ಕೋರೊನಾ ಸೋಂಕಿತರ ಜತೆ ವೈದ್ಯರ ಬ್ಯಾಡ್ಮಿಂಟನ್

8:50 PM, Tuesday, July 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

badmintonಹುಬ್ಬಳ್ಳಿ: ಕೊರೊನಾ ವೈರಸ್ ರೋಗಿಗಳನ್ನು ಕೊವಿಡ್ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ಅನೇಕ ಘಟನೆಗಳು ನಡೆದಿವೆ. ಇಂತಹದ ನಡುವೆ ಕೊವಿಡ್ ರೋಗಿಗಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿರುವ ವೈದ್ಯರು ಹಾಗೂ ಆಸ್ಪತ್ರೆಗಳ ಸಹ ಗಮನ ಸೆಳೆಯುತ್ತಿದೆ. ಹುಬ್ಬಳ್ಳಿಯ ಕೊರೊನಾ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಗಳ ಜೊತೆ ಸ್ವತಃ ವೈದ್ಯರು ಬ್ಯಾಡ್ಮಿಂಟನ್ ಆಟ ಆಡುತ್ತಿದ್ದಾರೆ.

ಕೊವಿಡ್ ರೋಗಿಗಳು ಮತ್ತು ವೈದ್ಯರು ಬ್ಯಾಡ್ಮಿಂಟನ್ ಆಡುತ್ತಿರುವ ಫೋಟೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿಗಷ್ಟೆ ಕೊವಿಡ್ ಕೇಂದ್ರಗಳಲ್ಲಿರುವ ಸೋಂಕಿತರು ಸಿನಿಮಾ ಹಾಡುಗಳಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೆಲವು ಕಡೆ ರೋಗಿಗಳ ಜೊತೆ ವೈದ್ಯರು ಸೇರಿ ಡ್ಯಾನ್ಸ ಮಾಡಿರುವ ಘಟನೆಗಳು ನಡೆದಿದೆ. ಇಂತಹ ಫೋಟೋ ಮತ್ತು ವಿಡಿಯೋಗಳು ಸಾಮಾನ್ಯ ಜನರ ಆತ್ಮವಿಶ್ವಾಸ ಹೆಚ್ಚಿಸುತ್ತಿದೆ. ಹಾಗಂತ ಎಲ್ಲ ಕಡೆಯೂ ಹೀಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಈಗಲೂ ಅನೇಕ ಕಡೆ ಬೆಡ್ ಸಮಸ್ಯೆ ಇದೆ. ಕೊರೊನಾ ಬಿಟ್ಟು ಇತರೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ. ಇದರ ಮಧ್ಯೆಯೂ ಅಲ್ಲೊಂದು ಇಲ್ಲೊಂದು ಪಾಸಿಟಿವ್ ಘಟನೆಗಳು ಸಮಾಧಾನ ತರುತ್ತಿದೆ.

ವರದಿ : ಶಂಭು,
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

1 ಪ್ರತಿಕ್ರಿಯೆ - ಶೀರ್ಷಿಕೆ - ಕೋರೊನಾ ಸೋಂಕಿತರ ಜತೆ ವೈದ್ಯರ ಬ್ಯಾಡ್ಮಿಂಟನ್

  1. ವಿ. ವೇ. ಕ. ( ಸತೀಶ್) ಹುಬ್ಬಳ್ಳಿ, ಹುಬ್ಬಳ್ಳಿ

    ನಿಮ್ಮ ವರದಿಗಾರ ಹುಬ್ಬಳ್ಳಿಯವ ಆಗಿದ್ದಲ್ಲಿ, ಈ ವರದಿಗೆ ಸಂಬಂದಿಸಿದ ನೈಜ ಛಾಯಾಚಿತ್ರ ಉಪಯೋಗಿಸಬೇಕಿತ್ತಲ್ಲವೋ? ಸ್ಥಳೀಯ ವರದಿಗಾರನಿಗೆ ಉತ್ತಮ ಛಾಯಾಚಿತ್ರ ಯಂತ್ರ ವ್ಯವಸ್ಥೆ ಆಗಬೇಕಲ್ಲವೋ? ಮಾರಾಯ್ರೇ? ಆಗ ನಿಮ್ಮ ಸುದ್ದಿ ಮಾಧ್ಯಮದ ನಮವಾದ ಮೆಗಾ ಮೀಡಿಯಾ ನ್ಯೂಸ್ ನೈಜವಾಗಿ ಮೆಗಾ ಅಂದರೆ ಬೃಹತ್ ಆಗುವುದಲ್ಲವೋ? ಮಾರಾಯ್ರೇ?

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English