ದ.ಕ. ಜಿಲ್ಲೆಯಲ್ಲಿ ಶನಿವಾರ 49 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ, ಉಡುಪಿ ಜಿಲ್ಲೆಯಲ್ಲಿ 14

10:32 PM, Saturday, June 27th, 2020
Share
1 Star2 Stars3 Stars4 Stars5 Stars
(No Ratings Yet)
Loading...

Corona Virusಮಂಗಳೂರು : ದ.ಕ. ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ ಸುಮಾರು 49 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಉಡುಪಿ ಜಿಲ್ಲೆಯಲ್ಲಿ 14 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ

ಶನಿವಾರ 232 ಮಂದಿಯ ಕೊರೊನಾ ಪರೀಕ್ಷಾ ವರದಿ ಲಭ್ಯವಾಗಿದ್ದು, ಈ ಪೈಕಿ 183 ಮಂದಿಯ ವರದಿ ನೆಗೆಟಿವ್ ಆಗಿದೆ. ಜ 49 ಮಂದಿಯ ವರದಿ ಪಾಸಿಟಿವ್ ಎಂದು ದೃಢವಾಗಿದೆ.

ದ.ಕ. ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರು ಸೂಕ್ತ ಮುಂಜಾಗೃತೆ ವಹಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಕಾರಣಕ್ಕೂ ಜನತೆ ಆತಂಕಗೊಳ್ಳಬಾರದು. ಗಾಳಿ ಸುದ್ದಿಗಳಿಗೆ ಕಿವಿಗೊಡದೆ, ಸೂಕ್ತ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ, ಅಗತ್ಯತೆ ಇದೆ.

ಇನ್ನು ರೋಗಿ ಸಂಖ್ಯೆ 9590 ಸಂಪರ್ಕದಿಂದ ಬರೋಬ್ಬರಿ 13 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 2 ವರ್ಷದ ಗಂಡು ಮಗು, 2 ವರ್ಷದ ಹೆಣ್ಣು ಮಗು ಸೇರಿಕೊಂಡಿದೆ 6ವರ್ಷದ ಬಾಲಕ ಸೇರಿದ್ದಾನೆ. ಇವರೆಲ್ಲರೂ ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಈ ನಡುವೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಪಾಸಿಟಿವ್ ಇರುವುದು ಸ್ಪಷ್ಟಗೊಂಡಿದೆ.

49 ಮಂದಿ ಸೋಂಕಿತರ ಪೈಕಿ ಸೌದಿಯಿಂದ ಮರಳಿದ 11ರ ಬಾಲಕ ಸೇರಿ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 10582 ಪ್ರಾಥಮಿಕ ಸಂಪರ್ಕದಿಂದ ಒಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ರೋಗಿ ಸಂಖ್ಯೆ 10581 ಸೋಂಕಿತನ ಸಂಪರ್ಕದಿಂದ 70 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ದುಬೈನಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಪುತ್ತೂರಿನ ನಿವಾಸಿ 40ರ ಮಹಿಳೆಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ. ಪುತ್ತೂರಿನ ಮತ್ತೊಬ್ಬ 80 ವರ್ಷದ ಮಹಿಳೆಯಲ್ಲಿ ಸಾರಿ ಪ್ರಕರಣ ಕಂಡುಬಂದಿದೆ. ದುಬೈ, ಕತಾರ್ ನಿಂದ ಆಗಮಿಸಿದ ಐವರಲ್ಲಿ ಸೋಂಕು ಇದೆ ಎನ್ನುವುದು ಖಚಿತವಾಗಿದೆ. 23 ವರ್ಷದ ಮಂಗಳೂರಿನ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಮೂಲ ಪತ್ತೆ ಹಚ್ಚಲಾಗುತ್ತಿದೆ. ರೋಗಿ ಸಂಖ್ಯೆ 10275 ಸಂಪರ್ಕದಿಂದ 23 ವರ್ಷದ ಇಬ್ಬರು ಯುವಕರಲ್ಲಿ ಪಾಸಿಟಿವ್ ಕಂಡುಬಂದಿದೆ. ಮತ್ತೊಬ್ಬ ಕತಾರ್ ನಿಂದ ಮರಳಿದವರಲ್ಲಿ ಸೋಂಕು ದೃಢಪಟ್ಟಿದೆ. ರೋಗಿ ಸಂಖ್ಯೆ 9590ರ ಸಂಪರ್ಕದಿಂದ 24 ವರ್ಷದ ಯುವಕನಲ್ಲಿ ಪಾಸಿಟಿವ್ ಪತ್ತೆಯಾಗಿದೆ. 34 ವರ್ಷದ ಬೆಳ್ತಂಗಡಿ ನಿವಾಸಿಯ ಮೂಲ ಪತ್ತೆಹಚ್ಚಲಾಗುತ್ತಿದೆ. ರೋಗಿ ಸಂಖ್ಯೆ 10588 ಸಂಪರ್ಕದಿಂದ ಒಬ್ಬರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಮಂಗಳೂರು ನಿವಾಸಿ 22 ವರ್ಷದ ಯುವತಿಯಲ್ಲಿ ಐಎಲ್ ಐ ಪ್ರಕರಣ ಕಂಡುಬಂದಿದೆ. 44 ವರ್ಷದ ಬಂಟ್ವಾಳ ನಿವಾಸಿಯ ಮೂಲ ಪತ್ತೆಯಾಗಿಲ್ಲ. 19ರ ಯುವಕ ಪುತ್ತೂರು ನಿವಾಸಿಯಾಗಿದ್ದು ಆತನಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. 35 ವರ್ಷದ ಮಂಗಳೂರು ನಿವಾಸಿಯಲ್ಲಿ ಸಾರಿ ಪ್ರಕರಣ ಕಂದುಬಂದಿದೆ. ಶಾರ್ಜಾದಿಂದ ಮರಳಿದ ಇಬ್ಬರಲ್ಲಿ ಪಾಸಿಟಿವ್ ಇರುವುದು ಪರೀಕ್ಷೆಯಿಂದ ತಿಳಿದುಬಂದಿದೆ. ಇನ್ನು ಮತ್ತಿಬ್ಬರ ಮೂಲ ಪತ್ತೆಹಚ್ಚಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಶನಿವಾರ 14 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ನಡುವೆ 10 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಶನಿವಾರ ಪತ್ತೆಯಾದ  14 ಮಂದಿಯಲ್ಲಿ ಐವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಒಬ್ಬರು ತೆಲಂಗಾಣದಿಂದ ಮರಳಿದವರಾಗಿದ್ದಾರೆ. ಉಳಿದಂತೆ ಆರು ಮಂದಿ ಉಡುಪಿ ನಿವಾಸಿಗಳಲ್ಲೇ ಸೋಂಕು ದೃಢಪಟ್ಟಿದೆ. ಬೆಂಗಳೂರು, ಕುಮಟಾದಿಂದ ಬಂದ ಇಬ್ಬರಲ್ಲಿ ಪಾಸಿಟಿವ್ ಪತ್ತೆಯಾಗಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English