ಜುಲೈ 30 ರಿಂದ ಆನ್‌ಲೈನ್ ಮೂಲಕ 9ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

11:09 PM, Wednesday, July 29th, 2020
Share
1 Star2 Stars3 Stars4 Stars5 Stars
(No Ratings Yet)
Loading...

Sanathanaಮಂಗಳೂರು  : ಮೋದಿ ಸರಕಾರ ಕೇಂದ್ರದಲ್ಲಿ ಎರಡನೆಯ ಬಾರಿಗೆ ಬಂದ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿಯ ದೃಷ್ಟಿಯಿಂದ ಕಲಮ್ ೩೭೦ ರದ್ದುಗೊಳಿಸುವುದು, ಪೌರತ್ವ ತಿದ್ದುಪಡಿ ಕಾನೂನು (ಸಿ.ಎ.ಎ.), ಸರ್ವೋಚ್ಚ ನ್ಯಾಯಾಲಯವು ರಾಮಮಂದಿರದ ಪರವಾಗಿ ನೀಡಿರುವ ಐತಿಹಾಸಿಕ ತೀರ್ಪು, ಅಲ್ಲದೇ ೫ ಆಗಸ್ಟ್ ೨೦೨೦ ರಂದು ಆಯೋಜಿಸಲಾಗಿರುವ ರಾಮಮಂದಿರದ ಭೂಮಿಪೂಜೆ ಮುಂತಾದ ಸಕಾರಾತ್ಮಕ ವಿಷಯಗಳು ಘಟಿಸುತ್ತಿವೆ. ಇದರಲ್ಲಿ ಪೌರತ್ವ ತಿದ್ದುಪಡಿ ಕಾನೂನು ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಫಲಶ್ರುತಿಯಾಗಿದೆ. ೨೦೧೪ ನೇ ಇಸವಿಯಲ್ಲಿ ‘ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಆ ರೀತಿಯ ಠರಾವನ್ನು ಅಂಗೀಕರಿಸಲಾಗಿತ್ತು. ‘ಸೆಕ್ಯುಲರ್ (ಜಾತ್ಯತೀತ) ಪಕ್ಷಗಳ ಅಧಿಕಾರವಿರುವ ರಾಜ್ಯಗಳಲ್ಲಿ ‘ಸಿ.ಎ.ಎ. ಕಾನೂನು ಜಾರಿಗೊಳಿಸದಿರಲು ನಿರ್ಧರಿಸುವುದು ಮತ್ತು ಹಿಂದೂಬಹುಸಂಖ್ಯಾತ ಭಾರತದಲ್ಲಿ ನೊಂದ ಹಿಂದೂಗಳಿಗೆ ನ್ಯಾಯ ಸಿಗದಿರುವುದು, ಇದು ಮಾನವತೆಯ ಹಾಗೆಯೇ ಪ್ರಜಾಪ್ರಭುತ್ವದ ವೈಫಲ್ಯವಾಗಿದೆ. ೨೦೧೧ ರ ಜನಗಣತಿಗನುಸಾರ ‘೨೦೬೧ ರಲ್ಲಿ ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವರು ಎನ್ನುವಂತಹ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳಿಗೆ ಅವರ ನ್ಯಾಯಯುತವಾದ ಹಕ್ಕು ದೊರಕಲು ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಘೋಷಿಸಬೇಕು, ಈ ಪ್ರಮುಖ ಬೇಡಿಕೆಗಳಿಗಾಗಿ ‘೯ ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿದೆ, ಎಂಬ ಮಾಹಿತಿಯನ್ನು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ನೀಡಿದರು. ಅವರು ‘೯ ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಮಾಹಿತಿಯನ್ನು ನೀಡಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸದ್ಗುರು(ಡಾ.) ಪಿಂಗಳೆಯವರು ಮುಂದೆ ಮಾತನಾಡುತ್ತಾ, “ಈ ಅಧಿವೇಶನ ೩೦ ಜುಲೈ ರಿಂದ ೨ ಆಗಸ್ಟ್ ಮತ್ತು ೬ ರಿಂದ ೯ ಆಗಸ್ಟ್ ೨೦೨೦ ಈ ಕಾಲಾವಧಿಯಲ್ಲಿ ಸಾಯಂಕಾಲ ೬.೩೦ ರಿಂದ ೮.೩೦ ಈ ಸಮಯದಲ್ಲಿ ‘ಆನ್‌ಲೈನ್ ಪದ್ಧತಿಯಲ್ಲಿ ನಡೆಸಲಾಗುವುದು. ೯ ನೆಯ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ದೇಶ-ವಿದೇಶಗಳಿಂದ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನ್ಯಾಯವಾದಿಗಳು, ವಿಚಾರವಂತರು, ಸಂಪಾದಕರು, ಉದ್ಯಮಿಗಳು ಮುಂತಾದವರು ಬೃಹತ್ ಸಂಖ್ಯೆಯಲ್ಲಿ ‘ಆನ್‌ಲೈನ್ ಪದ್ಧತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಅಧಿವೇಶನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು, ‘ಕಳೆದ ೮ ವರ್ಷಗಳಿಂದ ಗೋವಾದಲ್ಲಿ ನಡೆಯುತ್ತಿರುವ ಈ ಅಧಿವೇಶನಕ್ಕೆ ಅತ್ಯುತ್ತಮ ಸ್ಪಂದನೆ ದೊರಕಿತು; ಆದರೆ ‘ಕೋವಿಡ್-೧೯ರ ವಿಪತ್ತಿನಿಂದಾಗಿ ಈ ಬಾರಿಯ ಅಧಿವೇಶನವನ್ನು ಆನ್‌ಲೈನ್ ಪದ್ಧತಿಯಲ್ಲಿ ನಡೆಸಬೇಕಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರದ ಭೂಮಿಪೂಜೆಗೆ ಕೆಲವು ‘ಸೆಕ್ಯುಲರ್(ಜಾತ್ಯತೀತ)ವಾದಿಗಳು ಅಡ್ಡಿ ಪಡಿಸುತ್ತಿದ್ದಾರೆ. ತದ್ವಿರುದ್ಧ ಪಾಕಿಸ್ತಾನದಲ್ಲಿ ಒಂದು ದೇವಸ್ಥಾನವನ್ನು ಕಟ್ಟುವುದೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಪಾಕಿಸ್ತಾನದಲ್ಲಿ ದೇವಸ್ಥಾನಕ್ಕೆ ಸ್ಥಾನವಿಲ್ಲ ಎಂದು ಅಲ್ಲಿಯ ಜನರು ಹೇಳುತ್ತಿದ್ದಾರೆ. ಹಿಂದೂಬಹುಸಂಖ್ಯಾತ ಭಾರತದಲ್ಲಿ ಮಾತ್ರ ಮಸೀದಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದುದರಿಂದ ಭಾರತವು ಈಗಲಾದರೂ ‘ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡಬೇಕು. ಹಿಂದೂ ಸಂಘಟನೆ ಮತ್ತು ಸಂಪ್ರದಾಯಕ್ಕಾಗಿ ಅಂದರೆ ರಾಷ್ಟ್ರಹಿತ ಮತ್ತು ಧರ್ಮಹಿತಕ್ಕಾಗಿ ಯೋಗದಾನ ನೀಡುವುದು ಹಾಗೂ ಸಮಾನ ಕೃತಿಯ ಕಾರ್ಯಕ್ರಮವನ್ನು ನಿರ್ಧರಿಸುವುದು ಅದರೊಂದಿಗೆ ಹಿಂದೂಹಿತದ ನಿರ್ಣಯವನ್ನು ಅಂಗೀಕರಿಸುವುದು ಈ ‘ಆನ್‌ಲೈನ್’ ಅಧಿವೇಶನದ ಸ್ವರೂಪವಾಗಿರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಮಾತನಾಡುತ್ತಾ, “ಮುಂಬರುವ ಆಪತ್ಕಾಲದ ದೃಷ್ಟಿಯಿಂದ ಹಿಂದೂಗಳಿಗೆ ಸಹಾಯ ಮಾಡಲು ಹಿಂದುತ್ವನಿಷ್ಠರಿಗೆ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕಾಗಿದೆ. ಈ ಸೇವಾಕಾರ್ಯದ ತರಬೇತಿಯನ್ನು ನೀಡಲು ‘ಹಿಂದೂ ರಾಷ್ಟ್ರ ಸಂಘಟಕ ಅಧಿವೇಶನವನ್ನು ೧೩ ರಿಂದ ೧೬ ಆಗಸ್ಟ್ ಈ ಕಾಲಾವಧಿಯಲ್ಲಿ ಆಯೋಜಿಸಲಾಗಿದೆ, ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English