ಕೊರೋನ ಪಾಸಿಟಿವ್ ಪ್ರಕರಣಗಳು : ದಕ್ಷಿಣ ಕನ್ನಡ ಜಿಲ್ಲೆ-139 , ಉಡುಪಿ ಜಿಲ್ಲೆ-34, ಕಾಸರಗೋಡು ಜಿಲ್ಲೆ-17

11:46 PM, Friday, July 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

corona ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಸೋಂಕಿತ ಪಾಸಿಟಿವ್ ಪ್ರಕರಣಗಳು ಒಂದೇದಿನ ಬರೋಬ್ಬರಿ 139 ದೃಢಪಟ್ಟಿವೆ.

ಈ  ಪ್ರಕರಣಗಳಲ್ಲಿ ಸೋಂಕಿನ ಮೂಲವೇ ಪತ್ತೆಯಾಗಿಲ್ಲ.  ಆಸ್ಪತ್ರೆಗೆ ದಾಖಲಾಗಿದ್ದ 51 ಮಂದಿ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. 15 ಪ್ರಕರಣಗಳಲ್ಲಿ ಸೋಂಕು ಮೂಲ ಇನ್ನೂ ಪ್ರಗತಿಯಲ್ಲಿದ್ದರೆ, ಉಳಿದವು ಹೆಚ್ಚಿನರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುವವರಾಗಿದ್ದಾರೆ.

ಮಂಗಳೂರು ನಗರದ ಸುತ್ತಮುತ್ತಲಿನಲ್ಲಿ ಪ್ರದೇಶದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೊರೋನ ಸೋಂಕು ಪ್ರಕರಣಗಳು ಕಂಡುಬಂದಿವೆ. ಇದರಿಂದ ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಮೂಡಿದೆ.

ನಗರದ ಕಂಕನಾಡಿ, ಕುದ್ರೋಳಿ, ಫಳ್ನೀರ್, ಗೋರಿಗುಡ್ಡ, ಕೋಡಿಕಲ್, ಪೊಲೀಸ್ ಲೈನ್, ಬರ್ಕೆ, ಕದ್ರಿ, ಕೋಡಿಯಾಲ್‌ಬೈಲ್, ಬಿಜೈ, ಕಾವೂರು, ಮಂಗಳೂರು ರೈಲ್ವೆ ಕ್ವಾಟ್ರಸ್, ಲ್ಯಾಂಡ್‌ಲಿಂಕ್ಸ್, ಬಂಟ್ಸ್ ಹಾಸ್ಟೆಲ್, ಪದವಿನಂಗಡಿ, ಬೆಂಗ್ರೆ ಕಸಬ, ಬೋಳೂರು, ಕುಂಟಿಕಾನ, ಮುಲ್ಕಿ ಕಿಲ್ಪಾಡಿ, ಚೊಕ್ಕಬೆಟ್ಟು, ಕಾಟಿಪಳ್ಳ, ಸುರತ್ಕಲ್, ವಾಮಂಜೂರು, ಕೈಕಂಬ, ಪಡುಮಾರ್ನಾಡು, ಬಸ್ತಿಪಡ್ಪು, ತೌಡುಗೋಳಿ, ಹರೇಕಳ, ಅಂಬ್ಲಮೊಗರು, ಸೋಮೇಶ್ವರ, ಕೋಟೆಕಾರ್, ಅಜ್ಜಿನಡ್ಕ, ಬಿಸಿ ರೋಡ್, ಪಾಣೆಮಂಗಳೂರು, ತುಂಬೆ, ಪುದು, ಸಜಿಪಮೂಡ, ಕಕ್ಕೆಪದವು, ಪೆರಂಕಿ, ಕೈಕಂಬ, ಬೆಳ್ತಂಗಡಿ, ಸುಳ್ಯದ ವ್ಯಕ್ತಿಗಳಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮೃತರ ಪೈಕಿ 7 ಮಂದಿ ಪುರುಷರು ಹಾಗೂ ಓರ್ವ ಮಹಿಳೆ ಸೇರಿಕೊಂಡಿದ್ದಾರೆ. 35, 65, 67, 48, 57, 68 ಮತ್ತು 55 ವರ್ಷದ ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ, 58 ವರ್ಷದ ವೃದ್ದೆ ಸೋಂಕಿನಿಂದ ಮೃತಪಟ್ಟಿದ್ದಾರೆ. ಆ ಮೂಲಕ ದ.ಕ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 38ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಸೋಂಕಿನಿಂದ 753 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 34 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ 1477ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು 707 ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 673 ಜನರ ವರದಿ ನೆಗಟಿವ್ ಬಂದಿದೆ. ಉಳಿದ 34 ಜನರ ಗಂಟಲು ದ್ರವ ಮಾದರಿ ಪಾಸಿಟಿವ್ ವರದಿಯಾಗಿದೆ.

ಕಾಸರಗೋಡು  ಜಿಲ್ಲೆಯಲ್ಲಿ ಶುಕ್ರವಾರ 17 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು, ಈ ಪೈಕಿ 11 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English