ಮಂಗಳೂರು : ಎದೆನೋವು ಕಾಣಿಸಿಕೊಂಡು ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅದೇ ಸಂದರ್ಭದಲ್ಲಿ ಅವರನ್ನು ಕೊವಿಡ್ ತಪಾಸಣೆ ಮಾಡಿ ನಿಮಗೆ ಪಾಸಿಟೀವ್ ಇದೆ ಎಂದು ವರದಿಕೊಟ್ಟಿದ್ದಾರೆ. ಸಂಶಯಗೊಂಡ ಅವರು ಮರುದಿನ ಬೇರೆ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ನೆಗೆಟೀವ್ ಬಂದಿದೆ. 89 ಸಾವಿರ ಬಿಲ್ಲಿನ ಜೊತೆಗೆ ಅವರನ್ನು ನೋಡಿಕೊಳ್ಳಲು ಬಂದವರಿಗೂ ಕೋವಿದ್ ತಪಾಸಣೆಯ ನೆಪದಲ್ಲಿ 21 ಸಾವಿರ ಬಿಲ್ ಹಾಕಿದ ಪ್ರಕರಣವೊಂದು ನಡೆದಿದೆ.
ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲಕ ದಿನೇಶ್ ಅಡ್ಕಾರ್ ಎಂಬವರು ಜುಲೈ 21 ನೇ ತಾರೀಕಿನಂದು ಎದೆನೋವು ಕಾಣಿಸಿಕೊಂಡು ಸುಳ್ಯದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಎದೆಬಡಿತ ಜಾಸ್ತಿಗೊಂಡಿದ್ದರಿಂದ ಅವರನ್ನು ತಕ್ಷಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದರು. ಮಂಗಳೂರಿನ ಎಜೆ ಆಸ್ಪತ್ರೆಗೆ ಮೊದಲು ಹೋದರು ಅಲ್ಲಿ ಬೆಡ್ ಖಾಲಿ ಇಲ್ಲ ಎಂದು ಇವರನ್ನು ಹಿಂದೆ ಕಳುಹಿಸಿದರು. ನಂತರ ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ದಾಖಲಾದರು.
ಸಹೋದರ ಸಂಬಂದಿ ಶರತ್ ಎಂಬವರ ಜೊತೆ ಬಂದ ಇವರನ್ನು ಹೃದಯ ಸಂಬಂದಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಅ ಬಳಿಕ ಕೋವಿದ್ ತಪಾಸಣೆಗೊಳಪಡಿಸಲಾಯಿತು. ಆ ವರದಿ ಪಾಸಿಟೀವ್ ಎಂದು ಬಂತು. ಅವರನ್ನು ಅಲ್ಲಿಂದ ಕೋವಿದ್ ವಾರ್ಡಿಗೆ ಸ್ಥಳಾಂತರಿಸಿದರು. ಸಂಶಯಗೊಂಡ ಅವರು ತನ್ನ ಸಂಬಂದಿಕ ವೈದ್ಯರನ್ನು ಕರೆಯಿಸಿದರು. ಅವರು ಅವರ ಗಂಟಲ ದ್ರವವನ್ನು ಕೆಎಂಸಿ ಆಸ್ಪತ್ರೆಗೆ ಕಳುಹಿಸಿದಾಗ ನೆಗೆಟಿವ್ ಬಂದಿದೆ. ಇವರ ಜೊತೆಗೆ ಬಂದವರನ್ನು ತಪಾಸನೆ ಮಾಡಿದಾಗ ನೆಗೆಟಿವ್ ಬಂದಿದೆ ಅವರಿಗೆ ಒಂದುದಿನ ಪಿಪಿಇ ಕಿಟ್ ಹಾಕಿ ಮಲಗಿಸಿ 21 ಸಾವಿರ ಬಿಲ್ ಮಾಡಿದ್ದಾರೆ, ದಿನೇಶ್ ಅಡ್ಕಾರ್ ಅವರಿಗೆ 89 ಸಾವಿರ ಬಿಲ್ ಮಾಡಿದ್ದಾರೆ. ಅವರಿಗೆ 56 ಸಾವಿರ ಇನ್ಸೂರೆನ್ಸ್ ಕಂಪೆನಿಯಿಂದ ಪಾವತಿಯಾದರೆ ಉಳಿದ ಹಣ ಮತ್ತು ಜೊತೆಗಿದ್ದವರಿವರ ಬಿಲ್ಲನ್ನೂ ಪಾವತಿಸಿದ್ದಾರೆ.
ಈ ಬಗ್ಗೆ ಮೆಗಾ ಮೀಡಿಯಾ ದೊಂದಿಗೆ ಮಾತನಾಡಿದ ದಿನೇಶ್ ಕೋವಿದ್ ಇದೆ ಎಂದು ಸುಳ್ಳು ವರದಿ ನೀಡಿ ನನಗೆ 50 ಸಾವಿರಕ್ಕೂ ಹೆಚ್ಚು ಬಿಲ್ಲು ಹಾಕಿದ್ದಾರೆ 39 ಸಾವಿರದಷ್ಟು ಎದೆನೋವಿನ ಚಿಕಿತ್ಸೆಗೆ ಹಾಕಿದ್ದಾರೆ. ನನ್ನ ಜೊತೆಗಿದ್ದವರಿಗೆ ನೆಗೆಟಿವ್ ಅಗಿದ್ದರು ಒಂದು ದಿನ ಬೆಡಲ್ಲಿ ಕೂರಿಸಿ ಒಂದು ಜಗ್ ನೀರು ಮತ್ತು ಪಿಪಿಇ ಕಿಟ್ ಕೊಟ್ಟು 21 ಸಾವಿರ ಬಿಲ್ಲು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಂದು ಪಿಪಿಯ ಕಿಟ್‌ಗೆ ಸಾಧಾರಣ ಐನೂರು ರೂಪಾಯಿ ಇರುತ್ತದೆ. ಇಲ್ಲಿ ಒಬ್ಬ ರೋಗಿಯನ್ನು ನೋಡುವ ನರ್ಸ್ ಪಿಪಿಇ ಕಿಟ್ ಹಾಕಿದರೆ 1200 ರೂಪಾಯಿ ಚಾರ್ಜ್ ಬಿಲ್ಲಿನಲ್ಲಿ ಹಾಕುತ್ತಾರೆ. ಕೊವಿದ್ ವಾರ್ಡಿನಲ್ಲಿ ಹನ್ನೆರಡು ಮಂದಿ ರೋಗಿಗಳಿದ್ದರೆ ನರ್ಸ್ ಅದೇ ಕಿಟ್ಟನ್ನು ಧರಿಸುತ್ತಾರೆ. ಅದರೆ ಬಿಲ್ ಮಾತ್ರ ಎಲ್ಲರಿಗೂ 1200 ಹಾಕುತ್ತಾರೆ ಎಂದಿದ್ದಾರೆ. ನನ್ನ ಬಿಲ್ಲಿನಲ್ಲೂ ಇದೇ ರೀತಿ ಹಾಕಿ ಆಸ್ಪತ್ರೆಯವರು ಮೋಸ ಮಾಡಿದ್ದಾರೆ. ಮತ್ತೆ ಇನ್ಸೂರೆನ್ಸ್ ಇದ್ದರೆ ಬೇಕಾಬಿಟ್ಟಿ ಬಿಲ್ಲು ಹಾಕುತ್ತಾರೆ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಸಹಾಯಕ ಜಿಲ್ಲಾಧಿಕಾರಿಗಳಿಗೆ ಈಮೇಲ್ ಮೂಲಕ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.
Click this button or press Ctrl+G to toggle between Kannada and English