂತ್ರಿಕ ಕ್ಷಮತೆಯ ಹಾಗೂ ಪರಿಸರ ಸ್ನೇಹಿ ಇಂಧನ ವ್ಯವಸ್ತೆಯನ್ನು (ಕೋಲ್‌ ಗ್ಯಾಸಿಫಿಕೇಶನ್‌) ಕಾರ್ಖಾನೆಯಲ್ಲಿ ಅಳವಡಿಸಲಾಗುತ್ತಿದೆ.

ಸಭೆಯ ನಂತರ ಮಾಧ್ಯಮಕ್ಕೆ ಹೇಳಿಕೆಯೊಂದನ್ನು ನೀಡಿದ ಸಚಿವರು ಟಿಎಫೆಲ್ ಪುನಶ್ಚೇತನ ಯೋಜನೆ ಪೂರ್ಣಗೊಂಡಾಗ ಕಾರ್ಖಾನೆಯು ವಾರ್ಷಿಕವಾಗಿ ‌12.7 ಲಕ್ಷ ಟನ್‌ ರಸಗೊಬ್ಬರ ವಿಶೇಷವಾಗಿ ಯೂರಿಯಾ ಉತ್ಪಾದನೆ ಮಾಡುತ್ತದೆ. ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದರು.

ಸ್ವಾವಲಂಬಿ ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ರಸಗೊಬ್ಬರ ಉತ್ಪಾದನೆಯಲ್ಲಿಯೂ ಸ್ವಾವಲಂಬನೆ ಗಳಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎಫ್‌ಸಿಐಲ್‌ (HFCL) ರಸಗೊಬ್ಬರ ಕಾರ್ಖಾನೆಯ ಘೋರಕ್ಪುರ ಹಾಗೂ ಸಿಂದ್ರಿ ಘಟಕಗಳು ಮತ್ತು ಎಚೆಫ್‌ಸಿಎಲ್‌ನ (HFCL) ಬರೌಣಿ ಘಟಕದ ಪುನಶ್ಷೇತನ ಕಾಮಗಾರಿ ಪ್ರಗತಿಯಲ್ಲಿದೆ. ಇವೆಲ್ಲ ಪೂರ್ಣಗೊಂಡಾಗ ಭಾರತವು ರಸಗೊಬ್ಬರ ಸ್ವಾವಲಂಬನೆಯತ್ತ ಮಹತ್ತರ ಹೆಜ್ಜೆ ಇಡಲಿದೆ ಎಂದು ಸಚಿವರು ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English