ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಎಂಎಲ್ಎ ಮಗನನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆ ಕೆಲಸವನ್ನೇ ಬೇಕಾಯಿತಂತೆ!

3:56 PM, Sunday, July 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sunithayadavಸೂರತ್ : ಕರೊನಾ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿ  ವಾಹನದಲ್ಲಿ ಮಾಸ್ಕ್ ಧರಿಸದೆ ತೆರಳುತ್ತಿದ್ದ ಐವರನ್ನು ಪ್ರಶ್ನಿಸಿದಕ್ಕೆ ಮಹಿಳಾ ಪೊಲೀಸ್ ಪೇದೆಯೋರ್ವರು ಕೆಲಸವನ್ನೇ ಬಿಡಬೇಕಾದ ಘಟನೆ ಗುಜರಾತ್ನ ಸೂರತ್ನಲ್ಲಿ ನಡೆದಿದೆ.

ರಾತ್ರಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೋರ್ವರು ಎಂಎಲ್ಎ ಎಂದು ನಾಮಫಲಕ ಹಾಕಿ ಮಾಸ್ಕ್ ಧರಿಸದೆ ವಾಹನದಲ್ಲಿ ಸಂಚರಿಸುತ್ತಿದ್ದ ಐವರನ್ನು ಪ್ರಶ್ನಿಸಿದರು, ಆದರೆ ಹಾಗೇ ಪ್ರಶ್ನೆ ಮಾಡಿದ್ದೇ ತಪ್ಪಾಗಿ ಹೋಯ್ತು ಅವರಿಗೆ ಕೆಲಸಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿಗೆ ಬಂತು.  ಅವರ ಮೇಲಾಧಿಕಾರಿ ಆಕೆಯನ್ನು ರಾಜೀನಾಮೆ ಕೊಡಿಸುವಂತೆ ಮಾಡಿದ್ದರಂತೆ.

ಗುಜರಾತ್ನ ಆರೋಗ್ಯ ಸಚಿವರಾದ ಕುಮಾರ್ ಕನನಿ ಅವರ ಮಗ ಪ್ರಕಾಶ್ ಮತ್ತು ಮಹಿಳಾ ಪೇದೆ ಸುನಿತಾ ಯಾದವ್ ನಡುವಿನ ಸಂಭಾಷಣೆಯ ಆಡಿಯೋ ಕ್ಲಿಪ್ ಕೂಡ ವೈರಲ್ ಆಗಿದೆ. ರಾತ್ರಿ 10.30 ಗಂಟೆಗೆ ಮಾಸ್ಕ್ ಧರಿಸದೆ ವಾಹನದಲ್ಲಿ ಬಂದ ಪ್ರಕಾಶ್ ಅವರನ್ನು ಸುನಿತಾ ಪ್ರಶ್ನೆ ಮಾಡಿದಾಗ, ತಿರುಗಿ ಆಕೆಗೆ ಬೆದರಿಕೆಯೊಡ್ಡಿದ್ದು, ನಾನ್ಯಾರು ಗೊತ್ತಾ ಎಂದು ಧಮ್ಕಿ ಹಾಕಿದ್ದು ಆಡಿಯೋದಿಂದ ಬಹಿರಂಗವಾಗಿದೆ.

ಪ್ರಕಾಶ್ ಬೆದರಿಕೆಯಿಂದ ಏನೂ ಮಾಡಲು ತೋಚದ ಪೇದೆ ಸುನೀತಾ ಯಾದವ್, ಅಲ್ಲಿಯೇ ಇದ್ದ ತನ್ನ ಮೇಲಧಿಕಾರಿಯನ್ನು ಕರೆದು ವಿಷಯ ಹೇಳಿದ್ದಾರೆ.

ಆದರೆ ಆ ಪೊಲೀಸ್ ಅಧಿಕಾರಿ ಕೂಡ ಸುನಿತಾ ಅವರ ವಿರುದ್ಧವೇ ರೇಗಿ, ಕಠಿಣವಾಗಿ ಮಾತನಾಡಿದ್ದಾರೆ. ಇಲ್ಲಿಂದ ಹೊರಡಿ, ನೀವು ರಿಸೈನ್ ಮಾಡಿ ಎಂದು ಹೇಳಿದ್ದಾರೆ. ಇದರಿಂದಾಗಿ ಮಹಿಳಾ ಪೇದೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.

ಆಡಿಯೋ ಕ್ಲಿಪ್ ನನ್ನ ಗಮನಕ್ಕೂ ಬಂದಿದೆ. ವಿಚಾರಣೆಗೆ ಆದೇಶಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೂರತ್ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ರಾತ್ರಿ 10.30 ರ ಸಮಯದಲ್ಲಿ ಮಾಸ್ಕ್ ಧರಿಸದೆ ಐವರು ಒಂದೇ ಕಾರಿನಲ್ಲಿ ಬರುತ್ತಿದ್ದರು. ಆಗ ಸುನಿತಾ ಯಾದವ್ ಕಾರನ್ನು ನಿಲ್ಲಿಸಿ, ಮಾಸ್ಕ್ ಧರಿಸದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಪ್ರಕಾಶ್, ನಾವು ಯಾರೆಂದುಕೊಂಡಿದ್ದೀರಿ..ನಮ್ಮ ಅಧಿಕಾರ ಉಪಯೋಗಿಸಿ ನೀವು ಇನ್ನೂ 365 ದಿನ ಇಲ್ಲಿಯೇ ನಿಂತಿರುವಂತೆ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಸುನಿತಾ ಅವರೂ ಕೂಡ ಸ್ವಲ್ಪ ಧ್ವನಿ ಎತ್ತರಿಸಿ, ಹಾಗೆಲ್ಲ ನಿಮ್ಮ ಬೆದರಿಕೆಗೆ ಹೆದರಲು ನಾನು ನಿಮ್ಮ ಗುಲಾಮಳಲ್ಲ ಎಂದು ಕೂಗಿದ್ದಾರೆ. ಅಷ್ಟಾದ ಬಳಿಕ ತನ್ನ ಮೇಲಧಿಕಾರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಸುನಿತಾ ಪರ ನಿಲ್ಲದೆ, ಅವಳಿಗೇ ರಾಜೀನಾಮೆ ಕೊಡುವಂತೆ ಹೇಳಿದ್ದಾರೆ. ಇದೆಲ್ಲವೂ ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ತನಿಖೆ ನಡೆಸುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಕುಮಾರ್ ಕನನಿ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗ ಅವನ ಸ್ನೇಹಿತನೊಟ್ಟಿಗೆ ಸಿವಿಲ್ ಆಸ್ಪತ್ರೆಗೆ ತೆರಳುತ್ತಿದ್ದ. ಅಲ್ಲಿ ಅವನ ಮಾವನಿಗೆ ಕರೊನಾ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಅವರ ಸ್ಥಿತಿ ಗಂಭೀರವಾಗಿತ್ತು. ಹಾಗಾಗಿ ಅರ್ಜೆಂಟ್ನಲ್ಲಿ ತೆರಳುತ್ತಿದ್ದ ಎಂದು ತಿಳಿಸಿದ್ದಾರೆ.

ಅವನು ನನ್ನದೇ ವಾಹನದಲ್ಲಿ ಹೋಗುತ್ತಿದ್ದ. ಕಾರಿನ ಮೇಲೆ ಎಂಎಲ್ಎ ಎಂದು ಬರೆದುಕೊಂಡಿದ್ದರೂ ಪೊಲೀಸ್ ಪೇದೆ ಯಾಕೆ ತಡೆಯಬೇಕಿತ್ತು. ನನ್ನ ಮಗ ಏನು ಹೇಳುತ್ತಿದ್ದಾನೆ ಎಂಬುದನ್ನು ಕೇಳುವ ತಾಳ್ಮೆ ಅವಳಿಗೆ ಇರಬೇಕಿತ್ತು ಎಂದಿದ್ದಾರೆ.

ಆದರೆ ಅಪ್ಪ ಎಂಎಲ್ಎ ಆದರೆ ಮಗನಿಗೆ ಅದೇ ಸ್ಥಾನಮಾನ ನೀಡಬೇಕೆ, ಅಥವಾ ಎಂಎಲ್ಎ ಆದವ ಸರಕಾರದ ನಿಯಮಗಳನ್ನೇ ಬದಲಿಸಬಹುದೇ ಎಂಬುದು ಪ್ರಶ್ನೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English