ಮಾನವ ಜನಾಂಗ ಎದುರಿಸುತ್ತಿರುವ ಕಷ್ಟ ನೋಡಿ ಪ್ರತ್ಯಕ್ಷನಾದ ಕರುಣಾಮಯಿ ಭಜರಂಗಿ

7:23 PM, Friday, June 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Karan Acharya ಕಾಸರಗೋಡು  : ವಿರಾಟ್ ಭಜರಂಗಿ ಮುಖದ ಚಿತ್ರದ ಮೂಲಕ ಟ್ರೆಂಡ್ ಸೃಷ್ಠಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕಾಸರಗೋಡು ಮೂಲದ ಕರಣ್ ಆಚಾರ್ಯ್ ಈಗ ಮತ್ತೊಂದು ಮಾಸ್ಟರ್ ಫೀಸ್ ಆರ್ಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹನುಮಂತನ ಮತ್ತೊಂದು ಮುಖವನ್ನು ಅನಾವರಣಗೊಳಿಸಿದ್ದು, ದಯಾಭಾವ ಹಾಗೂ ತುಸು ವಯಸ್ಸಾದಂತೆ ಕಾಣುವ ಕರುಣಾಮಯಿ ಮುಖದ ಹನುಮಂತನ ಚಿತ್ರವನ್ನು ರಚಿಸಿದ್ದಾರೆ.

ಗ್ರಾಫಿಕ್ ಟ್ಯಾಬ್ಲೆಟ್ ನಲ್ಲಿ ಈ ಚಿತ್ರ ರಚನೆಗೆ ಕಲಾವಿದ ಕರಣ್ ಆಚಾರ್ಯ 50 ನಿಮಿಷ ತೆಗೆದುಕೊಂಡಿದ್ದಾರೆ. ಸದ್ಯ ಈ ಚಿತ್ರ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

2015ರಲ್ಲಿ ಉಗ್ರ ಹನುಮಾನ್ ಚಿತ್ರ ಬಿಡಿಸಿದ್ದೆ. ಆದರ ನಡುವ ಹನುಮಂತ ಹಸನ್ಮುಖಿಯಾಗಿದ್ದ ಕೆಲಸ ಚಿತ್ರವನ್ನೂ ರಚಿಸಿದ್ದೆ. ಆದರೆ ಅವುಗಳಿಗೆ ಪ್ರತಿಕ್ರಿಯೆ ಕಡಿಮೆ ಇತ್ತು. ಈಗ ರಚಿಸಿರುವ ಕರುಣಾಮಯಿ ಹನುಮಂತನ ಚಿತ್ರಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಹನುಮಂತ ಚಿರಂಜೀವಿ, ಆದರೆ ಕಲಿಯುಗದಲ್ಲಿ ಮಾನವ ಜನಾಂಗ ಎದುರಿಸುತ್ತಿರುವ ಕಷ್ಟ ಕಾರ್ಪಣ್ಯ ನೋಡಿ ಬೇಸರದಲ್ಲಿರುವುದನ್ನುಈ ಚಿತ್ರದ ಮೂಲಕ ಅಭಿವ್ಯಕ್ತಿಗೊಳಿಸಿದ್ದೇನೆ ಎನ್ನುತ್ತಾರೆ ಕರಣ್ ಆಚಾರ್ಯ.

Karan Acharya

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English