ಕೋವಿಡ್ ಸೋಂಕಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಲಿ, ಜುಲೈ 14 ರಿಂದ ಮಧ್ಯಾಹ್ನ ಸ್ವಯಂಪ್ರೇರಿತ ಬಂದ್

11:15 PM, Sunday, July 12th, 2020
Share
1 Star2 Stars3 Stars4 Stars5 Stars
(4 rating, 1 votes)
Loading...

 Corona deathಬೆಳ್ತಂಗಡಿ : ಕೋವಿಡ್ ಸೋಂಕಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮೊದಲ ಬಲಿ ಆಗಿದ್ದು ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಸುಮಾರು 60ವರ್ಷ ಪ್ರಾಯದ ವೃದ್ಧ ರವಿವಾರ ಮುಂಜಾನೆ ತಮ್ಮ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.

ಅನಾರೋಗ್ಯದ ಕಾರಣದಿಂದ ಎರಡು ದಿನದ ಹಿಂದೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅದರ ವರದಿ ಕೈ ಸೇರಿದ್ದು ಸೋಂಕು ದೃಢ ಪಟ್ಟಿತ್ತು.

ಮೃತ ದೇಹ ಮನೆಯಲಿದ್ದು ಸ್ಥಳಕ್ಕೆ ಪೊಲೀಸ್, ತಹಶೀಲ್ದಾರ್, ವೈದ್ಯರು ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಂಡಿಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆ ಪ್ರದೇಶಕ್ಕೆ ಪ್ರವೇಶ ನಿಷೇಧಿಸಲಾಗಿದೆ.

ಬೆಳ್ತಂಗಡಿ ಪ್ರತಿನಿತ್ಯ ಕನಿಷ್ಠ 3ರಿಂದ 5 ಪ್ರಕರಣ ದಾಖಲಾಗುತ್ತಿದೆ. ಈ ನಿಟ್ಟಿನಲ್ಲಿ ವರ್ತಕರು, ಆಟೋ, ರಿಕ್ಷಾ ಚಾಲಕರು ಜು.14 ರ ಬಳಿಕ ಮಧ್ಯಾಹ್ನ 2 ರಿಂದ ಸ್ವಯಂಪ್ರೇರಿತ ಬಂದ್ ನಡೆಸಲು ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ನಿರ್ಧರಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English