ಡೆತ್ ನೋಟಲ್ಲಿ ಪ್ರಿಯಕರನ ಹೆಸರು ಬರೆದಿಟ್ಟು ವಿಷ ಸೇವಿಸಿದ ಯುವತಿ

4:37 PM, Thursday, July 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

umaತೆಲಂಗಾಣ : ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದವನನ್ನು ಪ್ರೀತಿಸಿ ನಂತರ ಮದುವೆ ಮಾಡಿಕೊ ಎಂದಿದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ಪೋಥರಂ ಗ್ರಾಮದ 19 ವರ್ಷದ ಯುವತಿ ಉಮಾ ಎಂಬ ಹುಡುಗಿ ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ಸಹಪಾಠಿಯಾಗಿದ್ದ ರಂಜಿತ್ ಎಂಬ ಯುವಕನ ಪ್ರೇಮಕ್ಕೆ ಬಿದ್ದಿದ್ದಾಳೆ. ಆತನೂ ಇವಳನ್ನು ಪ್ರೀತಿಸುವುದಾಗಿ ಹೇಳಿದ್ದು, ಅದನ್ನು ಉಮಾ ನಂಬಿದ್ದಾಳೆ.

ಈ ಬಗ್ಗೆ ಅರಿವು ಇಲ್ಲದಿದ್ದ ಉಮಾ ಪಾಲಕರು ಮಗಳಿಗೆ ಹುಡುಗನನ್ನು ನೋಡಲು ಶುರು ಮಾಡಿದ್ದಾರೆ. ಮನೆಯವರಿಗೆ ತನ್ನ ಪ್ರೀತಿಯ ವಿಷಯ ತಿಳಿಸಲು ಹೆದರಿದ ಉಮಾ ನಂತರ ರಂಜಿತ್‌ ಬಳಿ ಈ ವಿಷಯ ತಿಳಿಸಿದ್ದಾಳೆ. ಮದುವೆ ಮಾಡಲು ಮನೆಯಲ್ಲಿ ಹುಡುಗನನ್ನು ನೋಡುತ್ತಿದ್ದಾರೆ. ನೀನು ನನ್ನ ಮದುವೆ ಆಗು. ಇಲ್ಲವಾದರೆ ಬೇರೊಬ್ಬನ ಜೊತೆ ಮದುವೆ ಮಾಡಿಸುತ್ತಾರೆ ಎಂದಿದ್ದಾಳೆ.

ಆದರೆ ಆತ ಮಾತ್ರ ಅದನ್ನು ನಯವಾಗಿ ತಿರಸ್ಕರಿಸಿಬಿಟ್ಟಿದ್ದಾನೆ! ನಾನೂ ಮದುವೆಯಾಗುವುದಿಲ್ಲ, ಆ ಉದ್ದೇಶವೇ ನನಗಿಲ್ಲ. ಹಾಗೆಂದು ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ ಎಂದಿದ್ದಾನೆ.

ಇದರಿಂದ ನೊಂದ ಉಮಾ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಸಾಯುವ ಮುನ್ನ ಡೆತ್ ನೋಟ್ ಬರೆದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾಳೆ.’

ವಿಷ ಸೇವಿಸಿದ ಆಕೆಯನ್ನುಪೋಷಕರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾಳೆ. ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ರಂಜಿತ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 ಡೆತ್ ನೋಟ್ 

‘ಅಮ್ಮಾ ನನ್ನನ್ನು ಕ್ಷಮಿಸಿಬಿಡು, ನನಗೀಗ ಬೇರೆ ದಾರಿಯೇ ಕಾಣುತ್ತಿಲ್ಲ. ರಂಜಿತ್‌ನನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ. ಆದರೆ ಅವನು ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇಷ್ಟೇ ಅಲ್ಲ. ನೀನು ಬೇರೆಯವರನ್ನು ಮದುವೆಯಾಗಲು ಬಿಡುವುದಿಲ್ಲ, ಮದುವೆಯಾದರೆ ಅಷ್ಟೇ ಕಥೆ… ಎಂದು ಬೆದರಿಕೆಯನ್ನೂ ಹಾಕಿದ್ದಾನೆ. ನಾನು ಅವನನ್ನೂ ಮದುವೆಯಾಗುವಂತೆ ಇಲ್ಲ, ಬೇರೆಯವರ ಜತೆಯೂ ಸಂಸಾರ ಮಾಡಲು ಅವನು ಬಿಡುವುದಿಲ್ಲ. ನನ್ನ ಬಳಿ ಸಾಯುವುದು ಬಿಟ್ಟರೆ ಬೇರೆ ಯಾವುದೇ ದಾರಿ ಇಲ್ಲ… ನಿಮ್ಮನ್ನೆಲ್ಲಾ ತುಂಬಾ ಮಿಸ್‌ ಮಾಡ್ಕೋತೀನಿ ಅಮ್ಮಾ…

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English