ದೇವರ ಹಣ ಕಳ್ಳತನ, ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ, ಎರಡೇ ದಿನದಲ್ಲಿ ಕಳ್ಳನನ್ನು ಕರೆಸಿಕೊಂಡ ದೇವರು

9:42 PM, Saturday, August 1st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Mallipadyಬೆಳ್ತಂಗಡಿ: ಕಳ್ಳನೊಬ್ಬ ದೇವರ ಹುಂಡಿಯಲ್ಲಿರುವ ಹಣವನ್ನು ಕಳುವು ಮಾಡಿರುವ ಘಟನೆ ಬೆಳ್ತಂಗಡಿ ಸಮೀಪ ನಡೆದಿದ್ದು ಕೇವಲ ಎರಡೇ ದಿನದಲ್ಲಿ ಕಳ್ಳನು ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾನೆ.

ಪಡಂಗಡಿಯ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿಈ ಘಟನೆ ಸಂಭವಿಸಿದ್ದು, ಬರಾಯ ನಿವಾಸಿ ಶ್ರೀಧರ (36) ದೇವರ ಹಣ ಕದ್ದು ಸಿಕ್ಕಿಬಿದ್ದಿರುವ ವ್ಯಕ್ತಿ.

ದೇವರ ಹಣ ಕಳ್ಳತನ ಆಗಿರುವ ವಿಷಯ ತಿಳಿದ ಕೂಡಲೇ ದೇವಾಲಯದ ಆಡಳಿತ ಮಂಡಳಿ ಹಾಗು ಊರವರು ಕಳ್ಳನ ಪತ್ತೆಗಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ದಿನಬೆಳಗಾಗೋ ಮುಂಚೆಯೇ ಕಳ್ಳ ದೇವಾಲಯದ ಎದುರು ಕ್ಷಮೆ ಯಾಚಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English