ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಕರೆದ ಫೈಜ್ ಖಾನ್ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು !

6:32 PM, Sunday, August 2nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

rameshsindheಮುಂಬೈ : ಅನೇಕ ಹಿಂದೂಗಳ ಪ್ರಾಣಾಹುತಿ, ನೂರಾರು ವರ್ಷಗಳ ಹೋರಾಟ ಮತ್ತು 500 ವರ್ಷಗಳ ದೀರ್ಘ ಪ್ರತೀಕ್ಷೆಯ ಫಲವಾಗಿ ಆಗಸ್ಟ್ 5 ರಂದು ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಭವ್ಯ ದೇವಾಲಯದ ನಿರ್ಮಾಣ ಕಾರ್ಯದ ಶುಭಾರಂಭವಾಗುತ್ತಿದೆ. ಈ ಕ್ಷಣ ಸಂಪೂರ್ಣ ಹಿಂದೂ ಸಮಾಜಕ್ಕ್ಕೆ ತುಂಬಾ ಆನಂದೋತ್ಸವವಾಗಿದೆ. ಭಾರತೀಯ ಮುಸ್ಲಿಮರು ಆಕ್ರಮಣಕಾರಿ ಬಾಬರ್‌ನ ಕುರುಹುಗಳಿಗೆ ತಿಲಾಂಜಲಿ ನೀಡಿ ಪ್ರಭು ಶ್ರೀರಾಮನ ದೇವಾಲಯದ ನಿರ್ಮಾಣಕ್ಕೆ ಈಗಾಗಲೇ ಸಹಕರಿಸಿದ್ದರೆ ಈ ಸಂಘರ್ಷವನ್ನು ತಪ್ಪಿಸಬಹುದಿತ್ತು. ತದ್ವಿರುದ್ಧವಾಗಿ, ಮುಸ್ಲಿಂ ಸಮಾಜವು ವಿರೋಧ ಮಾಡಲು ಪಣತೊಟ್ಟಿತು. ಅದರ ನಂತರವೂ, ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ನಂತರ ಪ್ರಜಾಸತ್ತಾತ್ಮಕವಾದ ಪ್ರಕ್ರಿಯೆಯ ಮೂಲಕ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಈಗ ಪುನಃ ಶ್ರೀರಾಮ ದೇವಾಲಯದ ಅಡಿಪಾಯಕ್ಕೆ ಮಣ್ಣು ತರಲು ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಒತ್ತಾಯದಿಂದಾಗಿ ವಿವಾದ ಉದ್ಭವಿಸಿದೆ. ಇಂದಿನವರೆಗೂ ರಾಮ ಮಂದಿರಕ್ಕೆ ಮುಸ್ಲಿಮರ ವಿರೋಧದಿಂದಾಗಿ ಹಿಂದೂಗಳ ಮನಸ್ಸಿನಲ್ಲಿ ಈ ಕೃತಿಯ ಬಗ್ಗೆ ವಿರೋಧದ ಭಾವನೆ ಮೂಡುವುದು ಸಹಜವಾಗಿದೆ. ಒಂದು ಪಕ್ಷ ಮೊಹಮ್ಮದ್ ಫೈಜ್ ಖಾನ್ ಅವರ ಭಾವನೆಗಳು ಪವಿತ್ರವಾಗಿವೆ, ಅವರು ರಾಮಭಕ್ತರಾಗಿದ್ದಾರೆ ಎಂದು ನಂಬಿದರೂ ಅವರು ಮೊದಲು ಹಿಂದೂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು. ಆದ್ದರಿಂದ, ಈ ಸಂದರ್ಭದಲ್ಲಿ, ಶ್ರೀರಾಮ ಜನ್ಮಭೂಮಿಯಲ್ಲಿ ಭೂಮಿಪೂಜೆಯ ಮಹತ್ಕಾರ್ಯಕ್ಕೆ ಯಾವುದೇ ಅಡ್ಡಿಪಡಿಸಬಾರದು, ಈ ಸ್ಥಳದಲ್ಲಿ ಯಾವುದೇ ವಿವಾದಗಳು ಸೃಷ್ಟಿಯಾಗಾದಂತೆ ಮೊಹಮ್ಮದ್ ಫೈಜ್ ಖಾನ್ ನೋಡಬೇಕು. ಇದಕ್ಕಾಗಿ ಫೈಜ್ ಖಾನ್ ಭೂಮಿಪೂಜೆಗೆ ಮಣ್ಣು ತರುವ ಅಟ್ಟಹಾಸವನ್ನು ಕೈಬಿಟ್ಟು ಹಿಂದೆ ಸರಿಯಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದ್ದಾರೆ.
ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎನ್ನುವುದು ಅವರ ಅವಮಾನ !

ಮೊಹಮ್ಮದ ಫೈಜ್ ಖಾನ್ ಇವರ ಸೋಶಿಯಲ್ ಮೀಡಿಯಾದ ‘ಪೋಸ್ಟ್’ನಲ್ಲಿ ಪ್ರಭು ಶ್ರೀರಾಮನನ್ನು ‘ಇಮಾಮ್-ಎ-ಹಿಂದ್’ ಎಂದು ಉಲ್ಲೇಖಿಸಿದ್ದಾರೆ. ‘ಇಮಾಮ್’ ಎಂದರೆ ‘ನಮಾಜುಪಠಣ ಮಾಡುವವರು, ಇಸ್ಲಾಮ್ ನಂಬುವವರು ಮತ್ತು ಅದಕ್ಕನುಸಾರ ಆಚರಣೆ ಮಾಡುವವರು’ ! ಪ್ರಭು ಶ್ರೀರಾಮನು ನಮಾಜುಪಠಣ ಮಾಡುವವರೂ ಆಗಿರಲಿಲ್ಲ ಹಾಗೂ ಇಸ್ಲಾಮಿನ ಅನುಯಾಯಿಯೂ ಆಗಿರಲಿಲ್ಲ. ಇಸ್ಲಾಂ ಸ್ಥಾಪನೆಯಾಗುವ ಲಕ್ಷಾಂತರ ವರ್ಷಗಳ ಮೊದಲೇ ತ್ರೇತಾಯುಗದಲ್ಲಿ ಪ್ರಭು ಶ್ರೀರಾಮನು ಅವತರಿಸಿದನು. ಆದ್ದರಿಂದ, ಇಸ್ಲಾಂನಲ್ಲಿ ’ಇಮಾಮ್’ ಎಂಬುವುದರ ಅರ್ಥ ಏನೇ ಇರಲಿ, ಅದನ್ನು ಪ್ರಭು ರಾಮನಿಗಾಗಿ ಬಳಸುವುದೆಂದರೆ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಮುಂತಾದ ಎಲ್ಲ ದೃಷ್ಟಿಯಲ್ಲಿ ತಪ್ಪಾಗಿದೆ. ಮತ್ತೊಂದೆಡೆ, ಅಯೋಧ್ಯೆಯ ಶ್ರೀರಾಮ ಮಂದಿರ ಸಹಿತ ಭಾರತದ ಸಾವಿರಾರು ಮಂದಿರಗಳನ್ನು ಧ್ವಂಸ ಮಾಡಿದ ಇಸ್ಲಾಮೀ ಆಕ್ರಮಣಕಾರರ, ಮೂರ್ತಿ ಪೂಜೆಯನ್ನು ನಂಬದ ಪಂಥದ ‘ಇಮಾಮ್’ ಎಂದು ಕರೆದು ಫೈಜ್ ಖಾನ್ ಇವರು ಪ್ರಭು ಶ್ರೀರಾಮನನ್ನು ಅವಮಾನಿಸಿದ್ದಾರೆ. ಆದ್ದರಿಂದ, ಫೈಜ್ ಖಾನ್ ಸಂಪೂರ್ಣ ಹಿಂದೂ ಸಮಾಜದ ಮತ್ತು ಶ್ರೀರಾಮನ ಭಕ್ತರಿರ ಬಹಿರಂಗ ಕ್ಷಮೆಯಾಚಿಸಬೇಕು, ಎಂದು ಶ್ರೀ. ರಮೇಶ ಶಿಂದೆಯವರು ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English