ಮಂಗಳೂರು :ಮಂಗಳೂರಿನ ಸಿಸಿಬಿ ಪೊಲೀಸರು ಪೆಟ್ರೋಲ್ ಟ್ಯಾಂಕರ್‌ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್‌ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು. ಒಟ್ಟು 69 ಲಕ್ಷ ರೂ ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಐಓಸಿಎಲ್‌ನಿಂದ ಟ್ಯಾಂಕರ್‌ಗೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಭರ್ತಿ ಮಾಡಿದ ನಂತರ ಐಓಸಿಎಲ್‌ನವರು ಟ್ಯಾಂಕ್‌ನ ಮೇಲ್ಭಾಗ ಮತ್ತು ಟ್ಯಾಂಕ್‌ನಿಂದ ಡೀಸೆಲ್‌ನ್ನು ಹೊರಗೆ ಬಿಡುವ ವಾಲ್ವ್ ಇರುವ ಸ್ಥಳದಲ್ಲಿನ ಬಾಕ್ಸ್‌ಗೂ ಬೀಗ ಹಾಕುತ್ತಾರೆ. ಬೀಗದ ಕೀಲಿಕೈ ಐಓಸಿಎಲ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಪೆಟ್ರೋಲ್ ಬಂಕ್‌ನ ಮಾಲೀಕರ ಬಳಿ ಇರುತ್ತದೆ. ರಸ್ತೆ ಮಧ್ಯದಲ್ಲಿ ಚಾಲಕರು ಅಥವಾ ಬೇರೆ ಯಾರೂ ಕಳ್ಳತನ ಮಾಡ ಬಾರದೆಂದು ಹೀಗೆ ಮಾಡಲಾಗುತ್ತದೆ.
ಆದರೆ ಆರೋಪಿಗಳು ಟ್ಯಾಂಕರ್‌ನ ಒಳಭಾಗದಲ್ಲಿ ಇನ್ನೊಂದು ಟ್ಯಾಂಕನ್ನು ರಹಸ್ಯವಾಗಿ ರಚಿಸಿಕೊಂಡಿದ್ದು, ಪೆಟ್ರೋಲ್ ಬಂಕ್‌ನವರು ಅಳತೆ ಮಾಡುವ ಸಂದರ್ಭದಲ್ಲಿ ಸರಿಯಾದ ಅಳತೆಯನ್ನೇ ತೋರಿಸುತ್ತದೆ. ಆದರೆ ಟ್ಯಾಂಕರ್‌ನಿಂದ ಪೆಟ್ರೋಲ್ ಬಂಕ್‌ಗೆ ಅನ್‌ಲೋಡ್ ಮಾಡುವಾಗ ರಹಸ್ಯ ಟ್ಯಾಂಕ್‌ನಲ್ಲಿರುವ 100ರಿಂದ 200 ಲೀಟರ್‌ನಷ್ಟು ಪೆಟ್ರೋಲ್/ ಡೀಸೆಲ್ ಅದರಲ್ಲಿಯೇ ಉಳಿದುಕೊಂಡು ಬಿಡುತ್ತದೆ. ಟ್ಯಾಂಕರ್ ಪೆಟ್ರೋಲ್ ಬಂಕ್‌ನಿಂದ ಹೊರಟ ಬಳಿಕ ಮಾರ್ಗ ಮಧ್ಯದಲ್ಲಿ ಈ ರಹಸ್ಯ ಟ್ಯಾಂಕ್‌ನಲ್ಲಿರುವ ಪೆಟ್ರೋಲ್ ಮತ್ತು ಡೀಸೆಲನ್ನು ಟ್ಯಾಂಕರ್‌ನ ಕೆಳಭಾಗದಲ್ಲಿ ರಹಸ್ಯವಾಗಿ ರಚಿಸಿರುವ ಲಿವರ್‌ನ್ನು ಆನ್ ಮಾಡಿ ಅದರ ಮುಖಾಂತರ ಕಳ್ಳತನ ಮಾಡುತ್ತಿದ್ದರು. ಐ.ಒ.ಸಿ.ಎಲ್.ನವರು ಹಾಕಿರುವ ಬೀಗ ನೋಡಲು ಹಾಗೆಯೇ ಇದ್ದು, ಎರಡು ಚಿಕ್ಕ ಬೋಲ್ಟ್‌ಗಳ ಸಹಾಯದಿಂದ ಚಿಲಕವನ್ನು ಪ್ರತ್ಯೇಕಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.
ಈ ಬಗ್ಗೆ ಪೊಲೀಸ್ ಇಲಾಖೆಗೆ ಖಚಿತ ಮಾಹಿತಿ ಲಬಿಸಿತ್ತು. ಕಮೀಷನರ್ ಮನೀಷ್ ಕರ್ಬೀಕರ್ ಅವರ ನಿರ್ದೇಶನದಂತೆ. ವೆಂಕಟೇಶ್ ಪ್ರಸನ್ನ ನೇತೃತ್ವದ ಸಿಸಿಬಿ ಪೋಲೀಸರು ಕಾರ್ಯಾಚರಣೆ ನಡೆಸಿ ಜಾಲವನ್ನು ಭೇದಿಸಿದ್ದಾರೆ. ವಶಪಡಿಸಿಕೊಂಡ ಎಲ್ಲ ಲಾರಿಗಳು ಆರೋಪಿ ಅಶೋಕ್ ಎಂಬಾತನಿಗೆ ಸೇರಿದ್ದಾಗಿದೆ. ಒಟ್ಟು 7 ಟ್ಯಾಂಕರ್ ಗಳ ಪೈಕಿ 5 ಟ್ಯಾಂಕರ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈ ದಂಧೆ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದ್ದು. ಅಕ್ರಮ ವ್ಯವಹಾರವನ್ನು ಪತ್ತೆ ಹಚ್ಚಿದ ಸಂದರ್ಭದಲ್ಲಿ ಟ್ಯಾಂಕರ್ ಮಾಲಕ ಅಶೋಕ್ ಪ್ರಕರಣ ಬೆಳಕಿಗೆ ಬಾರದಂತೆ ಹಾಗೂ ಟ್ಯಾಂಕರ್‌ಗಳನ್ನು ಬಿಡಿಸಿಕೊಂಡು ಹೋಗಲು 3 ಲಕ್ಷ ರೂ. ಲಂಚದ ಆಮಿಷವನ್ನು ಒಡ್ಡಿದ್ದ ಎಂದು ಕಮೀಷನರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English