ಮಂಗಳೂರು : ದಕ್ಷಿಣ ಕನ್ನಡ. ಜಿಲ್ಲೆಯಲ್ಲಿ ಗುರುವಾರ 218 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ, ಈ ದಿನ ಜಿಲ್ಲೆಯಲ್ಲಿ 118 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
2253 ಮಂದಿ ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಗುರುವಾರದಂದು ಜಿಲ್ಲೆಯಲ್ಲಿ 7 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರದಂದು ಹೊಸದಾಗಿ 160 ಕೊರೊನಾ ಪ್ರಕರಣ ಪತ್ತೆಯಾಗಿವೆ. ಇಂದಿನ ಪ್ರಕರಣಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 2846 ಕ್ಕೆ ಏರಿಕೆಯಾಗಿದೆ. ಇನ್ನು ಇಂದು ಜಿಲ್ಲೆಯಲ್ಲಿ 65 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 653ಮಂದಿಯ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ. ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 994. ಗುರುವಾರ ಒಬ್ಬ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಮುಂಬಯಿ ಬಂದ 6 ಮಂದಿ, ಬೆಂಗಳೂರಿನಿಂದ ಬಂದ ಇಬ್ಬರು, ಪುಣೆ, ಮಂಗಳೂರಿನಿಂದ ಆಗಮಿಸಿದ್ದ ತಲಾ ಓರ್ವರಲ್ಲಿ ಸೊಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇಂದು 42 ಐಎಲ್ ಐ ಪ್ರಕರಣಗಳು ಪತ್ತೆಯಾದರೆ, 4 ಸಾರಿ ಪ್ರಕರಣಗಳು ಪತ್ತೆಯಾಗಿವೆ.
Click this button or press Ctrl+G to toggle between Kannada and English