ದಿನ ಭವಿಷ್ಯ : ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರಿಂದ ನಿಮ್ಮ ಸರ್ವಸಮಸ್ಯೆಗಳಿಗೆ ಮಾರ್ಗದರ್ಶನ

6:00 AM, Saturday, August 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

karyasidhi Anjaneyaಶ್ರೀ ಕಾರ್ಯಸಿದ್ದಿ ಆಂಜನೇಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ನಿರೀಕ್ಷಿತ ಆದಾಯ ಮೂಲಗಳು ಹಿನ್ನಡೆ ಕಂಡುಬರುತ್ತದೆ. ಆಕಸ್ಮಿಕವಾಗಿ ಸಿಗುವ ಸ್ನೇಹಿತರಿಂದ ಮೋಜು-ಮಸ್ತಿ ವಾತಾವರಣಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಕುಟುಂಬದ ವಿಚಾರಗಳನ್ನು ಅಸಡ್ಡೆ ಮಾಡುವುದು ಒಳಿತಲ್ಲ. ಸಾಂಸಾರಿಕ ಜೀವನದಲ್ಲಿ ನಡೆಯುತ್ತಿರುವ ಸಂಘರ್ಷಗಳಿಗೆ ಆದಷ್ಟು ಬೇಗ ಪರಿಹಾರ ಹುಡುಕಿಕೊಳ್ಳಿ. ಸಹೋದರ ವರ್ಗದವರನ್ನು ವಿಶ್ವಾಸದಿಂದ ನೋಡಿಕೊಳ್ಳುವುದು ಒಳ್ಳೆಯದು. ಮನೋಕಾಮನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸೂಕ್ತ. ನಿರೀಕ್ಷಿತ ಆರ್ಥಿಕ ಒಪ್ಪಂದಗಳು ನಡೆಯಬಹುದಾದ ಸಾಧ್ಯತೆಯಿದೆ. ದೂರದ ಊರಿನ ಪ್ರಯಾಣ ಮಾಡುವ ವಿಚಾರ ನಿಮ್ಮಲ್ಲಿ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಯೋಜಿತ ಕಾರ್ಯಗಳಿಗೆ ಆದಷ್ಟು ಶ್ರಮ ಪಡಬೇಕಾಗಿದೆ. ಇನ್ನೊಬ್ಬರ ಮಾತುಗಳನ್ನು ಕೇಳುವುದು ಅಷ್ಟು ಸರಿಯಲ್ಲ, ಸ್ವಂತ ಬುದ್ಧಿ ಇರಲಿ. ಸಂದರ್ಭನುಸಾರ ಮಾತನಾಡುವುದು ಒಳ್ಳೆಯದು. ನಿಮ್ಮ ಕೆಲವು ಮಾತುಗಳು ತೀಕ್ಷ್ಣ ವಾಗಿದ್ದು ಗೊಂದಲ ಅಥವಾ ಅಪಾರ್ಥ ಮೂಡಿಸುತ್ತದೆ ಎಚ್ಚರವಿರಲಿ. ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಸಿಡುಕಿನ ವ್ಯಕ್ತಿಗಳು ನಿಮ್ಮ ವಿರುದ್ಧ ಹರಿಹಾಯಬಹುದು ನಿಮ್ಮ ಒಂದು ನಗುವಿನಿಂದ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿ. ಪ್ರಕೃತಿಯೊಡನೆ ಕಾಲಕಳೆಯುವ ಮನಸ್ಸು ಮೂಡಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಲ ದೇವತಾರಾಧನೆ ನೀವು ಸಂಕಲ್ಪಗಳನ್ನು ಮಾಡುವಿರಿ. ವಿವಾಹಕ್ಕೆ ಶುಭ ಫಲಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಸ್ನೇಹಿತರ ಆಗಮನದಿಂದ ನಿಮ್ಮಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಈ ದಿನ ನಿಮಗೆ ಪ್ರೇಮಾಂಕುರವಾಗುವ ಲಕ್ಷಣಗಳು ಕಂಡುಬರುತ್ತದೆ.
ವಿಳಂಬ ಪಾವತಿ ಗಳಿಂದ ನಿಮ್ಮಲ್ಲಿ ಮಾನಸಿಕ ಅಸ್ಥಿರತೆ ಉಂಟಾಗಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಮಾಜಮುಖಿ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಕಷ್ಟದಲ್ಲಿರುವ ಆತ್ಮೀಯರಿಗೆ ಸಹಾಯಮಾಡುವ ನಿಮ್ಮ ಗುಣ ಪ್ರಶಂಸೆ ಪಡೆಯುತ್ತದೆ. ವ್ಯವಹಾರದಲ್ಲಿ ವೈಮನಸ್ಸು ಬರುವ ಲಕ್ಷಣಗಳು ಗೋಚರಿಸುತ್ತದೆ. ಯೋಜನೆಗಳನ್ನು ಪಡೆಯುವ ಅವಕಾಶ ನಿಮ್ಮದಾಗಿದೆ ಆದರೆ ತೀವ್ರತರನಾದ ಪೈಪೋಟಿ ಗಳನ್ನು ಎದುರಿಸಬೇಕಾದ ಸಂದರ್ಭ ಬರಲಿದೆ. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ನಿಮ್ಮ ಚತುರತೆ ಅತ್ಯಗತ್ಯ ಕಾರ್ಯವನ್ನು ನಿರ್ವಹಿಸುತ್ತದೆ, ಬುದ್ಧಿಗೆ ಬಲ ನೀಡಿ. ಜಂಟಿ ವ್ಯವಹಾರಗಳು ಅನುಮಾನಸ್ಪದ ದಿಂದ ಕೂಡಿರುತ್ತದೆ ಆದಷ್ಟು ಸ್ವಂತಿಕೆಯ ಕೆಲಸಗಳನ್ನು ನಿರ್ವಹಿಸಲು ಶಕ್ತರಾಗಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಅನುಪಯುಕ್ತ ಕೆಲಸಗಳಿಂದ ದೂರವಿರಿ. ಹೇಳಿಕೆ ಮಾತುಗಳನ್ನು ಕೇಳುವುದು ಸಮಂಜಸವಲ್ಲ, ಪೂರ್ಣ ಸತ್ಯವನ್ನು ಅರಿತುಕೊಳ್ಳುವ ವಿಚಾರವಿರಲಿ. ಕೆಲಸದಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತದೆ. ವ್ಯವಹಾರ ನಿಮಿತ್ತ ನೀವು ಈ ದಿನ ಹೆಚ್ಚಿನ ಓಡಾಟ ಮಾಡುವ ಸಾಧ್ಯತೆ ಕಂಡುಬರಲಿದೆ. ಮಧ್ಯಂತರ ವ್ಯಕ್ತಿಗಳಿಂದ ಕೆಲಸದಲ್ಲಿ ಸ್ವಲ್ಪ ಹಿನ್ನಡೆಯಾದರೂ ಸಂಜೆ ವೇಳೆಗೆ ಸರಿಹೋಗುವುದು. ಪ್ರೇಮಿಗಳಿಗೆ ಈ ದಿನ ಉತ್ತಮ ಸಂತೋಷಕರವಾದ ದಿನವಿರುತ್ತದೆ. ಸಂಗಾತಿಯು ನಿಮಗಾಗಿ ವಿಶೇಷ ಉಡುಗೊರೆ ನೀಡುವ ಸಾಧ್ಯತೆಗಳನ್ನು ಕಾಣಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ವಾಹನ ಖರೀದಿಯ ಬಯಕೆ ಈಡೇರುವ ಸಾಧ್ಯತೆ ಕಾಣಬಹುದು. ಆದಾಯದ ಮೂಲಗಳು ನಿರೀಕ್ಷಿತವಾಗಿ ಕೈ ಹಿಡಿಯುತ್ತದೆ. ಆತುರದ ವರ್ತನೆ ವಿಫಲ ಫಲಿತಾಂಶ ನೀಡಬಹುದು ಎಚ್ಚರವಿರಲಿ. ನಿರ್ದಿಷ್ಟ ಸಮಯದ ಪರಿಪಾಲನೆ ಬಹು ಅಗತ್ಯವಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ವ್ಯವಹಾರಗಳಲ್ಲಿ ಮಾಡುತ್ತೀರಿ. ಹೂಡಿಕೆಗಳಿಂದ ಲಾಭಾಂಶಗಳು ಹೆಚ್ಚಳವಾಗಲಿದೆ. ನಿಮ್ಮ ಯೋಜನೆಯನ್ನು ಇನ್ನೊಬ್ಬರು ನಕಲು ಮಾಡುವ ಸಾಧ್ಯತೆ ಕಂಡುಬರುತ್ತದೆ. ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ಸಹೋದರ ವರ್ಗದಿಂದ ವ್ಯಾಜ್ಯಗಳು ಉದ್ಭವವಾಗಬಹುದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅತ್ಯಂತ ಆಪ್ತರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ನೀವು ನಿಮ್ಮ ಕಾರ್ಯಗಳನ್ನು ನೀವೇ ಮಾಡಲು ಶಕ್ತರಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಕುಟುಂಬದೊಡನೆ ಗೃಹಾಲಂಕಾರಕ್ಕೆ ನೀವು ಶ್ರಮಪಡಲಿದ್ದೀರಿ. ಸಂಗಾತಿಯ ಕಾರ್ಯಗಳಿಗೆ ಒಂದು ಸಣ್ಣ ಸಹಾಯ ಪ್ರೇಮ ತರಿಸುತ್ತದೆ. ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಇರಲಿದೆ. ಮಕ್ಕಳನ್ನು ಚಟುವಟಿಕೆ ಶೀಲರನ್ನಾಗಿ ಮಾಡಲು ಪ್ರಯತ್ನ ಪಡಲಿದ್ದೀರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ರಾಜಿ ಸಂದಾನಗಳಲ್ಲಿ ಎಚ್ಚರಿಕೆವಹಿಸಿ, ಪಕ್ಷಪಾತಿ ಎಂಬ ಹಣೆಪಟ್ಟಿ ಬೀಳಬಹುದು. ಸಹೋದರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಗಿರಿ. ವ್ಯವಹಾರದ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭದವಿದೆ. ಸಂಗಾತಿಯ ಬಯಕೆಗಳಿಗೆ ನೀವು ಸಕಾರಾತ್ಮಕವಾಗಿ ಸ್ಪಂದಿಸುವುದು ಅಗತ್ಯವಿದೆ. ಆರ್ಥಿಕವಾಗಿ ಉತ್ತಮ ಮಟ್ಟದ ವ್ಯವಹಾರಗಳು ಕೈಗೂಡಲಿದೆ. ಆರೋಗ್ಯದ ಕಡೆಗೆ ನಿರ್ಲಕ್ಷ ಸಲ್ಲದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಚರ್ಚಾ ಕೂಟಗಳಲ್ಲಿ ನಿಮ್ಮ ವಿತಂಡವಾದ ಗಳಿಂದ ಇರಿಸುಮುರುಸು ಅನುಭವಿಸುವ ಸಾಧ್ಯತೆಯಿದೆ. ಈ ದಿನ ಮಕ್ಕಳ ಕೆಲವು ನಡೆ ನಿಮಗೆ ಬೇಸರ ತರಿಸಬಹುದು. ಕೌಟಂಬಿಕ ವ್ಯಾಜ್ಯಗಳನ್ನು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಪಡಿಸಿಕೊಳ್ಳಿ. ಆರ್ಥಿಕ ಸಮಸ್ಯೆಗಳಿಗೆ ಉತ್ತಮ ಮಾರ್ಗಗಳನ್ನು ಯೋಚಿಸಿ. ವ್ಯವಹಾರದಲ್ಲಿ ಹೊಸಪ್ರಯೋಗಗಳನ್ನು ಮಾಡುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಬಹುದಿನದ ಬಾಲ್ಯ ಸ್ನೇಹಿತರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ಸರಿಯಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಪ್ರತಿಭೆಗೆ ಮುಕ್ತ ಅವಕಾಶ ದೊರೆಯುವುದು ನಿಶ್ಚಿತ. ನಿಮ್ಮ ಕೆಲವು ಬೆಳವಣಿಗೆಗಳನ್ನು ಕಂಡು ಹೊಟ್ಟೆ ಉರಿ ಪಡುವ ಜನ ಬಹಳಷ್ಟು ಇರುವರು ಅವನ್ನೆಲ್ಲ ನಿರ್ಲಕ್ಷಿಸಿ. ಒಬ್ಬರನ್ನು ಮೆಚ್ಚಿಸಲು ಖರ್ಚು ಮಾಡುವ ಪ್ರವೃತ್ತಿ ಸರಿಯಲ್ಲ. ಅನಗತ್ಯ ವಸ್ತುಗಳ ಖರೀದಿಯಿಂದ ನಿಮ್ಮ ಜೇಬು ಖಾಲಿಯಾಗಬಹುದು. ದೊಡ್ಡಮಟ್ಟದ ಯೋಜನೆಗಳಿಗೆ ಬಂಡವಾಳ ಅತ್ಯವಶ್ಯಕ ಅದನ್ನು ಈಗಿನಿಂದಲೇ ಕ್ರೋಡೀಕರಿಸಲು ಪ್ರಯತ್ನಿಸುವುದು ಒಳ್ಳೆಯದು. ಆಕಸ್ಮಿಕ ಧನ ಲಾಭಗಳು ಗೋಚರವಾಗಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಭೂ ಸಂಬಂಧಿತ ವ್ಯವಹಾರಗಳು ಉತ್ತಮವಾಗಿ ಕೂಡಿರುತ್ತದೆ. ಕ್ರಯವಿಕ್ರಯ ಗಳಲ್ಲಿ ಲಾಭಾಂಶ ಕಂಡುಬರಲಿದೆ. ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭ ನಿರೀಕ್ಷಿಸಬಹುದು. ಉತ್ತಮ ವ್ಯಕ್ತಿಗಳಿಂದ ನಿಮಗೆ ಸಹಕಾರ ಮತ್ತು ಯೋಜನೆಯ ವಿಸ್ತೀರ್ಣದಲ್ಲಿ ದಾರಿ ಸಿಗಲಿದೆ. ಕೆಲವು ಕೆಲಸಗಳಲ್ಲಿ ನಿಮ್ಮ ವಿಳಂಬ ಧೋರಣೆ ಸರಿ ಕಂಡುಬರುವುದಿಲ್ಲ. ಕಳೆದುಹೋಗಿರುವ ಹಳೆಯ ವಸ್ತುಗಳು ಸಿಗುವ ಭಾಗ್ಯ ಕಂಡುಬರುತ್ತದೆ. ಉದ್ಯೋಗದಲ್ಲಿ ಹೇರಳ ಅವಕಾಶಗಳು ಲಭಿಸಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದಲ್ಲಿ ಆತುರದ ನಿರ್ಣಯ ಬೇಡ, ಯೋಗ್ಯರ ಸಲಹೆ ಪಡೆಯಲು ಮುಂದಾಗಿ. ನಿಮ್ಮ ಮನಸ್ಥಿತಿ, ಬುದ್ಧಿ ಬಲವನ್ನು ಖರ್ಚು ಮಾಡಿ ಇದರಿಂದ ಯಶಸ್ವಿದಾಯಕ ಪಲಿತಾಂಶ ಕಾಣಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ಮಟ್ಟದ ಅನುಕೂಲತೆಗಳು ಕಂಡುಬರುತ್ತದೆ. ಗೃಹ ಕಾರ್ಯಗಳು ವ್ಯವಸ್ಥಿತವಾಗಿ ನಡೆಯಲಿದೆ. ಭೂಮಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಜಾಗ್ರತೆ ಇರಲಿ. ಹಿರಿಯರ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

SunilKumar   vedavyas   HarishPoonja   SAngara   RajeshNaik   Mattaru   SanjeevaMatanduru

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English