ಕಾಸರಗೋಡು : ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು ಮಂಗಳವಾರ 44 ಮಂದಿಗೆ ದೃಢಪಟ್ಟಿದೆ.
ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಹೇಳಿರುವಂತೆ 20 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, 15 ಮಂದಿ ವಿದೇಶಗಳಿಂದ, 9 ಮಂದಿ ಇತರ ರಾಜ್ಯಗಳಿಂದ ಬಂದವರಿಗೆ ಸೋಂಕು ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ಮಂಜೇಶ್ವರ ಪಂಚಾಯತ್ ನ 42, 62 ವರ್ಷದ ವ್ಯಕ್ತಿಗಳು, ಮೀಂಜ ಪಂಚಾಯತ್ ನ 62 ವರ್ಷದ ಮಹಿಳೆ, 32 ವರ್ಷದ ವ್ಯಕ್ತಿ, ಚೆಂಗಳ ಪಂಚಾಯತ್ನ 26, 62, 29 ವರ್ಷದ ಮಹಿಳೆಯರು, 32,16,34,37,75 ವರ್ಷದ ವ್ಯಕ್ತಿಗಳು, ಚೆಮ್ನಾಡ್ ಪಂಚಾಯತ್ ನ 26 ವರ್ಷದ ಮಹಿಳೆ, 54 ವರ್ಷದ ವ್ಯಕ್ತಿ, ಮಧೂರು ಪಂಚಾಯತ್ನ 26 ವರ್ಷದ ಮಹಿಳೆ, 26,35 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ವ್ಯಾಪ್ತಿಯ 48 ವರ್ಷದ ಇಬ್ಬರು ವ್ಯಕ್ತಿಗಳು (ಇವರಲ್ಲಿ ಒಬ್ಬರ ಸಂಪರ್ಕ ಮಾಹಿತಿ ಲಭಿಸಿಲ್ಲ.), ಮೊಗ್ರಾಲ್ ಪುತ್ತೂರು ಪಂಚಾಯತ್ನ 23 ವರ್ಷದ ಮಹಿಳೆ ಸೋಂಕು ತಗುಲಿದೆ.
ಶಾರ್ಜಾದಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ ನ 45 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಪಂಚಾಯತ್ನ 33 ವರ್ಷದ ವ್ಯಕ್ತಿ, ಕಾರಡ್ಕ ಪಂಚಾಯತ್ನ 58 ವರ್ಷದ ವ್ಯಕ್ತಿ, ಖತಾರ್ನಿಂದ ಆಗಮಿಸಿದ್ದ ಮಡಿಕೈ ಪಂಚಾಯತ್ನ 35 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 48 ವರ್ಷದ ವ್ಯಕ್ತಿ, ದುಬಾಯಿಯಿಂದ ಬಂದಿದ್ದ ಚೆಮ್ನಾಡ್ ಪಂಚಾಯತ್ನ 32 ವರ್ಷದ ವ್ಯಕ್ತಿ, ಬದಿಯಡ್ಕ ಪಂಚಾಯತ್ನ 29 ವರ್ಷದ ವ್ಯಕ್ತಿ, ಕಾಞಂಗಾಡ್ ನಗರಸಭೆಯ 28 ವರ್ಷದ ನಿವಾಸಿ ವ್ಯಕ್ತಿ, ಪಳ್ಳಿಕ್ಕರೆ ಪಂಚಾಯತ್ನ 29 ವರ್ಷದ ನಿವಾಸಿ, ಅಜಾನೂರು ಪಂಚಾಯತ್ನ 35 ವರ್ಷದ ನಿವಾಸಿ, ಕಾರಡ್ಕ ಪಂಚಾಯತ್ನ 40 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 33,26 ವರ್ಷದ ವ್ಯಕ್ತಿಗಳು, ಕುವೈತ್ನಿಂದ ಬಂದಿದ್ದ ಪಡನ್ನ ಪಂಚಾಯತ್ನ 40 ವರ್ಷದ ನಿವಾಸಿ, ಸೌದಿಯಿಂದ ಆಗಮಿಸಿದ್ದ ವಲಿಯಪರಂಬ ಪಂಚಾಯತ್ ನಿವಾಸಿ 52 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ.
Click this button or press Ctrl+G to toggle between Kannada and English