ಮಂಗಳೂರು : ಮಳೆ ನೀರಿನ ಹರಿವಿನಿಂದ ತಡೆ ಉಂಟಾಗಿದ್ದ ಚರಂಡಿಗೆ ಇಳಿದು ಅದನ್ನು ಸರಿ ಪಡಿಸುವಲ್ಲಿ ಕದ್ರಿ ಕಂಬಳ ಕಾರ್ಪೊರೇಟರ್ ಯಶಸ್ವಿಯಾಗಿದ್ದಾರೆ.
ತನ್ನ ವಾರ್ಡಿನ ಸಮಸ್ಯೆಯನ್ನು ಪಾಲಿಕೆಯ ಕಾರ್ಮಿಕ ರಿಗೆ ತಿಳಿಸಿದರು ಅವರು ಆ ಕೆಲಸ ಮಾಡಲು ಒಪ್ಪದೇ ಇದ್ದಾಗ ಮಂಗಳೂರಿನ ಕದ್ರಿ ಕಂಬಳ ವಾರ್ಡ್ ನ ಬಿಜೆಪಿ ಕಾರ್ಪೋರೇಟರ್ ಮನೋಹರ ಶೆಟ್ಟಿ ಚರಂಡಿಗೆ ಇಳಿದಿದ್ದಾರೆ.
ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾಗಿತ್ತು. ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ ಹೋಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪಲಿಲ್ಲ. ಈ ವೇಳೆ, ಅಲ್ಲಿದ್ದ ಕಾರ್ಪೊರೇಟರ್ ಮನೋಹರ್ ಶೆಟ್ಟಿ ಚೇಂಬರ್ ಒಳಗಡೆ ಇಳಿದು ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ವಿವರಿಸಿದ್ದಾರೆ. ಇಷ್ಟಾದ ಮೇಲೂ ತೊಡಕನ್ನು ಸರಿಪಡಿಸಲು ಕಾರ್ಮಿಕರು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಮನೆಯಿಂದ ಒಂದು ಜೊತೆ ಬದಲಿ ಬಟ್ಟೆಯನ್ನು ತರಿಸಿಕೊಂಡು ಚೇಂಬರ್ ಒಳಗಡೆ ಇಳಿದು ತಾನೇ ಸ್ವತಃ ಕೆಲಸ ಮಾಡಿ ಚರಂಡಿ ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜನಪರ ಜನಪ್ರತಿನಿಧಿ ಯಾವ ರೀತಿ ಇರಬೇಕು, ಇರಬಹುದು ಎಂಬುದಕ್ಕೆ ಕಾರ್ಪೊರೇಟರ್ ಮನೋಹರ ಶೆಟ್ಟಿ ಅದ್ಭುತ ನಿದರ್ಶನವಾಗಿ ತೋರಿದ್ದಾರೆ.
Click this button or press Ctrl+G to toggle between Kannada and English