ನಾಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಗಮನಿಸಿ

12:10 PM, Wednesday, June 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sslc exam ಬೆಂಗಳೂರು :  ಕೊರೊನಾ ಸೋಂಕಿನ ಭೀತಿ ನಡುವೆಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಸರ್ಕಾರ  ತೀರ್ಮಾನ ಕೈಗೊಂಡಿರುವ  ಹಿನ್ನಲೆಯಲ್ಲಿ  ರಾಜ್ಯಾದ್ಯಂತ  8,48,203 ವಿದ್ಯಾರ್ಥಿಗಳು ಗುರುವಾರ  ಪರೀಕ್ಷೆ ಬರೆಯಲಿದ್ದಾರೆ.

ರಾಜ್ಯಾದ್ಯಂತ ಇರುವ 3209 ಪರೀಕ್ಷಾ ಕೇಂದ್ರಗಳಲ್ಲಿ 4,48,560 ಬಾಲಕರು ಮತ್ತು 3,99,643 ಬಾಲಕಿಯರು ಪರೀಕ್ಷೆ ಬರೆಯುತ್ತಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

7115 ಥರ್ಮಲ್ ಸ್ಕ್ಯಾನರ್, 34 ಜಿಲ್ಲಾ ಕೇಂದ್ರದ ಹೆಲ್ಪ್‍ಡೆಸ್ಕ್, 204 ತಾಲ್ಲೂಕು ಕೇಂದ್ರದ ಹೆಲ್ಪ್‍ಡೆಸ್ಕ್, 3209 ಕೇಂದ್ರಗಳಲ್ಲಿ 5755 ಆರೋಗ್ಯ ತಪಾಸಣೆ ಕೇಂದ್ರಗಳನ್ನು ತೆರೆಯಲಾಗಿದೆ.

ಪೋಷಕರು ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತಂತೆ 9 ಲಕ್ಷ ಕರಪತ್ರ, ಪೋಷಕರ ಮಾಹಿತಿಗಾಗಿ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ 9 ಲಕ್ಷ, ಮಕ್ಕಳ ಮಾಹಿತಿಗಾಗಿ 9 ಲಕ್ಷ ಕರಪತ್ರಗಳನ್ನು ಮುದ್ರಿಸಿ ವಿತರಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಸಿಬ್ಬಂದಿ ವಹಿಸಬೇಕಾದ 6500 ಕರಪತ್ರ ಮುದ್ರಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ 3209 ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪ್ರತಿ ಕೇಂದ್ರದಲ್ಲೂ ಇಬ್ಬರು ಆರೋಗ್ಯ ತಪಾಸಕರನ್ನು ನಿಯೋಜಿಸಲಾಗಿದೆ.

3209 ಪರೀಕ್ಷಾ ಕೇಂದ್ರಗಳಲ್ಲಿ 2879 ಸಾಮಾನ್ಯ ಕೇಂದ್ರಗಳಾಗಿದ್ದರೆ 330 ಹೆಚ್ಚುವರಿ ಕೇಂದ್ರಗಳು, 57 ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಹಾಗೂ 4 ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ.

ಒಟ್ಟಾರೆ ಯಾವುದೇ ಆತಂಕವಿಲ್ಲದೆ ಯಶಸ್ವಿಯಾಗಿ ಪರೀಕ್ಷಾ ಕಾರ್ಯಗಳನ್ನು ಕೈಗೊಳ್ಳಲು 81,265 ಅಕಾರಿಗಳು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

34 ಡಿಡಿಪಿಐ, 204 ಬಿಇಒ, 34 ಜಿಲ್ಲಾ ನೋಡಲ್ ಅಕಾರಿಗಳು, 204 ತಾಲ್ಲೂಕು ನೋಡಲ್ ಅಕಾರಿಗಳು, 2879 ಪರೀಕ್ಷಾ ಕೇಂದ್ರ ಮುಖ್ಯ ಅೀಕ್ಷಕರು, 2879 ಪ್ರಶ್ನೆ ಪತ್ರಿಕೆ ಅೀಕ್ಷಕರು, 2879 ಸ್ಥಾನಿಕ ಜಾಗೃತ ದಳ, 50,787 ಕೊಠಡಿ ಮೇಲ್ವಿಚಾರಕರು, 1246 ಮಾರ್ಗಾಕಾರಿಗಳು, 630 ಶಾಲಾ ಕೋ-ಆರ್ಡಿನೇಟರ್‍ಗಳು, 2879 ಮೊಬೈಲ್ ಸ್ವಾೀನಾಕಾರಿಗಳು, 230 ಬ್ಲಾಕ್ ಪರೀಕ್ಷಾ ಕೇಂದ್ರದ ಮುಖ್ಯ ಅೀಕ್ಷಕರು, 330 ಬ್ಲಾಕ್ ಮೊಬೈಲ್ ಸ್ವಾೀನಾಕಾರಿಗಳು, 102 ಜಿಲ್ಲಾ ವಿಚಕ್ಷಣ ದಳ, 612 ತಾಲ್ಲೂಕು ವಿಚಕ್ಷಣಾ ದಳ, 6418 ದೈಹಿಕ ಹಾಗೂ ಇತರೆ ಶಿಕ್ಷಕರನ್ನು ನಿಯೋಜಿಸಲಾಗಿದೆ.

5758 ಶಿಕ್ಷಕರನ್ನು ಕಾಯ್ದಿರಿಸಲಾಗಿದ್ದು, ಪ್ರತಿ ಬ್ಲಾಕ್ ಹಂತದಲ್ಲಿ 5 ಜನರ ಒಂದು ತಂಡದಂತೆ ಮೂರು ರೀತಿಯ ತಂಡಗಳನ್ನು ರಚಿಸಿ 3060 ಮಂದಿಯನ್ನು ನಿಯೋಜನೆ ಮಾಡಲಾಗಿದೆ.

ಬೆಂಗಳೂರಿನ 1014, ಮೈಸೂರಿನ 587, ಬೆಳಗಾವಿಯ 737 ಹಾಗೂ ಕಲಬುರಗಿಯ 541 ವಿಭಾಗಗಳಲ್ಲಿ ಒಟ್ಟು 8,48,203 ವಿದ್ಯಾರ್ಥಿಗಳು ಯಾವುದೇ ಭೀತಿ ಇಲ್ಲದಂತೆ ಪರೀಕ್ಷೆ ಬರೆಯಲು ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಾಜ್ಯ ಸರ್ಕಾರದ ಕ್ರಮಗಳೇನು?
* ಪ್ರತಿ ವಿದ್ಯಾರ್ಥಿಗೆ 2 ಮಾಸ್ಕ್ ಕೊಡಲಾಗುವುದು
* ಪರೀಕ್ಷಾ ಕೇಂದ್ರದಲ್ಲಿ ಪ್ರತಿನಿತ್ಯ ಥರ್ಮಲ್ ಸ್ಕ್ಯಾನಿಂಗ್
* ವಿದ್ಯಾರ್ಥಿಗಳಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ
* ಪರೀಕ್ಷೆ ಮುಗಿದ ಬಳಿಕ ಪ್ರತಿ ಕೊಠಡಿ ಸ್ಯಾನಿಟೈಸ್
* ಶೌಚಾಲಯ ಶುಚಿತ್ವ ಕಾಪಾಡಲು ಅಗತ್ಯ ಕ್ರಮ
* ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಸಿಬ್ಬಂದಿ ನೇಮಕ
* 1 ಕೊಠಡಿಯಲ್ಲಿ 18 ವಿದ್ಯಾರ್ಥಿಗಳನ್ನು ಕೂರಿಸುವ ವ್ಯವಸ್ಥೆ
* ಪ್ರತಿ ವಿದ್ಯಾರ್ಥಿ ನಡುವೆ ಮೂರೂವರೆ ಅಡಿ ಅಂತರ
* ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಡೆಸ್ಕ್ ಗಳ ವ್ಯವಸ್ಥೆ
* ಅನ್ಯ ಆರೋಗ್ಯ ಸಮಸ್ಯೆ ಇದ್ದರೆ ಪ್ರತ್ಯೇಕ ಕೊಠಡಿ ವ್ಯವಸ್ಥೆ
* ಕಂಟೈನ್ಮೆಂಟ್ ಝೋನ್‍ನಲ್ಲಿ ಪರೀಕ್ಷಾ ಕೇಂದ್ರ ರದ್ದು
* ಇಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ
* ರೆಗ್ಯುಲರ್ ವಿದ್ಯಾರ್ಥಿಯಾಗಿ ಪರೀಕ್ಷೆ ಬರೆಯಲು ಅವಕಾಶ

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ತಜ್ಞರ ಮುನ್ನೆಚ್ಚರಿಕೆ ಸೂಚನೆಗಳು 
* ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅಂತರ ಪಾಲಿಸಬೇಕು
* ಸ್ನೇಹಿತರ ಜೊತೆ ಗುಂಪು ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಡಿ
* ಮಾಸ್ಕ್ ಧರಿಸಿಯೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು
* ಮಾಸ್ಕ್ ಕಿರಿಕಿರಿಯಾದ್ರೆ ಆಗಾಗ ತೆಗೆದು ಸುಧಾರಿಸಿಕೊಳ್ಳಿ
* ಪರೀಕ್ಷಾ ಕೇಂದ್ರಕ್ಕೆ ಬೇಗ ಬಂದು ಆರೋಗ್ಯ ತಪಾಸಣೆ ಮಾಡಿಸಿ
* ವಿದ್ಯಾರ್ಥಿಗಳು ತಮ್ಮ ಮನೆಯಿಂದಲೇ ನೀರು ತೆಗೆದುಕೊಂಡು ಬನ್ನಿ
* ಸಾಧ್ಯವಾದರೆ ಕೈಗಳಿಗೆ ಆಗಾಗ ಸ್ಯಾನಿಟೈಸರ್ ಹಾಕಿಕೊಳ್ಳಿ
* ಪರೀಕ್ಷಾ ಕೇಂದ್ರದ ಬಳಿ ಹೊರಗಿನ ಪದಾರ್ಥ ತಿನ್ನಬೇಡಿ
* ಪರೀಕ್ಷೆ ಮುಗಿದ ಬಳಿಕವೂ ಸಾಮಾಜಿಕ ಅಂತರ ಪಾಲಿಸಿ
* ಪರೀಕ್ಷೆ ಕೇಂದ್ರಕ್ಕೆ ಬರುವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಗಮನವಿರಲಿ
* ಒಂದು ವೇಳೆ ಮನೆಯಲ್ಲಿ ಕ್ವಾರಂಟೈನಿಗಳಿದ್ದರೆ ಮಾಹಿತಿ ನೀಡಿ
* ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ
* ಪೂರಕ ಪರೀಕ್ಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ
* ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಇದ್ದರೆ ಮಾಹಿತಿ ನೀಡಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English