ಬೆಳ್ತಂಗಡಿ : 70 ರ ವೃದ್ಧೆಯನ್ನು ಹೆತ್ತ ಮಗ ಮತ್ತು ಮೊಮ್ಮಗ ಸೇರಿ ಹಲ್ಲೆ ಮಾಡುವ ವಿಡಿಯೋ ವೈರಲ್

10:00 PM, Friday, July 17th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Belthangady assult ಬೆಳ್ತಂಗಡಿ : ಈ ದೃಶ್ಯ ನೋಡಿದ್ರೆ ಎಂಥವರ ಮನಸ್ಸು ಕರಗದೇ ಇರದು. ತಾಯಿ ಮಕ್ಕಳನ್ನು ಹೆತ್ತು ಅದೆಷ್ಟೋ ಕಷ್ಟಗಳನ್ನು ಸಹಿಸಿ ಬೆಳೆಸುತ್ತಾಳೆ. ಆದರೆ ಕೆಲವೊಂದು ಮಕ್ಕಳು ಹೆತ್ತವರು ಅಸಹಾಯಕರಾದಾಗ ಯಾವರೀತಿ  ನೆಡಿಕೊಳ್ಳುತ್ತಾರೆ ಎಂಬುದನ್ನು ಈ ಘಟನೆಯಿಂದ ಅರಿತುಕೊಳ್ಳಿ. ಹೆತ್ತ ಮಗ ಮತ್ತು ಮೊಮ್ಮಗ ಸೇರಿ ವೃದ್ಧೆ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ರಾಕ್ಷಸಿ ಕೃತ್ಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ನಡೆದಿದೆ.

ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬರಿಗೆ ಅವರ ಮಗ ಶ್ರೀನಿವಾಸ್ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ನಿಸ್ಸಾಹಯಕ ಸ್ಥಿತಿಯಲ್ಲಿರುವ ಅಪ್ಪಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ.

ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ‌ ಮೊಮ್ಮಗ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ವೃದ್ಧೆ ತಾಯಿಯ ಮೇಲೆ ಪೈಶಾಚಿಕ ಕೃತ್ಯಅನಾರೋಗ್ಯದಿಂದ ಬಳಲುತ್ತಿರುವ ಅಪ್ಪಿ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದಾರೆ. ಇದರಿಂದ ನೊಂದ ಇನ್ನೋರ್ವ ಮೊಮ್ಮಗ ಏನು ಮಾಡಲಾಗದೇ ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತೃತ್ವದ ಪೊಲೀಸರ ತಂಡ, ಹಲ್ಲೆ ನಡೆಸಿದ ಈ ಇಬ್ಬರನ್ನೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.

ಗಾಯಗೊಂಡಿರುವ ವೃದ್ಧೆಯನ್ನು ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ವಯಸ್ಸಾದಾಗ ಅಸಹಾಯಕರಾಗಿ ಹೆತ್ತವರನ್ನು ಸಾಕಲು ಕಷ್ಟ ಆಗುವ ಇಂತಹ ಮಕ್ಕಳಿಂದ ಸಮಾಜ ಯಾವ ರೀತಿ ಪಾಠಕಲಿಯಬೇಕು. ಇಂತಹ ಕುಡುಕರು ಇರುವುದರಿಂದಲೇ ಸಾಮಾಜಿಕ ಮೌಲ್ಯ ಗಳಿಗೆ ಬೆಲೆ ಇಲ್ಲದಂತಾಗುವುದು.

Belthangady assult

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English