ಲಾಕ್ಡೌನ್ ನಿಂದ ಮನೆಯಲ್ಲೇ ಇರುತಿದ್ದ ಗಂಡನನ್ನುಕಲ್ಲುಎತ್ತಿ ಹಾಕಿ ಸಾಯಿಸಿದ ಹೆಂಡತಿ ಮತ್ತು ಗೆಳೆಯರು

11:05 PM, Saturday, July 18th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

amrutahalliಬೆಂಗಳೂರು : ಲಾಕ್ಡೌನ್ ನಿಂದ ಮನೆಯಲ್ಲೇ ಹೆಂಡತಿ ಜೊತೆ ಇರುತಿದ್ದ ಗಂಡನನ್ನುಇಬ್ಬರು ಚೂರಿಯಿಂದ ತಿವಿದು ಕಲ್ಲುಎತ್ತಿ ಹಾಕಿ ಸಾಯಿಸಿದ ಘಟನೆ  ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೆಂಡತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಸ್ನೇಹಿತನ ಜೊತೆ ಸೇರಿ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹರೀಶ್ ಮೃತ ವ್ಯಕ್ತಿಯಾಗಿದ್ದು, ಆತನ ಪತ್ನಿ, ಪ್ರಿಯಕರ ಅಭಿಲಾಷ್ ಮತ್ತು ಸ್ನೇಹಿತ ರಫೀಕ್ ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Harishaಕಳೆದ 9ನೇ ತಾರೀಖು ಮಧ್ಯರಾತ್ರಿ 1 ಗಂಟೆಗೆ ಆರೋಪಿಗಳು ಹರೀಶ್ ನನ್ನು ಕೊಲೆ ಮಾಡಿದ್ದರು. ಹರೀಶ್ ಮಲಗಿದ್ದ ವೇಳೆ ಮಹಿಳೆಯ ಪ್ರಿಯಕರ ಅಭಿಲಾಷ್, ಆತನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿದ್ದ.

ಅಲ್ಲದೇ ಸ್ನೇಹಿತ ರಫೀಕ್ ಚಾಕುವಿನಿಂದ ಹರೀಶ್ ನ ಹೊಟ್ಟೆಗೆ ಇರಿದಿದ್ದ. ನಂತರ ರಾತ್ರೋರಾತ್ರಿ ಶವವನ್ನು ರಾಜಕಾಲುವೆಗೆ ಬಿಸಾಕಿದ್ದರು ಅನ್ನೋ ಆರೋಪ ಕೇಳಿ ಬಂದಿತ್ತು.

ಅಭಿಲಾಷ್ ಜೊತೆ ಲವ್ವಿ ಡವ್ವಿ ಇಟ್ಟುಕೊಂಡಿದ್ದ ಆರೋಪಿ ಮಹಿಳೆ, ಹರೀಶ್ ಕೆಲಸಕ್ಕೆ ಹೋದ ಬಳಿಕ ಆತನ ಜೊತೆ ಆರಾಮಾಗಿ ಇರುತ್ತಿದ್ದಳು ಎನ್ನಲಾಗಿದೆ. ಆದರೆ ಇವರ ಸಂಬಂಧಕ್ಕೆ ಲಾಕ್ಡೌನ್ ದೊಡ್ಡ ಹೊಡೆತ ನೀಡಿತ್ತು. ಲಾಕ್ಡೌನ್ ವೇಳೆ ಹರೀಶ್ ಯಾವಾಗಲೂ ಮನೆಯಲ್ಲೇ ಇರುತ್ತಿದ್ದರಿಂದ, ಇದು ಅಭಿಲಾಷ್ ಮತ್ತು ಮಹಿಳೆಯ ಸಂಬಂಧಕ್ಕೆ ಅಡ್ಡಗಾಲು ಹಾಕಿದಂತಾಗಿತ್ತು. ಹೀಗಾಗಿ ಆಕೆ ಪ್ರಿಯಕರನ ಜೊತೆ ಸೇರಿ ಗಂಡನನ್ನ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ.

ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಮೃತ ಹರೀಶ್ ನ ನಾಲ್ಕು ವರ್ಷದ ಮಗುವಿನ ಹೇಳಿಕೆ ಪಡೆದಿದ್ದರು. ತಂದೆ ಹತ್ಯೆಯ ವೇಳೆ ಅಲ್ಲೇ ಆಳುತ್ತಾ ನಿಂತಿದ್ದ ಪುಟ್ಟ ಮಗು, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಹೇಳಿಕೆ ಆಧರಿಸಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಮಗುವನ್ನ ಮಕ್ಕಳ ಕಲ್ಯಾಣ ಇಲಾಖೆ ವಶಕ್ಕೆ ನೀಡಲಾಗಿದೆ. ಆರೋಪಿಗಳಿಗೆ ಪೊಲೀಸರು ಪರಪ್ಪನ ಅಗ್ರಹಾರದಲ್ಲಿ ಕೂರಿಸಿದ್ದಾರೆ.

AbhilashRafeeq

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English