ಹರೇಕಳ ಗ್ರಾಮ ಹತ್ತು ದಿನ ಸಂಪೂರ್ಣ ಲಾಕ್ ಡೌನ್

8:07 PM, Friday, July 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

Harekalaಕೊಣಾಜೆ: ಮಂಗಳೂರು ತಾಲೂಕಿನ ಹರೇಕಳ ಗ್ರಾಮದಲ್ಲಿ ಈಗಾಗಲೇ 5 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿರುವಂತೆ ಆತಂಕಗೊಂಡಿರುವ ಗ್ರಾಮಸ್ಥರು, ಇನ್ನು ಮುಂದಕ್ಕೆ ಸಾಮುದಾಯಿಕವಾಗಿ ರೋಗ ಹರಡದಂತೆ ತಡಯಲು ಶುಕ್ರವಾರ ಸಭೆ ಸೇರಿ ಇಡೀ ಗ್ರಾಮವನ್ನು ಹತ್ತು ದಿನಗಳ ತನಕ ಸಂಪೂರ್ಣ ಲಾಕ್ ಡೌನ್ ಮಾಡಲು ತೀರ್ಮಾನಿಸಿದ್ದಾರೆ.

ಹರೇಕಳ ಪಂಚಾಯತ್ ಅಧ್ಯಕ್ಷರಾದ ಅನಿತಾ ಡಿಸೋಜ ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ ಡೆಬ್ಬೇಲಿ, ಬಿಜೆಪಿಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು ಮತ್ತು ಪಂಚಾಯತ್ ನ ಇತರ ಸದಸ್ಯರು, ಊರಿನ ಗಣ್ಯರು ಸಭೆ ಸೇರಿ ಜು.6ರಿಂದ ಜುಲೈ 15ರ ತನಕ ಹರೇಕಳ ಗ್ರಾಮದ ಗಡಿಗಳನ್ನು ಬಂದ್ ಮಾಡಿ ಸಂಪೂರ್ಣ ಗ್ರಾಮವನ್ನು ಲಾಕ್ ಡೌನ್ ಮಾಡುವ ಹಾಗೂ ಮುಂಜಾಗ್ರತಾ ಕ್ರಮಗಳ‌ ಬಗ್ಗೆ ತೀರ್ಮಾನ ಮಾಡಿದ್ದಾರೆ.

ಸಭೆಯಲ್ಲಿ ಗ್ರಾಮದ ಯುವಕರನ್ನು ಒಳಗೊಂಡ ಕೊರೋನ ವಾರಿಯರ್ಸ್ ತಂಡ ರಚಿಸಿ, ಸೋಂಕು ಹರಡದಂತೆ ತಡೆಗಟ್ಟುವ ಜವಾಬ್ದಾರಿಯನ್ನು ವಹಿಸಿಲಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English