ಉಡುಪಿ ಮಿಲಾಗ್ರಿಸ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

4:30 PM, Saturday, December 1st, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Rakshitha Milagres Collegeಉಡುಪಿ :ಕಲ್ಯಾಣ್ ಪುರ ಮಿಲಾಗ್ರಿಸ್ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ರಕ್ಷಿತಾ ಎಂಬಾಕೆ ಸಂತೆಕಟ್ಟೆ ಬಳಿಯ ನಯಂಪಳಿಯಲ್ಲಿರುವ ತನ್ನ ಮನೆಯ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆ. ಉಡುಪಿ ಸಂತೇಕಟ್ಟೆ ನಯಂಪಳಿ ನಿಸರ್ಗ ಹೌಸ್ ನಿವಾಸಿ ನಿತ್ಯಾನಂದ ಕೆ.ಪಿ. ಮತ್ತು ಮಾಲತಿ ಎನ್ ಎಂಬವರ ಪುತ್ರಿಯಾಗಿರುವ ರಕ್ಷಾ ಶುಕ್ರವಾರ ಕಾಲೇಜಿಗೆ ರಜೆ ಇದ್ದ ಕಾರಣ ಓದಲೆಂದು ತನ್ನ ಕೋಣೆ ಸೇರುದ್ದಾಳೆನ್ನಲಾಗಿದೆ. ರಕ್ಷಿತಾಳ ಸ್ನೇಹಿತೆಯೊಬ್ಬಳು ಮನೆಗೆ ಫೋನ್ ಕರೆ ಮಾಡಿ ಕಂಪ್ಯೂಟರ್ ಕ್ಲಾಸ್ ಇರುವ ಬಗ್ಗೆ ಆಕೆಗೆ ತಿಳಿಸುವಂತೆ ಹೇಳಿದಾಗ ಹೆತ್ತವರು ಆಕೆಯ ಕೋಣೆಗೆ ತೆರಳಿ ಬಾಗಿಲು ತಟ್ಟಿದಾಗ . ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಹೆತ್ತವರು ಪರಿಶೀಲಿಸಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.

ರಕ್ಷಿತಾ ಕಲಿಕೆಯಲ್ಲಿ ಪ್ರತಿಭಾವಂತಳಾಗಿದ್ದು, ಕ್ರೀಡಾಪಟುವೂ ಆಗಿದ್ದು ಈಕೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಆಕೆಯ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English