ಕೊರೋನಾ : ಧಾರವಾಡ ಜಿಲ್ಲೆ 191ಸೋಂಕು ಪತ್ತೆ, ಬಲಿ 8

12:39 AM, Tuesday, August 4th, 2020
Share
1 Star2 Stars3 Stars4 Stars5 Stars
(No Ratings Yet)
Loading...

corona positive ಧಾರವಾಡ : ಸೋಮವಾರ ಜಿಲ್ಲೆಯಲ್ಲಿ 191 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರ ಜೊತೆಗೆ ಕೋವಿಡ್‌ಗೆ ಮತ್ತೆ 8 ಜನ ಸೋಂಕಿತರು ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 155ಕ್ಕೆ ಏರಿದೆ.

191 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4644 ಕ್ಕೆ ಏರಿಕೆ ಕಂಡರೆ 88 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಗುಣಮುಖರಾದವರ ಸಂಖ್ಯೆ 2152ಕ್ಕೆ ಏರಿದೆ. ಇದರಿಂದ ಈಗ ಜಿಲ್ಲೆಯಲ್ಲಿ 2347 ಪ್ರಕರಣಗಳು ಸಕ್ರಿಯವಾಗಿದ್ದು, 37 ಜನ ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಧಾರವಾಡ ತಾಲೂಕು ವ್ಯಾಪ್ತಿಯ ಶಹರದ ಭೂಸಪ್ಪ ಚೌಕ, ಸಾರಸ್ವತಪುರ, ಸಾಧನಕೇರಿ ಮುಖ್ಯ ರಸ್ತೆ, ಶಿರಡಿ ಸಾಯಿ ಬಾಬಾ ಕಾಲೋನಿ, ಗಾಂಧಿ ಚೌಕ, ಮೆಹಬೂಬ ನಗರ, ಮಾಳಾಪುರ, ಬಸವನಗರ ಹತ್ತಿರ, ಹೊಸ ಯಲ್ಲಾಪುರ, ಕುರಬರ ಓಣಿ, ಜನ್ನತ ನಗರ, ಶ್ರೀರಾಮ ನಗರ, ಹೈಕೋರ್ಟ್, ಗ್ರಾಮೀಣ ಪೊಲೀಸ್ ಕ್ವಾಟರ್ಸ್, ಸತ್ತೂರಿನ ರಾಜಾಜಿ ನಗರ, ಹನುಮಂತ ನಗರ, ಸಿವಿಲ್ ಆಸ್ಪತ್ರೆ ಕ್ವಾಟರ್ಸ್, ಬೇಲೂರು ಹೈಕೋರ್ಟ್, ಕೆಸಿಡಿ ರಸ್ತೆ ಆಕಾಶವಾಣಿ, ಮರಾಠ ಕಾಲೋನಿ, ಹಿರೇಮಠ ಗಲ್ಲಿ, ತಪೋವನ ನಗರ, ಸತ್ತೂರಿನ ಎಸ್‌ಡಿಎಮ್ ಆಸ್ಪತ್ರೆ, ತೇಜಸ್ವಿ ನಗರ, ಗಾಂಧಿ ನಗರ, ಮಂಗಳವಾರಪೇಟೆ ಹಿರೇಮಠ ಓಣಿ, ವಿಕಾಸ ನಗರ, ಸಂಪಿಗೆ ನಗರ, ಶಿರೂರ ಗ್ರಾಮದ ಹಿರೇಮಠ ಓಣಿ, ವಿನಾಯಕ ನಗರ, ಕೊಪ್ಪದಕೇರಿ ಹತ್ತಿರ, ಹಳಿಯಾಳದ ಪೊಲೀಸ್ ಠಾಣೆಯಲ್ಲಿ ಸೋಂಕು ಧೃಡಪಟ್ಟಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ್ದ ಜಿಲ್ಲೆಯ ಎಂಟು ಜನ ಮೃತಪಟ್ಟಿದ್ದಾರೆ. ಧಾರವಾಡದ ಸಾರಸ್ವತಪುರ 48 ವರ್ಷದ ಪುರುಷ, ಚರಂತಿಮಠ ಗಲ್ಲಿ ನಿವಾಸಿಯಾದ 51 ವರ್ಷದ ಮಹಿಳೆ, ಹುಬ್ಬಳ್ಳಿ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿಯಾದ 77 ವರ್ಷದ ವೃದ್ದೆ ಮಹಿಳೆ, ಗೋಕುಲ ರಸ್ತೆಯ ನಿವಾಸಿಯಾದ 81 ವರ್ಷದ ವೃದ್ದ ಮಹಿಳೆ, ಆದರ್ಶ ನಗರ ನಿವಾಸಿಯಾದ 70 ವರ್ಷದ ಮಹಿಳೆ, ಹುಬ್ಬಳ್ಳಿ ನವನಗರ ನಿವಾಸಿಯಾದ 85 ವರ್ಷದ ವೃದ್ದ ಮಹಿಳೆ, ಶಿವಸೋಮೇಶ್ವರ ನಗರ ನಿವಾಸಿಯಾದ 53 ವರ್ಷದ ಮಹಿಳೆ, ಹಳೇ ಹುಬ್ಬಳ್ಳಿ ಅರವಿಂದ ನಗರ ನಿವಾಸಿಯಾದ 76 ವರ್ಷದ ಮಹಿಳೆ ಸೇರಿ 1 ಪುರುಷ ಹಾಗೂ 7 ಜನ ಮಹಿಳೆಯರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರ,ಕಫ,ಎದೆ ನೋವು ಮತ್ತಿತರ ಲಕ್ಷಣಗಳನ್ನು ಹೊಂದಿದ ಈ ಸೋಂಕಿತರ ಪಾರ್ಥಿವ ಶರೀರಗಳನ್ನು ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English