ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಪ್ರತಿಯೊಬ್ಬರು ಸಕ್ಷಮರಾಗುವುದು ಆವಶ್ಯಕವಾಗಿದೆ ! – ಪೂ. ರಮಾನಂದ ಗೌಡ

11:15 PM, Sunday, July 5th, 2020
Share
1 Star2 Stars3 Stars4 Stars5 Stars
(No Ratings Yet)
Loading...

Guru poornima ಮಂಗಳೂರು :  ‘ಕೊರೋನಾ ಮಹಾಮಾರಿಯ ಹಾವಳಿ ಮುಗಿದ ನಂತರ ಜೀವನ ಕೂಡಲೇ ಮುಂಚಿ ನಂತಾಗುವುದು’, ಎಂಬ ಭ್ರಮೆಯಲ್ಲಿರದೇ ಜನರು ವಾಸ್ತವಿಕತೆಯನ್ನು ಎದುರಿಸಬೇಕು. ಇಂದು ಪ್ರಗತಿ ಹೊಂದಿದ ಅಮೇರಿಕಾ ಸಹಿತ ಅನೇಕ ರಾಷ್ಟ್ರಗಳು ಆರ್ಥಿಕ ಮುಗ್ಗಟ್ಟನ್ನು ಅನುಭವಿಸುತ್ತಿದೆ. ಅನೇಕ ತಜ್ಞರು ಮುಂದೆ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ಇವುಗಳು ಎದುರಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಚೀನಾದ ವಿಸ್ತಾರವಾದ ಮತ್ತು ಪಾಕಿಸ್ತಾನದ ಜಿಹಾದಿ ಭಯೋತ್ಪಾದನೆಯು ಭಾರತದ ಮೇಲೆ ಯುದ್ಧ ಸಾರಲು ಪ್ರಯತ್ನಿಸುತ್ತಿದೆ. ಅನೇಕ ಮುಸಲ್ಮಾನ ರಾಷ್ಟ್ರಗಳಲ್ಲಿ ಗೃಹಯುದ್ಧಗಳು ನಡೆಯುತ್ತಿವೆ. ರಾಜಧಾನಿ ದೆಹಲಿಯಲ್ಲಿ ನಿರಂತರ ಭೂಕಂಪದ ಆಘಾತವಾಗುತ್ತಿರುವುದರಿಂದ ದೊಡ್ಡ ಭೂಕಂಪದ ಸಾಧ್ಯತೆಯನ್ನು ಹೇಳಿದೆ. ಒಟ್ಟಾರೆ ಜಗತ್ತು ಮೂರನೆ ಮಹಾಯುದ್ಧದ ದಿಕ್ಕಿನತ್ತ ಸಾಗುತ್ತಿದೆ ಹಾಗೂ ನೈಸರ್ಗಿಕ ವಿಪತ್ತುಗಳ ಬಗ್ಗೆ ವಿಚಾರ ಮಾಡಿದಾಗ ಈ ಸಮಯದಲ್ಲಿ ನಮಗೆ ನಮ್ಮೊಂದಿಗೆ ಕುಟುಂಬದವರು ಹಾಗೂ ಹಿಂದೂ ಸಮಾಜದ ಹಾಗೂ ರಾಷ್ಟ್ರದ ರಕ್ಷಣೆಯನ್ನೂ ಮಾಡಲಿಕ್ಕಿದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮನ್ನು ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಸಕ್ಷಮ ಮಾಡುವುದು ಕಾಲಾನುಸಾರ ಸಾಧನೆಯಾಗಿದೆ. ಅದಕ್ಕಾಗಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಯುತ್ತಿರುವ ‘ಆನ್‌ಲೈನ್ ಸತ್ಸಂಗ ಮಾಲಿಕೆ’ಯ ಲಾಭ ಪಡೆಯಬೇಕು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಕರೆ ನೀಡಿದರು.

ಅವರು ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಜಂಟಿಯಾಗಿ ಆಯೋಜಿಸಿದ ‘ಆನ್‌ಲೈನ್ ಗುರುಪೂರ್ಣಿಮಾ ಮಹೋತ್ಸವ’ದಲ್ಲಿ ‘ಆಪತ್ಕಾಲದಲ್ಲಿ ಹಿಂದೂಗಳ ಕರ್ತವ್ಯ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ’ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಕನ್ನಡ, ಮರಾಠಿ, ಹಿಂದಿ, ಆಂಗ್ಲ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ತೆಲುಗು, ತಮಿಳು ಹಾಗೂ ಮಲ್ಯಾಳಂ ಈ ೧೧ ಭಾಷೆಗಳಲ್ಲಿ ಆನ್‌ಲೈನ್ ಮೂಲಕ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು. ಈ ಮಹೋತ್ಸವವನ್ನು ಶ್ರೀ ವ್ಯಾಸಪೂಜೆ ಮತ್ತು ಶ್ರೀ ಗುರುಪೂಜೆಯಿಂದ ಪ್ರಾರಂಭಿಸಲಾಯಿತು. ಯೂ-ಟ್ಯೂಬ್ ಮತ್ತು ಫೇಸ್‌ಬುಕ್ ಮೂಲಕ ಈ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ದೇಶ-ವಿದೇಶಗಳಲ್ಲಿ ಪ್ರಕ್ಷೇಪಣೆ ಮಾಡಲಾಯಿತು. ಈ ಕಾರ್ಯಕ್ರಮದಿಂದ ವಿಶ್ವಾದ್ಯಂತ ಜಿಜ್ಞಾಸೂಗಳು ಹಾಗೂ ಸಾಧಕರು ಲಾಭ ಪಡೆದರು. ಫೇಸಬುಕ್ ಮೂಲಕ ೧೯೩೦೦ ಹಾಗೂ ಯೂಟ್ಯೂಬ್ ಮೂಲಕ ೨೫೦೦ ಕ್ಕಿಂತ ಜನರು ಇದನ್ನು ವೀಕ್ಷಿಸಿದರೆ ೮೨ ಸಾವಿರ ರೀಚ್ ಸಿಕ್ಕಿತು.

ಅವರು ಮುಂದೆ ಮಾತನಾಡುತ್ತಾ, “ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಕಳೆದ ಕೆಲವು ವರ್ಷಗಳಿಂದ ಮುಂಬರುವ ಆಪತ್ಕಾಲದ ಬಗ್ಗೆ ಮತ್ತು ಅದರಿಂದ ಪಾರಾಗಲು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ‘ನ ಮೇ ಭಕ್ತ ಪ್ರಣಶ್ಯತಿ |’ ಅಂದರೆ ‘ನನ್ನ ಭಕ್ತರ ನಾಶವಾಗುವುದಿಲ್ಲ. ಈಶ್ವರನ ಭಕ್ತಿ ಮಾಡಿದರೆ ಮಾತ್ರ ಈಶ್ವರನು ಸಂಕಟಕಾಲದಲ್ಲಿ ನಮ್ಮ ರಕ್ಷಣೆಯನ್ನು ಖಂಡಿತವಾಗಿಯೂ ಮಾಡುವನು !’ ಧರ್ಮಕ್ಕೆ ಗ್ಲಾನಿ ಬಂದರೆ ಪಾಪ ಹೆಚ್ಚಾಗುತ್ತದೆ. ಅದರಿಂದ ಪೃಥ್ವಿಯ ಮೇಲಿನ ಪಾಪ ಮಾಡುವವರ ಪ್ರಮಾಣ ಕಡಿಮೆಯಾಗಲು ಆಪತ್ಕಾಲ ಮತ್ತು ಯುದ್ಧಕಾಲಗಳು ಬರುತ್ತಿರುತ್ತವೆ. ಈ ಆಪತ್ಕಾಲದ ನಂತರ ಉದ್ಭವಿಸುವ ಅನುಕೂಲ ವಾತಾವರಣದಲ್ಲಿ ರಾಮರಾಜ್ಯದ ಅಂದರೆ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು ಮತ್ತು ಪುನಃ ಸಂಪತ್ಕಾಲ ಆರಂಭವಾಗುವುದು ಅಂದರೆ ಒಳ್ಳೆಯ ದಿನಗಳು ಬರುವುದು. ಆದರೂ ಮುಂಬರುವ ಆಪತ್ಕಾಲದಿಂದ ಪಾರಾಗಲು ಕಾಲಾನುಸಾರ ಯೋಗ್ಯ ಸಾಧನೆ ಮಾಡುವುದು ಯೋಗ್ಯವಾಗಿದೆ. ಪ್ರತಿದಿನ ಕುಲದೇವತೆಯ/ಇಷ್ಟದೇವತೆಯ ನಾಮಜಪ ಮಾಡುವುದು, ಈಶ್ವರನಿಗೆ ಪ್ರಾರ್ಥನೆ ಮಾಡಿ ಪ್ರತಿಯೊಂದು ಕೃತಿ ಮಾಡುವುದು ಆವಶ್ಯಕವಾಗಿದೆ.

ಈ ವೇಳೆ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ಸನಾತನದ ‘ಧರ್ಮ ಕಾರ್ಯಕ್ಕಾಗಿ ಜಾಹೀರಾತು ಮುಂತಾದ ಅರ್ಪಣೆ ಪಡೆಯುವುದು, ಇದು ಸಮಷ್ಟಿ ಸಾಧನೆ !’ ಎಂಬ ಹೆಸರಿನ ಗ್ರಂಥವನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಮಂಗಲಹಸ್ತದಿಂದ ಪ್ರಕಾಶನ ಮಾಡಲಾಯಿತು.

ಶ್ರೀ. ವಿನೋದ ಕಾಮತ,
ರಾಜ್ಯ ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ
(ಸಂಪರ್ಕ : 9342599299 )

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English