ಬೆಂಗಳೂರು : ಕೊರೋನಾ ಭೀತಿಯಿಂದಾಗಿ ಆರೋಗ್ಯ ಇಲಾಖೆಯ ಸೂಚನೆಯ ಮೇರೆಗೆ ಎಸಿ ಬಸ್ ಸಂಚಾರವನ್ನು ಕೆ ಎಸ್ ಆರ್ ಟಿ ಸಿ ನಿಲ್ಲಿಸಿತ್ತು. ಹಂತ ಹಂತವಾಗಿ ಆರಂಭ ಕೂಡ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿತ್ತು.
ಮೊದಲ ಹಂತವಾಗಿ ನಾಳೆಯಿಂದ 8 ಜಿಲ್ಲೆಗಳಿಗೆ ಕೆ ಎಸ್ ಆರ್ ಟಿ ಸಿ ಎಸಿ ಬಸ್ ಸಂಚಾರ ಸೇವೆ ಆರಂಭಗೊಳ್ಳಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಮೊದಲ ಹಂತದಲ್ಲಿ ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ, ವಿರಾಜಪೇಟೆ ಎಸಿ ಬಸ್ ಸಾರಿಗೆ ಸಂಚಾರ ಕಾರ್ಯಾಚರಣೆ ಪ್ರಾರಂಭಿಸಲಿದೆ ಎಂಬುದಾಗಿ ತಿಳಿಸಿದೆ.
ಹವಾ ನಿಯಂತ್ರಿತ ಸಾರಿಗಗಳಲ್ಲಿ ಮಾರ್ಗಸೂಚಿಯ ಅನ್ವಯ 24 ರಿಂದ 25 ಸೆಂಟಿಗ್ರೇಡ್ ತಾಪಮಾನವನ್ನು ನಿರ್ವಹಿಸಲಿದೆ. ಈ ಮೊದಲು ಎಸಿ ಬಸ್ ಗಳಲ್ಲಿ ನೀಡಲಾಗುತ್ತಿದ್ದಂತೆ ಹೊದಿಕೆಗಳನ್ನು ನೀಡಲಾಗುವುದಿಲ್ಲ. ಪ್ರಯಾಣಿಕರೇ ತಮ್ಮ ಹೊದಿಕೆಗಳನ್ನು ತರುವಂತೆ ಸಂಸ್ಥೆ ಕೋರಿಕೊಂಡಿದೆ.
ಮುಂಗಡ ಎಸಿ ಬಸ್ ಟಿಕೇಟ್ ಬುಕ್ಕಿಂಗ್ ಕೂಡ ಕೆ ಎಸ್ ಆರ್ ಟಿ ಸಿ ಆರಂಭಿಸಿದೆ.
Click this button or press Ctrl+G to toggle between Kannada and English