ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ ತಿರುವಾಂಕೂರು ರಾಜನಮನೆತನಕ್ಕೆ ಸೇರಿದ್ದು ಸುಪ್ರೀಂ ಕೋರ್ಟ್ ತೀರ್ಪು

2:59 PM, Monday, July 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Triuvankuruಹೊಸದಿಲ್ಲಿ: 18ನೇ ಶತಮಾನದ ಕೇರಳದ ಐತಿಹಾಸಿಕ, ಶ್ರೀಮಂತ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಸಂಪತ್ತು ಮತ್ತು ಆಡಳಿತದ ಹಕ್ಕು ತಿರುವಾಂಕೂರು ರಾಜನಮನೆತನಕ್ಕೆ ಸೇರಿದ್ದು ಎಂಬುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಮಹತ್ವದ ತೀರ್ಪುನೀಡಿದೆ.

ಕೇರಳ ಹೈಕೋರ್ಟ್‌ 2011ರಲ್ಲಿ ದೇವಸ್ಥಾನದ ಆಡಳಿತ ಮತ್ತು ಸಂಪತ್ತಿನ ನಿರ್ವಹಣೆಗಾಗಿ ಟ್ರಸ್ಟ್‌ ಸ್ಥಾಪಿಸುವಂತೆ ರಾಜ್ಯ ಸರಕಾರಕ್ಕೆ ನೀಡಿದ್ದ ನಿರ್ದೇಶನವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.

ಪದ್ಮನಾಭಸ್ವಾಮಿ ದೇವಸ್ಥಾನ ವಿಶ್ವದಲ್ಲಿಯೇ ಅತೀ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದ್ದು, ಕೆಲವು ವರ್ಷಗಳ ಹಿಂದೆ ಲೆಕ್ಕ ಹಾಕಿದಾಗ ಸುಮಾರು 90 ಸಾವಿರ ಕೋಟಿ ರೂಪಾಯಿ ಮೌಲ್ಯದ ಚಿನ್ನ, ವಜ್ರ, ಮುತ್ತು-ರತ್ನಗಳಿಂದ ಮಾಡಲ್ಪಟ್ಟ ಅಪೂರ್ವ ಆಭರಣಗಳ ಬೃಹತ್‌ ಸಂಗ್ರಹವೇ ದೇವಸ್ಥಾನದಲ್ಲಿ ಪತ್ತೆಯಾಗಿತ್ತು.

ನ್ಯಾಯಮೂರ್ತಿ ಯು.ಯು. ಲಲಿತ್‌ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದ್ದು, ಸದ್ಯಕ್ಕೆ ತಿರುವನಂತಪುರಂನ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತ ಸಮಿತಿಯೇ ದೇವಸ್ಥಾನದ ವ್ಯವಹಾರಗಳನ್ನು ನಡೆಸಿಕೊಂಡು ಹೋಗಲಿ ಎಂದು ಆದೇಶದಲ್ಲಿ ತಿಳಿಸಿದೆ.

2011ರ ಜನವರು 31 ರಂದು ಕೇರಳ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸುಮಾರು 3 ತಿಂಗಳ ಕಾಲ ವಾದ ವಿವಾದಗಳನ್ನು ಆಲಿಸಿದ್ದ ನಾಯ್ಯಾಲಯ ಏಪ್ರಿಲ್‌ 10 ರಂದು ಆದೇಶ ಕಾಯ್ದಿರಿಸಿತ್ತು.

ರಾಜಮನೆತನದ ಆಡಳಿತಕ್ಕೆ ಒಳಪಟ್ಟ ಟ್ರಸ್ಟ್‌ನಿಂದ ದೇವಾಲಯದ ಸಂಪತ್ತು ಮತ್ತು ನಿರ್ವಹಣೆ ಜವಾಬ್ದಾರಿಯನ್ನು ವಶಕ್ಕೆ ಪಡೆಯುವಂತೆ ಕೇರಳ ಸರಕಾರಕ್ಕೆ ಅಲ್ಲಿನ ಹೈಕೋರ್ಟ್‌ ನೀಡಿದ್ದ ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್‌ 2011ರಲ್ಲೇ ತಡೆ ನೀಡಿತ್ತು.

ಅದೇ ದಿನ ದೇವಸ್ಥಾನದ ‘ಎ’ ನಿಂದ ‘ಎಫ್’‌ವರೆಗಿನ ಖಜಾನೆಯಲ್ಲಿರುವ ಬೆಲೆಬಾಳುವ ವಸ್ತುಗಳು, ಆಭರಣಗಳು, ಹರಳುಗಳ ಬಗ್ಗೆ ವಿವರವಾದ ಪಟ್ಟಿ ತಯಾರಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನಂತರ ಸುಪ್ರೀಂ ಕೋರ್ಟ್‌ನ ಆದೇಶವಿಲ್ಲದೆ ‘ಬಿ’ ಖಜಾನೆಯ ಬಾಗಿಲು ತೆರೆಯಬೇಕಾಗಿಲ್ಲ ಎಂದು ಹೇಳಿತ್ತು. ಹಾಗಾಗಿ 6 ರಲ್ಲಿ 5 ಖಜಾನೆಗಳಲ್ಲಿ ಮಾತ್ರ ಪರಿಶೀಲನೆ ನಡೆದಿದ್ದು, ‘ಬಿ’ ಖಜಾನೆಯಲ್ಲಿ ಏನಿದೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಅಲ್ಲಿಂದ ಇಲ್ಲಿಯವರೆಗೆ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿಯು ದೇವಸ್ಥಾನದ ಆಡಳಿತವನ್ನು ನಿರ್ವಹಿಸಿಕೊಂಡು ಬಂದಿತ್ತು. ಸದ್ಯಕ್ಕೆ ಇದೇ ಸಮಿತಿ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳಲಿದೆ.

ಈಗಿನ ದೇವಸ್ಥಾನವನ್ನು ತಿರುವಾಂಕೂರು ರಾಜಮನೆತನದವರು 18ನೇ ಶತಮಾನದಲ್ಲಿ ಗ್ರಾನೈಟ್‌ ಕಲ್ಲುಗಳನ್ನು ಬಳಸಿ ಮರು ನಿರ್ಮಾಣ ಮಾಡಿದ್ದರು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ಈ ರಾಜಮನೆತನದವರು ದಕ್ಷಿಣ ಕೇರಳ ಮತ್ತು ತಮಿಳುನಾಡಿನ ಕೆಲ ಭಾಗಗಳನ್ನು ಆಳ್ವಿಕೆ ಮಾಡುತ್ತಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English