ಉಳ್ಳಾಲ : ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಉಳ್ಳಾಲದಾದ್ಯಂತ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿದೆ.
ಗುರುವಾರ ಪತ್ತೆಯಾದ ಪ್ರಕರಣಗಳಲ್ಲಿ ಮುಕ್ಕಚ್ಚೇರಿಯ 29ರ ಮಹಿಳೆ, 39 ವರ್ಷದ ಗಂಡಸು, ಆಝಾದನಗರ ಉಳ್ಳಾಲದ 44 ಹಾಗೂ 55ರ ಗಂಡಸು, 36, 50, 30ರ ಮಹಿಳೆಯರು, 13 ಹಾಗೂ 8ರ ಬಾಲಕರು, 12 ವರ್ಷದ ಬಾಲಕಿ, 2 ವರ್ಷದ ಹರೆಯದ ಮಗು, ಉಳ್ಳಾಲ ಪಟೇಲ ಕಂಪೌಂಡಿನ 51ರ ಹರೆಯದ ಗಂಡಸು, ಹರೇಕಳ ಪಂಚಾಯತ್ ಬಳಿಯ 26 ರ ಯುವಕ , ಅಕ್ಕರೆಕೆರೆ ಉಳ್ಳಾಲದ 46 ವರ್ಷದ ಗಂಡಸು , ಮುನ್ನೂರು ಸಂತೋಷನಗರದ 52 ರ ಗಂಡಸು, ತೊಕ್ಕೊಟ್ಟು ಪರಿಸರದ 13ವರ್ಷದ ಬಾಲಕಿ , ಮೇಲಂಗಡಿ ಉಳ್ಳಾಲದ 32 ವರ್ಷದ ಗಂಡಸು, ಉಳ್ಳಾಲ ಹೈದರಾಲಿ ರಸ್ತೆಯ 30 ವರ್ಷದ ಗಂಡಸು, ಮುಕ್ಕಚ್ಚೇರಿ ರಸ್ತೆಯ 48 ವರ್ಷದ ಗಂಡಸು, ಸುಲ್ತಾನ್ ನಗರ ಉಳ್ಳಾಲದ 48ವರ್ಷದ ಗಂಡಸು, ಉಳ್ಳಾಲ ಪದ್ಮಶಾಲಿ ಕಂಪೌಂಡಿನ 44 ವರ್ಷದ ಮಹಿಳೆ , ಮೊಗವೀರಪಟ್ನ ಉಳ್ಳಾಲದ 54 ವರ್ಷದ ಗಂಡಸು , ಸೋಮೇಶ್ವರ ಉಳ್ಳಾಲದ 65 ವರ್ಷದ ಗಂಡಸು, ಅನಿಲಕಂಪೌಂಡ್ ಉಳ್ಳಾಲದ 29ವರ್ಷದ ಗಂಡಸು, 6 ಮತ್ತು 3 ರ ಹರೆಯದ ಬಾಲಕರು, ಕಲ್ಲಾಪು ತೊಕ್ಕೊಟ್ಟು ವಿನ 27ವರ್ಷದ ಮಹಿಳೆ ಸೇರಿ ಸೋಮೇಶ್ವರ, ಮುನ್ನೂರು, ಹರೇಕಳದಲ್ಲಿ ಮೂವರು ಸೇರಿ ಒಟ್ಟು 28 ಮಂದಿಯಲ್ಲಿ ಸೋಂಕು ದೃಢ ಪಟ್ಟಿದೆ.
ಕೋವಿಡ್ ಸೋಂಕು ಉಳ್ಳಾಲದಾದ್ಯಂತ ಮುಂದುವರಿದ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಉಳ್ಳಾಲ ಜಂಕ್ಷನ್, ಕೋಟೆಪುರ ಅಳೇಕಲ, ಮಂಚಿಲ, ಮಾರ್ಗತಲೆ, ಹಳೆಕೋಟೆ ಪ್ರದೇಶಗಳಲ್ಲಿ ಗುರುವಾರ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಸ್ವಯಂ ಪ್ರೇರಿತವಾಗಿ ಬಂದ್ ನಡೆಸಿದರು.
Click this button or press Ctrl+G to toggle between Kannada and English