“ಭಾರತದಲ್ಲಿ ಧರ್ಮದ ಪುನರ್‌ಚಿಂತನೆ” ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ

12:55 PM, Wednesday, November 28th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Re Thinking religion in Indಮಂಗಳೂರು :ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ‘ಭಾರತದಲ್ಲಿ ಧರ್ಮದ ಪುನರ್‌ಚಿಂತನೆ’ ಎಂಬ ವಿಷಯದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ದಿನವಾದ ಮಂಗಳವಾರ ಬೆಳಗ್ಗೆ ‘ಲೀಗಲ್‌ ಓಪಸ್‌ ಮತ್ತು ಪರ್ಲ್ಸ್‌ ಆಫ್‌ ವಿಸ್ಡಮ್‌ ಜರ್ನಲ್‌’ ಪುಸ್ತಕವನ್ನು ಡಾ| ಡಿ. ವೀರೇಂದ್ರ ಹೆಗ್ಗಡೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಧರ್ಮದ ಹೆಸರಿನಲ್ಲಿ ಪರಸ್ಪರ ದ್ವೇಷ ಅಸೂಯೆಗಳು ಮೂಡಿ ಯುದ್ಧಕ್ಕೆ ಕಾರಣವಾದ ಉದಾಹರಣೆಗಳಿವೆ. ಈ ನೆಲೆಯಲ್ಲಿ ಧರ್ಮದ ಕುರಿತು ಆಳವಾದ ಅಧ್ಯಯನ ನಡೆಯುವ ಅನಿವಾರ್ಯತೆ ಇದೆ. ಪ್ರತಿಯೊಂದು ವಿಷಯದಲ್ಲೂ ಧರ್ಮ ಅಡಕವಾಗಿದೆ. ದೇವರಷ್ಟೇ ಧರ್ಮವೂ ಪ್ರಮುಖ. ಹೀಗಾಗಿ ಅಂತಿಮವಾಗಿ ದೇವರನ್ನು ತಲುಪಲು ಧರ್ಮವೂ ಒಂದು ಮಾರ್ಗವಾಗಿದೆ ಎಂದವರು ವಿಶ್ಲೇಷಿಸಿದರು.

ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ| ಎಸ್‌.ಎ. ಬಾರಿ ಮಾತನಾಡಿ, ಭಾರತದಲ್ಲಿ ಸಮಾಜ ವಿಜ್ಞಾನ ಕುರಿತಾದ ವಿಷಯದಲ್ಲಿ ಸಂಶೋಧನೆ ನಡೆಯುತ್ತಿದೆಯಾದರು ಅದು ನಿರೀಕ್ಷಿತವಾಗಿ ನಡೆಯುತ್ತಿಲ್ಲ. ಹೀಗಾಗಿ ಯುವ ಸಮೂಹ ಈ ನೆಲೆಯಲ್ಲಿ ಚಿಂತಿಸಬೇಕಿದೆ ಎಂದು ಹೇಳಿದರು.

ಬೆಲ್ಜಿಯಂನ ಗೆಂಟ್‌ ವಿಶ್ವ ವಿದ್ಯಾಲಯದ ನಿರ್ದೇಶಕ ಪ್ರೊ| ಬಾಲಗಂಗಾಧರ ರಾವ್‌, ಎಸ್‌ಡಿಎಂ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ| ಬಿ.ಕೆ. ರವೀಂದ್ರ, ಎಸ್‌ಡಿಎಂ ಉದ್ಯಮಾಡಳಿತ ಕಾಲೇಜು ಪ್ರಾಂಶುಪಾಲ ಡಾ| ದೇವರಾಜ್‌ ಹಾಗೂ ಡಾ| ಸುಬ್ರಹ್ಮಣ್ಯ, ಸಮ್ಮೇಳನ ಪ್ರಮುಖರಾದ ಮೆರಿಯಾನ ಕೆಪ್ಪೆನ್‌ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English