ಕೊರೊನಾ ಸೋಂಕು : ದಕ್ಷಿಣ ಕನ್ನಡ ಜಿಲ್ಲೆ- 83, ಉಡುಪಿ ಜಿಲ್ಲೆ- 28, ಕಾಸರಗೋಡು – 13

11:45 PM, Tuesday, July 7th, 2020
Share
1 Star2 Stars3 Stars4 Stars5 Stars
(No Ratings Yet)
Loading...

corona-districtಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 83 ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,359  ಕ್ಕೆ ಏರಿಕೆಯಾಗಿದೆ.

ಮಂಗಳವಾರ ಓರ್ವ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು ಜಿಲ್ಲೆಯಲ್ಲಿ ಈವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ.

83 ಮಂದಿಯ ಪೈಕಿ 48 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 20 ಐಎಲ್‌ಐ ಹಾಗೂ 1 ಎಸ್‌ಎಆರ್‌ಐ ಪ್ರಕರಣವಾಗಿದೆ. ಇಬ್ಬರು ಚಿಕ್ಕಮಗಳೂರು ಜಿಲ್ಲೆಗೆ ಹೋಗಿ ಬಂದಿರುವವರಾಗಿದ್ದಾರೆ. 3 ಮಂದಿಗೆ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ಈವರೆಗೆ 21881 ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು 21,395 ದ್ರವದ ಮಾದರಿಯ ವರದಿ ಲಭಿಸಿದೆ. ಈ ಪೈಕಿ 1,359 ಪಾಸಿಟಿವ್‌ ಆಗಿದ್ದರೆ 20,036 ನೆಗೆಟಿವ್‌ ಆಗಿದೆ.

ಇಂದು 99 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 683  ಮಂದಿ ಗುಣಮುಖರಾಗಿದ್ದಾರೆ. 650 ಸಕ್ರಿಯ ಕೊರೊನಾ ಪ್ರಕರಣಗಳಾಗಿವೆ. ಹಾಗೆಯೇ ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮಂಗಳವಾರ 28 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1390ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 19773 ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಈ ಪೈಕಿ 1390 ವರದಿ ಪಾಸಿಟಿವ್ ಆಗಿದೆ. 15756 ವರದಿಗಳು ನೆಗೆಟವ್ ಬಂದಿದ್ದು ಇನ್ನು 2627 ವರದಿಗಳ ಫಲಿತಾಂಶ ಬರಬೇಕಾಗಿದೆ. ಮಂಗಳವಾರ 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಯಾಗಿದ್ದು ಈವರೆಗೆ 1,023 ಮಂದಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮೂವರು ಕೊರೊನಾಗೆ ಬಲಿಯಾಗಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 13 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಪೈಕಿ 8 ಮಂದಿ ವಿದೇಶದಿಂದ ಬಂದವರಾಗಿದ್ದರೆ, ಇಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಹಾಗೆಯೇ ಮಂಗಳೂರಿಗೆ ತೆರಳಿ ಮರಳಿದ್ದ ಇಬ್ಬರು ಹಾಗೂ ಮಂಗಳೂರುನಲ್ಲಿ ವಾಸ್ತವ್ಯ ಇದ್ದು ಊರಿಗೆ ಮರಳಿದ್ದ ಗರ್ಭಿಣಿಗೆ ಸೋಂಕು ಪಾಸಿಟಿವ್‌ ಆಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English