ಕಾಸರಗೋಡು: ಕಳೆದ ಮೂರು ವರ್ಷಗಳಲ್ಲಿ ತನ್ನ 16 ವರ್ಷದ ಮಗಳನ್ನು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ 50 ವರ್ಷದ ಮದರಸಾ ಶಿಕ್ಷಕನನ್ನು ನಿಲೇಶ್ವರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇತರ ಆರು ಮಂದಿಯ ಮೇಲೂ ಆರೋಪ ಹೊರಿಸಲಾಗಿದೆ. ಆರೋಪಿಗಳಾದ ರಿಯಾಸ್ (19), ಇಜಾಜ್ (20), ಮತ್ತು ಮೊಹಮ್ಮದ್ ಅಲಿ (20) ಅವರನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ. ಇತರ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಸಂತ್ರಸ್ತೆಯ ಮಾವ ನಿಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮೂರು ವರ್ಷದಿಂದ ತನ್ನ ತಂದೆ ತನ್ನನ್ನು ಕಿರುಕುಳ ಮತ್ತು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತನಿಖಾ ಅಧಿಕಾರಿ ಪಿ ಆರ್ ಮನೋಜ್ ಅವರ ಮಾಹಿತಿ ಸಂಗ್ರಹಿಸಿದಂತೆ ಎರಡು ತಿಂಗಳ ಹಿಂದೆ ಬಾಲಕಿ ಅಕ್ರಮ ಗರ್ಭಪಾತಕ್ಕೆ ಒಳಗಾಗಿದ್ದಲು ಎಂದು ಹೇಳಿದ್ದಾರೆ. ಗರ್ಭಪಾತವನ್ನು ಮಾಡಿದ ವೈದ್ಯರ ಅಪರಾಧವನ್ನು ತಿಳಿಸದ ಕಾರಣ ಅವರು ಶಿಕ್ಷೆಗೆ ಗುರಿಯಾಗಲಿದ್ದಾರೆ. ಘಟನೆಯ ಬಗ್ಗೆ ಸಂತ್ರಸ್ತೆಯ ತಾಯಿಗೆ ತಿಳಿದಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲಕಿಯ ತಾಯಿ ಕೂಡ ಈ ಘಟನೆಯನ್ನು ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ, ಹುಡುಗಿಯ ತಂದೆ ನಿರಂತರ ಲೈಂಗಿಕ ಕ್ರಿಯೆ ನಡೆಸಿದ ಅಪರಾಧಿ. ಈತ ನಾಲ್ಕು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 2017 ರಲ್ಲಿ ಪೋಕ್ಸೊ ಕಾಯ್ದೆಯಡಿ ಬಂಧಿಸಿ ಶಿಕ್ಷೆ ವಿಧಿಸಲಾಗಿತ್ತು.
ಆರೋಪಿ ಮೂಲತಃ ಕರ್ನಾಟಕದ ಸುಳ್ಯ ದ ಬಂದ 50 ವರ್ಷದ ವ್ಯಕ್ತಿ ಎಂದು ತಿಇದು ಬಂದಿದೆ. ಈತ ಸ್ಥಳೀಯ ಮದರಸದಲ್ಲಿ ಕಲಿಸಲು ಕಾಸರಗೋಡಿಗೆ ಬಂದಿದ್ದ ಎನ್ನಲಾಗಿದೆ.
Click this button or press Ctrl+G to toggle between Kannada and English