ಕೊರೋನಾ ಸೋಂಕು : ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 196, ಉಡುಪಿ ಜಿಲ್ಲೆ 41

11:34 PM, Sunday, July 12th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

corona positive ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ  196 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ 2230ಕ್ಕೆ ಏರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 1308 ಸಕ್ರೀಯ ಪ್ರಕರಣಗಳಿವೆ. ಮತ್ತೆ 94 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಆ ಮೂಲಕ 876 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ಸೋಂಕಿಗೆ 5 ಮಂದಿ ಮೃತಪಟ್ಟಿದ್ದು, ಮೃತರಲ್ಲಿ ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ಧ, ಪುತ್ತೂರಿನ‌ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿ , ಮಂಗಳೂರಿನ ಉರ್ವಾಸ್ಟೋರ್ ನಿವಾಸಿ 72 ವರ್ಷದ ವೃದ್ಧ, ಮಂಗಳೂರಿನ ಬಳ್ಳಾಲ್ ಭಾಗ್ ನಿವಾಸಿ 60 ವರ್ಷದ ವೃದ್ಧೆ, ಹಾಗೂ ಮಂಗಳೂರಿನ‌ ಬಂದರು ನಿವಾಸಿ 68 ವರ್ಷದ ವೃದ್ಧೆ ಸೋಂಕಿಗೆ ಬಲಿಯಾಗಿದ್ದಾರೆ.

ರವಿವಾರದಂದು ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 91 ಮಂದಿಯಲ್ಲಿ ಐಎಲ್ ಐ ಪ್ರಕರಣ ದೃಢಪಟ್ಟಿದೆ. 16 ಮಂದಿಯಲ್ಲಿ ಸಾರಿ ಪ್ರಕರಣ ಪತ್ತೆಯಾಗಿದೆ. 10 ಮಂದಿ ವಿದೇಶದಿಂದ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗಿದೆ. 57 ಪ್ರಕರಣಗಳ ಮೂಲ ಪತ್ತೆಹಚ್ಚಲಾಗುತ್ತಿದೆ. ಇಬ್ಬರಲ್ಲಿ ಪ್ರಿ ಡಿಲೆವರಿ ಸ್ಯಾಂಪಲ್ ಪಾಸಿಟಿವ್ ಪತ್ತೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಭಾನುವಾರ 41 ಪಾಸಿಟಿವ್ ಹಾಗೂ 573 ಮಂದಿಗೆ ನೆಗೆಟಿವ್‌‌‌ ‌ಪ್ರಕರಣ ವರದಿಯಾಗಿದೆ. ಈ ಪೈಕಿ ಮುಂಬೈಯಿಂದ 2, ಸೌದಿಯಿಂದ 1, ಅಂತರ್‌ ಜಿಲ್ಲೆಯಿಂದ ಪ್ರಯಾಣ ಮಾಡಿದವರಲ್ಲಿ 632 ಮಂದಿಗೆ ಪಾಸಿಟಿವ್‌‌‌ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಸೋಂಕುತಗುಲಿದೆ. ಇದರಲ್ಲಿ 26 ಪುರುಷರು, 11 ಮಹಿಳೆಯರು ಸೇರಿದಂತೆ 4 ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. 26 ಮಂದಿ ಉಡುಪಿ, 11 ಮಂದಿ ಕುಂದಾಪುರ ಹಾಗೂ 4 ಮಂದಿ ಕಾರ್ಕಾಳಕ್ಕೆ ಸೇರಿದವರಾಗಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English