ಆಯುಷ್ಮಾನ್ ಭಾರತ ಯೋಜನೆ ಅಡಿ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ನಕಲಿ -ವಿಡಿಯೋ

9:14 PM, Tuesday, July 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

ivan-d-souza ಮಂಗಳೂರು  :  ಆಯುಷ್ಮಾನ್ ಭಾರತ ಯೋಜನೆ ಅಡಿ 9 ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರ ನೇಮಕ ನಕಲಿ.  ಅಸಲಿ ಆರೋಗ್ಯ ಮಿತ್ರರ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಿ ಇಲ್ಲವೇ ಆಡಳಿತ ಬಿಟ್ಟು ತೊಲಗಿ ಎಂದು  ಜಿಲ್ಲಾಡಳಿತಕ್ಕೆ ಮತ್ತು  ಜನಪ್ರತಿನಿಧಿಗಳಿಗೆ ಐವನ್ ಡಿಸೋಜಾ ಸವಾಲು ಹಾಕಿದ್ದಾರೆ.

ಇಂದು ಪತ್ರಿಕೆಗಳಲ್ಲಿ ಪ್ರಕಟಣೆಗೊಂಡ ಆರೋಗ್ಯ ಮಿತ್ರ ನೇಮಕ ಮತ್ತು ಅವರ ನೀಡಿದ ಮೊಬೈಲ್ ಸಂಖ್ಯೆಗೆ ಸಂಬಂಧವೇ ಇಲ್ಲ ಒಬ್ಬರು ಇನ್ಸೂರೆನ್ಸ್ ಏಜೆಂಟ್ ಇನ್ನೊಂದು ನಂಬರ್ ಆಸ್ಪತ್ರೆಯ ಕಾರ್ಮಿಕ, ಕೆಲವು ನಂಬರ್ ಗಳು ಹಿಂದಿ ಭಾಷೆಯಲ್ಲಿ ಮಾತನಾಡುವವರು, ಕೆಲವು ನಂಬರ್ಗಳು ಡಿಸಿ ಆಫೀಸಿಗೆ ಮೀಟಿಂಗ್ ಹೋದವರ ನಂಬರ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಮಾಹಿತಿ ಬಿಡಿ ಕೋವಿಡ್ ಬಗ್ಗೆ ಆರೋಗ್ಯ ಮಿತ್ರರಿಗೆ ಸಂಗತಿಯೇ ತಿಳಿದಿಲ್ಲ, ಇದು ನಾನು ಕರೆ ಮಾಡಿ ಪರಿಶೀಲಿಸಿದ್ದೇನೆ. ಇಂತಹ ಮಾಹಿತಿಯನ್ನು ಪ್ರಕಟಿಸಿ ಜನರಿಗೆ ತೊಂದರೆ ನೀಡುವ ಬದಲು ರಾಜೀನಾಮೆ ನೀಡುವುದು ಉಚಿತ. ಕೋವಿಡ್ -19 ರೋಗದಿಂದ ಜನರು ಬಳಲುತ್ತಿದ್ದಾರೆ. ಇದು ರಾಜಕೀಯ ಮಾಡುವ ವೇದಿಕೆಯಲ್ಲ ಜನರಿಗೆ ಸಹಾಯ ಮಾಡಿ. ನೋವಿನಿಂದ ಬಳಲುವವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.

ಕೂಡಲೇ ಅಸಲಿ ಆರೋಗ್ಯ ಮಿತ್ರರನ್ನು ಪ್ರಕಟಿಸಿ ಯಾವ ಕಾಲೇಜಲ್ಲಿ ಬೆಡ್ ವೆಂಟಿಲೇಟರ್ ಲಭ್ಯವಿದೆ ಅದರ ಬಗ್ಗೆ ಮಾಹಿತಿ ಪ್ರಕಟಿಸಿ ಇಲ್ಲವೇ ದೇವರು ‘ಕಾಪಾಡಬೇಕು ಅನ್ನಿ’. ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕೊರೋನ ಟೆಸ್ಟ್ಗೆ ನಿರಾಕರಣೆ ಮಾಡುತ್ತಿದ್ದು, ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಹೇಳುತ್ತಿರುವುದನ್ನು ಕೂಡಲೇ ನಿಲ್ಲಿಸುವಂತೆ ಮತ್ತೆ ಟೆಸ್ಟ್ ಮಾಡಲು ಕ್ರಮ ಕೈಗೊಳ್ಳುವಂತೆ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English