ಪುತ್ತೂರು : ಹಿಂಬದಿ ಮನೆಯ ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪುತ್ತೂರಿನ ಪರ್ಲಡ್ಕ ಸಮೀಪ ಗೋಳಿತೊಟ್ಟು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಕೆಎಸ್ಆರ್ಟಿಸಿ ಬಸ್ಸು ಚಾಲಕ ಚಂದ್ರ ಶೇಖರ್ ರವರ ಪತ್ನಿ ವಸಂತಿ (49) ಮೃತಪಟ್ಟ ಮಹಿಳೆ.
ಇವರು ಮನೆಯ ಹಿಬಂದಿಯ ಜಗಲಿಯಲ್ಲಿ ಬೀಡಿ ಕಟ್ಟುತ್ತಿದ್ದಾಗ ಮೇಲ್ಭಾಗದಲ್ಲಿನ ಮನೆಯ ಅವರಣ ಗೋಡೆ ಇವರ ಮೇಲೆ ಬಿದ್ದ ಕಾರಣ ದುರ್ಘಟನೆ ನಡೆದಿದೆ.
ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಕೌಂಪಾಡ್ ಗೋಡೆ ಕುಸಿತವಾಗಿದೆ ಎನ್ನಲಾಗಿದೆ.
Click this button or press Ctrl+G to toggle between Kannada and English