ಮಂಗಳೂರು : ಕೋವಿಡ್ ಸೋಂಕಿತನನ್ನು ಯೆನೆಪೋಯ ಆಸ್ಪತ್ರೆ ದಾಖಲು ಗೊಳಿಸದೆ ಆಂಬ್ಯುಲೆನ್ಸ್ ನಲ್ಲೇ ಉಳಿಸಿದ್ದು, ಶಾಸಕರ ಮಧ್ಯಪ್ರವೇಶದ ಬಳಿಕ ಆಸ್ಪತ್ರೆ ವೈದ್ಯರು ಯೆನೆಪೋಯ ಹಸನ್ ಛೇಂಬರ್ಸ್ ಕಟ್ಟಡದಲ್ಲಿರುವ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಮುನ್ನೂರು ಭಾಗದ 25 ರ ಹರೆಯದ 20 ನಿಮಿಷಗಳ ಕಾಲ ಆಂಬ್ಯುಲೆನ್ಸ್ ನಲ್ಲೆ ಉಳಿದಿದ್ದರು.
ದಾರಿಮಧ್ಯೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಎದುರುಗಡೆಯ ಖಾಸಗಿ ಕಟ್ಟಡದ ಎದುರುಗಡೆ ಪಿಪಿಇ ಕಿಟ್ ಧರಿಸಿದ್ದ ಮಂದಿ ಆಂಬ್ಯುಲೆನ್ಸ್ ಜೊತೆಗೆ ನಿಂತಿದ್ದರು. ಇದನ್ನು ಗಮನಿಸಿದ ಖಾದರ್ ಕಾರು ನಿಲ್ಲಿಸಿ, ಆಂಬ್ಯುಲೆನ್ಸ್ ಸಿಬ್ಬಂದಿ ಜತೆಗೆ ಮಾತನಾಡಿದಾಗ ಸೋಂಕಿತ ಆಂಬ್ಯುಲೆನ್ಸ್ ಒಳಗಿರುವುದಾಗಿ ಗೊತ್ತಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಿಂದ ಸಂದೇಶ ಬಾರದ ಹಿನ್ನೆಲೆ ಸೋಂಕಿತನನ್ನು ಒಳಸೇರಿಸಲು ಕೋವಿಡ್ ಚಿಕಿತ್ಸಾ ಕೇಂದ್ರದ ವೈದ್ಯರು ನಿರಾಕರಿಸಿದ್ದರು. ತಕ್ಷಣ ಸ್ಪಂಧಿಸಿದ ಶಾಸಕ ಯು.ಟಿ ಖಾದರ್ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಸೋಂಕಿತನನ್ನು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಶಾಸಕರ ಮಾತಿಗೆ ಸ್ಪಂದಿಸಿ ಸೋಂಕಿತನನ್ನು ತಕ್ಷಣ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದರು.
Click this button or press Ctrl+G to toggle between Kannada and English