ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 19,710ಕ್ಕೆ ಏರಿಕೆ, ನಗರದಲ್ಲಿಯೇ 994 ಮಂದಿಗೆ ಸೋಂಕು

11:35 PM, Friday, July 3rd, 2020
Share
1 Star2 Stars3 Stars4 Stars5 Stars
(No Ratings Yet)
Loading...

corona-virus ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೊನಾ ವೈರಸ್ ಆರ್ಭಟ ಮುಂದುವರಿದಿದೆ. ಕಳೆದ 24ಗಂಟೆಯಲ್ಲಿ 1694 ಹೊಸ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 994 ಮಂದಿಯಲ್ಲಿ ಕೊವಿಡ್-19 ದೃಢಪಡುವ ಮೂಲಕ ರಾಜಧಾನಿ ಕರೊನಾ ಹಾಟ್ಸ್ಪಾಟ್ ಆಗಿದೆ.

ಕಳೆದ 24ಗಂಟೆಯಲ್ಲಿ ಕರೊನಾ ಸೋಂಕಿನಿಂದ 21 ಮಂದಿ ಸಾವನ್ನಪ್ಪಿದ್ದು, 471 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು ಕರೊನಾ ಸೋಂಕಿತರ ಸಂಖ್ಯೆ 19,710ಕ್ಕೆ ಏರಿದ್ದು, ಡಿಸ್ಚಾರ್ಜ್ ಆದವರು ಒಟ್ಟು 8805 ಜನರು. ಮೃತಪಟ್ಟವರು 293 ಜನರು ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 10608 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English