ಅಯೋಧ್ಯೆಯ ಐತಿಹಾಸಿಕ ತೀರ್ಪಿಗಾಗಿ ಕಾತರಗೊಂಡ ದೇಶದ ಜನತೆ

1:11 PM, Thursday, September 30th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಅಯೋಧ್ಯೆಯ ಐತಿಹಾಸಿಕ ತೀರ್ಪುನವ ದೆಹಲಿ : ಹದಿನೆಂಟು ವರ್ಷದ ಹಿಂದೆ ನೆಲ ಸಮ ಗೊಂಡ ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿಗೆ ಸಂಬಧಿಸಿದ ಪ್ರಕರಣಕ್ಕೆ ಇಂದು ಅಲಹಾಬಾದ್‌ ನ್ಯಾಯಾಲಯ ತೀರ್ಪು ನೀಡಲಿದೆ. ಈ  ಐತಿಹಾಸಿಕ ತೀರ್ಪಿಗಾಗಿ  ದೇಶದ ಜನತೆ ಕಾತರರಾಗಿದ್ದಾರೆ.
ಅಲಹಾಬಾದ್‌ನ ಲಕ್ನೋ ಪೀಠದ ನ್ಯಾಯಮೂರ್ತಿ ಧರಮ್ ವೀರ್ ಶರ್ಮಾ, ಎಸ್‌.ಯು ಖಾನ್ ಹಾಗೂ ಸುಧೀರ್ ಅಗರ್‌ವಾಲ್ ತೀರ್ಪು ಪ್ರಕಟಿಸಲಿದ್ದು,  ಈ ಹಿನ್ನೆಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ವಹಿಸಲಾಗಿದೆ. ನ್ಯಾಯಾಲಯದ ಆವರಣದ ಸುತ್ತಲಿನ ಪ್ರದೇಶಕ್ಕೆ ನಿರ್ಭಂಧ ಹೇರಲಾಗಿದೆ. ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿಂದಾಗಿ ದೇಶಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.
ತೀರ್ಪು ಪ್ರಕಟವಾದ ನಂತರ ವಿಜಯೋತ್ಸಾಹ ಅಥವಾ ಹಿಂಸಾಚಾರ ಪ್ರದರ್ಶಿಸುವುದು ಸೂಕ್ತವಲ್ಲ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ, ದೇಶದ ಹಲವಾರು ಗಣ್ಯರು ನ್ಯಾಯಾಲಯದ ತೀರ್ಪನ್ನು ಗೌರವಿಸಿ ಶಾಂತಿಯನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ರಾಮಜನ್ಮಭೂಮಿ-ಬಾಬ್ರಿಮಸೀದಿ ನಿವೇಶನದ 27 ಎಕರೆ ಭೂಮಿಯ 1528 ವರ್ಷಗಳ ಹಿಂದೆ ಏನು ಇತ್ತು ಮತ್ತು ಅದರ ಹಲವಾರು ವಿವಾದಿತ ಅಂಶಗಳನ್ನು ಪರಿಶೀಲಿಸಿ ನ್ಯಾಯಾಲಯ ತೀರ್ಪು ನೀಡಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English