ಮಂಗಳೂರು : ಸುರತ್ಕಲ್ ಪರಿಸರದಲ್ಲಿ ಬುಧವಾರ ಒಟ್ಟು 45 ಮಂದಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ. ಇದರಲ್ಲಿ ಸಿಐಎಸ್‌ಎಫ್ ಯೋಧರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬುಧವಾರ ದ.ಕ. ಜಿಲ್ಲೆಯಲ್ಲಿ 183 ಮಂದಿಗೆ ಕೋವಿಡ್ ದೃಢವಾಗಿದ್ದು, ಅದರಲ್ಲಿ ಎಂಆರ್‌ಪಿಎಲ್ ಪರಿಸರದ ಸಿಐಎಸ್‌ಎಫ್ ಯೂನಿಟ್‌ನ 30 ಮಂದಿಗೆ ದೃಢವಾಗಿದೆ. ಇವರನ್ನು ರ್‍ಯಾಂಡಮ್ ಪರೀಕ್ಷೆಗೆ ಒಳಪಡಿಸಿದಾಗ ಹೆಚ್ಚಿನವರಿಗೆ ಸೋಂಕು ತಗಲಿರುವುದು ಗೊತ್ತಾಗಿದೆ.
ಉಳಿದಂತೆ ಸುರತ್ಕಲ್ ಇಡ್ಯಾದ ವಸತಿ ಸಮುಚ್ಚಯ ಮತ್ತು ಕಾಟಿಪಳ್ಳದ ಮೂವರು ಸಹಿತ 15 ಮಂದಿಗೆ ಸೋಂಕು ತಗಲಿದೆ. ಸುರತ್ಕಲ್‌ನಲ್ಲಿ ರ್‍ಯಾಂಡಮ್ ಪರೀಕ್ಷೆಗೆ ಒಳಗಾದ ಹೊರಗಿನ ಪ್ರದೇಶದ ಕೆಲವರಿಗೂ ಸೋಂಕು ತಗಲಿರುವುದು ಗೊತ್ತಾಗಿದೆ.
Click this button or press Ctrl+G to toggle between Kannada and English