ಬಂಟ್ವಾಳ ತಾಲೂಕಿನ ಅಕ್ಕ ಪಕ್ಕದ ಮನೆಯ 16 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆ

10:17 PM, Friday, July 10th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bantwal Covid ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ಇಂದು ಒಂದೇ ದಿನ 16 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.

ಗ್ರಾಮದ ಒಂದು ಮನೆಯ 12 ಜನರಿಗೆ ಹಾಗೂ ಇನ್ನೊಂದು ಮನೆಯ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಎರಡೂ ಮನೆಗಳ ಸದಸ್ಯರಿಗೆ ಸೋಂಕು ದೃಢಪಟ್ಟಿತ್ತು. ಇವರ ಸಂಪರ್ಕದ ಕಾರಣದಿಂದ ಸೋಂಕು ದೃಢವಾಗಿದೆ ಎನ್ನಲಾಗಿದೆ.

ತಾಲೂಕಿನ ಉಳಿದ ಪ್ರಕರಣಗಳ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ತಾಲೂಕಿನಲ್ಲಿ ಜು. ಎಂಟರಂದು 12, ಜು. ಒಂಬತ್ತರಂದು 26 ಪ್ರಕರಣಗಳು ದೃಢಪಟ್ಟಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English