ಕೋವಿಡ್‌ -19 ಮಣಿಸಲು ಹುಬ್ಬಳ್ಳಿ ಸಿದ್ದಾರೂಢನ ಸಂಶೋಧನೆ

12:13 PM, Friday, July 24th, 2020
Share
1 Star2 Stars3 Stars4 Stars5 Stars
(No Ratings Yet)
Loading...

chandrashekaraಹುಬ್ಬಳ್ಳಿ : ನಗರದ ಸಿದ್ಧಾರೂಢ ಚಂದ್ರಶೇಖರ ಅಂಗಡಿ ಕೋವಿಡ್‌ -19 ಕೋರಾನಾ ಸಾಂಕ್ರಾಮಿಕ ರೋಗ ಮಣಿಸಲು ವಿಶಿಷ್ಟ ರೀತಿಯ ಸ್ಯಾನಿಟೈಸರ್‌ ತಮ್ಮ ತಂಡದೊಂದಿಗೆ ಸಂಶೋಧಿಸಿ ಹುಬ್ಬಳ್ಳಿಯ ಹೆಸರನ್ನು ವಿಶ್ವದಾದ್ಯಂತ ಬೆಳಗಿಸಿದ್ದಾನೆ.

ವಿಜ್ಹ್‌ ಕ್ಲೀಂಜರ್‌ ಇ – ಸ್ಯಾನಿಟೈಜರ್‌ ಶೋಧಿಸಿದ ಸಿದ್ಧಾರೂಢನ ತಂಡವು ಜಾಗತಿಕ ಮಟ್ಟದಲ್ಲಿ ಇದೊಂದು ಮೊಟ್ಟ ಮೊದಲ ಉತ್ಪನ್ನ (ಮೇಡ್‌ ಇನ್‌ ಇಂಡಿಯಾ, ಮೇಡ್‌ ಫಾರ್‌ ಇಂಡಿಯಾ).

ಇ-ಸ್ಯಾನಿಟೈಜರ್‌ ಎಂಬ ವಿನೂತನ, ವಿಶಿಷ್ಷ ಹಾಗೂ ಪರಿಸರ ಸ್ನೇಹಿ ಉತ್ಪನ್ನವನ್ನು ವಿವಿಧ ಕಾಲೇಜಿನ ಇಂಜಿನೀಯರಿಂಗ್‌ ವಿದ್ಯಾರ್ಥಿಗಳ ಗುಂಪೊಂದು ಅವಸ್ಕರಿಸಿದೆ. ಇದನ್ನು ಜನರಿಗೆ, ಸಾರ್ವಜನಿಕ ಸ್ಥಳ ಹಾಗೂ ವಿವಿಧೆಡೆ ಬಳಸಲು ಉತ್ಪಾದಿಸಿದ್ದಾರೆ. ಈ ಯಂತ್ರವು ವಿವಿಧ ತರಹದ ವೈರಸ್‌, ಜರ್ಮ್ಸ್‌, ಮೈಕ್ರೋಬ್ಸ್‌ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಈ ಯಂತ್ರವನ್ನು ಬಳಸಿ, ಕೈ, ಹಣ್ಣುಗಳು, ತರಕಾರಿ ಹಾಗೂ ಮೆಟಲ್‌ ವಸ್ತುಗಳನ್ನು ಸ್ಯಾನಿಟೈಜ್‌ ಮಾಡಬಹುದಾಗಿದೆ.

ಯಂತ್ರದ ತಯಾರಿಕೆಗೆ ಬೇಕಾದ ಕಲ್ಪನೆ, ವಿನ್ಯಾಸ ಹಾಗೂ ಗುಣಮಟ್ಟ (ಎನ್. ಎ. ಬಿ.ಎಲ್)‌ ಸರ್ಟಿಫಿಕೇಟ್‌ ಪಡೆಯುವಲ್ಲಿ ಸಿದ್ಧಾರೂಢ ಮುಖ್ಯ ಭೂಮಿಕೆ ವಹಿಸಿದ್ದಾರೆ. ಇವರು ಬೆಂಗಳೂರಿನ ಆರ್.ವಿ.ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ನಲ್ಲಿ ಟೆಲಿ ಕಮ್ಯುನಿಕೇಷನ್‌ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅದೇ ಕಾಲೇಜಿನ ಮತೀನ್‌ ಇರ್ಫಾನ್‌ ಇನಕ್ಯುಬೇಶನ್‌ ಸೆಂಟ್‌ (ಎಂ.ಐ.ಐ.ಸಿ)ಯಲ್ಲಿ ನೋಂದಾಯಿತರಾಗಿದ್ದಾರೆ.

ಗುಂಪಿನ ಇತರೆ ಸದಸ್ಯರು ಅಬ್ದುಲ್‌ ರೆಹಮಾನ್‌, ಆರ್.ವಿ.ಕಾಲೇಜ್‌ ಆಫ ಇಂಜಿನೀಯರಿಂಗ್‌ ನ ಟೆಲಿಕಮ್ಯುನಿಕೇಶನ್‌ ವಿದ್ಯಾರ್ಥಿ ಸಂದೇಶ ಶೆಟ್ಟಿ, ಆರತಿ ಲೋಹಾರ, ಕೆಎಲ್‌ ಇ ಕಾಲೇಜ್‌ ಆಫ್‌ ಇಂಜಿನೀಯರಿಂಗ್ ನಲ್ಲಿ ಬಯೋ ಟೆಕ್ನಾಲಜಿ ವಿದ್ಯಾರ್ಥಿನಿ ಪರಿಭಾಷಾ ಬಂದೇವಾರ ವಿಎಂಕೆವಿ ಕಾಲೇಜ್‌ ಆಫ್‌ ಇಂಜಿನೀಯರಿಂಗ್‌ ಸೇಲಂನ ವಿದ್ಯಾರ್ಥಿನಿ ಇವರುಗಳದ್ದು ಯಂತ್ರ ತಯಾರಿಸುವಲ್ಲಿ ಅಪಾರ ಕೊಡುಗೆ ಇದೆ,

ಈ ಯಂತ್ರದ ಬಳಕೆಯಿಂದ ಆರೋಗ್ಯಕರ ಜೀವನಕ್ಕಾಗಿ ಯಥೇಚ್ಛವಾಗಿ ಲಿಕ್ಸಿಡ್‌ ಬಳಸದೇ ಕೈಗಳು ಹಾಗೂ ಇತರೇ ವಸ್ತುಗಳ ಸ್ಯಾನಿಟೈಜ್‌ ಮಾಡಬಹುದಾಗಿದೆ.

ಈ ಉತ್ಪನ್ನವು ಶ್ರೀ ಕೃಷ್ಣದೇವರಾಯ ವಿಶ್ವಿದ್ಯಾಲಯದ ಅನಂತಪುರ, ಆಂಧ್ರಪ್ರದೇಶದಲ್ಲಿ ಭಾರತ ಸರಕಾರದಿಂದ ಸ್ಥಾಪಿತ ಅಟಲ್‌ ಇನ್ನೋವೇಶನ್‌ ಮಿಶನ್‌ ನ ಅಟಲ್‌ ಇನಕ್ಯುಬೇಶನ್‌ ಸೆಂಟರ್‌ ಏರ್ಪಡಿಸಿದ್ದ ಕೋವಿಡ್‌ -೧೯ ಚಾಲೆಂಜ್‌ ನಲ್ಲಿ ವಿಜೇತರಾಗಿ ತಯಾರಿಸಲ್ಪಟ್ಟಿದೆ. ಯಂತ್ರಕ್ಕೆ ವ್ಹೀಜ್-ಕ್ಲೀಂಜರ್‌ ಎಂದು ಹೆಸರಿಸಲಾಗಿದೆ. ಇದನ್ನು ವಿದ್ಯುತ್‌ ಸ್ವಿಚ್ಛಗಳಿಗೆ ಅಳವಡಿಸಿ ೨೦ ನಿಮಿಷಗಳ ವರೆಗೆ ಸ್ಯಾನಿಟೈಜ್‌ ಮಾಡಿಕೊಳ್ಳಬಹುದಾಗಿದೆ. ನಂತರ ಈ ಯಂತ್ರವು ೧೦ ನಿಮಿಷ ಸ್ವಯಂ ಸ್ಥಗಿತಗೊಂಡು ಮರು ಚಾಲಿತವಾಗುತ್ತದೆ. ಹೀಗೆ ಎರಡು ಲೂಪ್‌ ನಂತರ ಈ ಯಂತ್ರವು ನಂತರ ಸ್ವಯಂ ಸ್ಥಗಿತಗೊಳ್ಳುತ್ತದೆ ( ವಿದ್ಯುತ್‌ ಉಳಿತಾಯದ ದೃಷ್ಟಿಯಿಂದ). ಈ ಯಂತ್ರದ ಉಪಯೋಗಗಳೆಂದರೆ ಇದನ್ನು ಬಳಸುವುದರಿಂದ ಯಾವುದೇ ಸೈಡ್‌ ಎಫೆಕ್ಟ್‌ ಇರುವುದಿಲ್ಲ. ಚರ್ಮಕ್ಕೆ ಯಾವುದೇ ಅಲರ್ಜಿ ಆಗುವುದಿಲ್ಲ. ಸ್ಯಾನಿಟೈಜರ್‌ ರಿಫಿಲ್‌ ಮಾಡುವ ಅವಶ್ಯಕತೆಯಿಲ್ಲ. ಲಿಕ್ವಿಡ್‌ ಸ್ಯಾನಿಟೈಜರ್‌ ಗೆ ಹೋಲಿಸಿದಾಗ ಇದು ಉರಿಯದಿರುವ ವಸ್ತು ಎಂದು ಸಿದ್ಧಾರೂಡ ಚಂದ್ರಶೇಖರ ಅಂಗಡಿ ತಿಳಿಸುತ್ತಾರೆ.

ಇಂಜಿನೀಯರಿಂಗ್‌ ವಿದ್ಯಾರ್ಥಿಗಳ ಈ ಸಾಧನೆಯು ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ್‌ ಯೋಜನೆಗೆ ನಿದರ್ಶನವಾಗಿದೆ.

ಸಿದ್ಧಾರೂಢ ಚಂದ್ರಶೇಖರ ಅಂಗಡಿ ಅವರ ಮೊಬೈಲ್‌ ಸಂಖ್ಯೆ : 9632071545

ವಿಶೇಷ ವರದಿ : ಶಂಭು,
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English