ಕರೊನಾ ದಿಂದಾಗಿ ಬ್ರಿಟನ್ ವಿಶ್ವವಿದ್ಯಾಲಯಗಳಿಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆ

1:01 PM, Tuesday, July 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

london Educationಲಂಡನ್: ಬ್ರಿಟನ್ ವಿಶ್ವವಿದ್ಯಾಲಯಗಳೀಗ ಕರೊನಾ ದಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕುವ ಆತಂಕಕ್ಕೀ ಡಾಗಿವೆ. ಕರೊನಾ ಸೋಂಕು ಜಾಗತಿಕವಾಗಿ ಹಬ್ಬಿದ ಬಳಿಕ ವಿದ್ಯಾಭ್ಯಾಸಕ್ಕಾಗಿ ಬ್ರಿಟನ್ಗೆ ಆಗಮಿಸುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಇದಂದಾಗಿ ಸುಮಾರು 13 ವಿಶ್ವವಿದ್ಯಾಲಯಗಳು -13 ಸಾವಿರ ಕೋಟಿಯಿಂದ 40 ಸಾವಿರ ಕೋಟಿ ರೂ. ವರೆಗೆ ನಷ್ಟಕ್ಕೆ ಗುರಿಯಾಗುವ ಅಂದಾಜಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ಸಂಕಷ್ಟದಿಂದ ಪಾರಾಗಲು ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಿರೀಕ್ಷಿಸುತ್ತಿವೆ.

ಸೆಪ್ಟೆಂಬರ್ನಲ್ಲಿ ಕಾಲೇಜಿಗೆ ನೋಂದಣಿ ಶುರುವಾಗುವ ವೇಳೆಗೆ ಶೇ.50 ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾದರೂ ಅಚ್ಚರಿ ಇಲ್ಲ ಎಂದು ಬ್ರಿಟನ್ನ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಮಿತ್ ತಿವಾರಿ ತಿಳಿಸಿದ್ದಾರೆ. ಸ್ಥಳೀಯ ವಿದ್ಯಾರ್ಥಿಗಳು ಪಾವತಿಸುವ ಶುಲ್ಕಕ್ಕಿಂತ 3 ಪಟ್ಟು ಹೆಚ್ಚಿನ ಶುಲ್ಕ ಪಾವತಿಸುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಕೊರತೆಯಿಂದಾಗಿ ಬ್ರಿಟನ್ ವಿವಿಗಳ ಪರಿಸ್ಥಿತಿ ಕಳವಳಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಿಟನ್ನಲ್ಲಿ ಓದುವ ವಿದ್ಯಾರ್ಥಿಗಳು ಭಾರಿ ಶುಲ್ಕ ನೀಡಿ ವಿದ್ಯಾಭ್ಯಾಸ ಮುಂದುವರಿಸಬೇಕಿಲ್ಲ. ಸಂಪೂರ್ಣವಾಗಿ ಆನ್ಲೈನ್ನಲ್ಲೇ ಶಿಕ್ಷಣ ನೀಡಲು ವ್ಯವಸ್ಥೆಯಾಗುತ್ತಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘಟನೆ ವಕ್ತಾರೆ ಸನಮ್ ಅರೋರಾ ತಿಳಿಸಿದ್ದಾರೆ. ಮತ್ತೊಂದು ಮೂಲಗಳ ಪ್ರಕಾರ, ಆನ್ಲೈನ್ ಶಿಕ್ಷಣ ಜಾರಿಯಾದಲ್ಲಿ ನಾವು ನೋಂದಣಿ ಆಗಲು ಬಯಸುವುದಿಲ್ಲ ಎಂದು ಶೇ.80 ಭಾರತೀಯ ವಿದ್ಯಾರ್ಥಿಗಳು ಸಮೀಕ್ಷೆಯೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.50

ಮಂದಿ ಆಫ್ಲೈನ್ನಲ್ಲೇ ತಾವಿರುವ ಸ್ಥಳದಿಂದಲೇ ವಿದ್ಯಾಭ್ಯಾಸ ಮುಂದುವರಿಸಲು ಒಲವು ತೋರಿದ್ದಾರೆನ್ನಲಾಗಿದೆ. ಕಳೆದ ವರ್ಷ 37,450 ಭಾರತೀಯ ವಿದ್ಯಾರ್ಥಿಗಳು ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ನೋಂದಣಿ ಆಗಿದ್ದರು.

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English