ನಾಗರ ಪಂಚಮಿಯಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತ್ಯಕ್ಷನಾದ ನಿಜ ನಾಗರ

7:17 PM, Monday, July 27th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

snek ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗನಿಗೆ ಹಾಲೆರೆಯುವ ಸಂದರ್ಭದಲ್ಲಿ ನಿಜ ನಾಗರ ದರ್ಶನ ನೀಡಿ ಅರ್ಚಕರಿಗೆ ಮತ್ತು ಅಲ್ಲಿ ನೆರೆದಿದ್ದವರಿಗೆ ಆಶ್ಚರ್ಯಮೂಡಿಸಿದೆ.

ಮೊದಲಿಗೆ ದೇಗುಲದ ನಾಗಪ್ರತಿಷ್ಟೆ ಮಂಟಪದ ಬಳಿ, ನಂತರ ಅರ್ಚಕರು ನಾಗಮಂಟಪದಲ್ಲಿ ಪೂಜೆ ನಡೆಸುತ್ತಿದ್ದ ವೇಳೆ ಹೊರಾಂಗಣದಲ್ಲಿ ಹಾವು ಪ್ರತ್ಯಕ್ಷವಾಗಿದೆ ಎನ್ನಲಾಗಿದೆ.

ನಾಗರಪಂಚಮಿಯನ್ನು ಶನಿವಾರ ಪೂರ್ವ ಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ಮದ್ಯಾಹ್ನ ಮಹಾಪೂಜೆಯ ಬಳಿಕ ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, ಜಲಾಭಿಷೇಕ ಮಾಡಿದರು. ಅರಿಶಿನ ಪ್ರಸಾದ ಹಾಗೂ ಕಲ್ಲು ಸಕ್ಕರೆ ಒಳಗೊಂಡ ಪಂಚಕಜ್ಜಾಯ ಸಮರ್ಪಣೆ ಮಾಡಿದರು. ನಂತರ ಅಲಂಕಾರ ನೆರವೇರಿಸಿ ಮಹಾಮಂಗಳಾರತಿ ನೆರವೇರಿಸಿದರು. ಪ್ರತಿವರ್ಷದಂತೆ ವೈದಿಕ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಆದರೆ ಭಕ್ತರಿಗೆ ಮಾತ್ರ ಪ್ರವೇಶವಿರಲಿಲ್ಲ.

ಈ ನಿಮಿತ್ತ ಕುಕ್ಕೆಸುಬ್ರಹ್ಮಣ್ಯ ದೇವರಿಗೆ ಪ್ರಾತಃಕಾಲ ವಿಶೇಷ ಮಹಾಭಿಷೇಕ ನೆರವೇರಿತು. ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕವನ್ನು ಪ್ರಾತಃಕಾಲ ೫.೩೦ ಗಂಟೆಗೆ(ಬೆಳಗ್ಗೆ) ಪುರೋಹಿತ ಕುಮಾರಭಟ್ ನೆರವೇರಿಸಿದರು. ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗ ತಡೆಯುವ ದೃಷ್ಠಿಯಿಂದ ಮುಂಜಾಗೃತಾ ಕ್ರಮವಾಗಿ ಶ್ರೀ ದೇವಳಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಸೇರಿದಂತೆ ಪುರೋಹಿತರು ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English