ಕರೋನಾಗೆ ಔಷಧವಿದೆ, ಎಚ್ಚರವಿರಲಿ ಭಯ ಬೇಡ !

8:09 PM, Saturday, August 8th, 2020
Share
1 Star2 Stars3 Stars4 Stars5 Stars
(No Ratings Yet)
Loading...

Kashaya ಹುಬ್ಬಳ್ಳಿ  : ಈ ಸೃಷ್ಟಿಯಲ್ಲಿ ನಮ್ಮ ಸುತುಮುತ್ತಲೂ ಲಕ್ಷಾಂತರ ಬ್ಯಾಕ್ಟಿರಿಯಾಗಳು ಮತ್ತು ವೈರಸ್‍ಗಳು ಇರುತ್ತವೆ. ಅದರಲ್ಲಿ ಕರೋನ ಸಾಮಾನ್ಯ ವೈರಸಗಳ ಒಂದು ಗುಂಪು. ಇದರಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣ ಹೀಗೆ ಹೆಸರಿಸಲಾಗಿದೆ. ಈ ವೈರಸ್‍ನಿಂದ ಸಾಮಾನ್ಯ ಶೀತ, ಜ್ವರ, ಅನೀಮಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕರೋನ ವೈರಸ್‍ಗಳಲ್ಲಿ ಹಲವು ವಿಧಗಳಿವೆ – ಮೆರ್ಸ್ ಮತ್ತು ಸಾರ್ಸ್. ಈ ಮಹಾಮಾರಿಯ ಅವತಾರ ಇವತ್ತು ಜಗತ್ತಿಗೆ ಒಂದು ದೊಡ್ಡ ಸವಾಲಾಗಿದೆ. ನವೆಂಬರ್‍ನಲ್ಲಿ ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡ ಈ ರೋಗವು ಇಂದು ವಿಶ್ವದ 213 ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಬ್ಬಿದೆ. ಜಾಗತಿಕ ಅಂಕಿಅಂಶದ ಪ್ರಕಾರ 1.88 ಕೋಟಿ ಸೋಂಕಿತರಲ್ಲಿ ಸುಮಾರು 1.13 ಕೋಟಿ ಜನರು ಗುಣಮುಖರಾಗಿದ್ದಾರೆ. 7.06 ಲಕ್ಷ ಜನರು ಮೃತಪಟ್ಟಿದ್ದಾರೆ. ನಮ್ಮ ದೇಶದಲ್ಲಿ 20 ಲಕ್ಷ ಗಡಿ ದಾಟಿದೆ. 13.60 ಲಕ್ಷ ಜನರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 41585 ಇದೆ. 6.07 ಲಕ್ಷ ಜನರು ಚಿಕಿತ್ಸೆ ಪಡೆಯುತಿದ್ದಾರೆ. ಭಾರತದಲ್ಲಿ ಗುಣಮುಖರಾದವರ ಸಂಖ್ಯೆ 67% ಇದೆ. ಸಾವಿನ ಸಂಖ್ಯೆ 2.0% ಇದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 1.51 ಲಕ್ಷದ ಗಡಿ ದಾಟಿದೆ. 74,679 ಜನರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 2804 ಇದೆ. ಜಾಗತಿಕ ಮಟ್ಟದಲ್ಲಿ ಸೋಕಿತರ ಸಂಖ್ಯೆಯಲ್ಲಿ ಭಾರತ ಮೂರನೆಯ ಸ್ಥಾನದಲ್ಲಿದ್ದರೆ, ದೇಶದಲ್ಲಿ ಕರ್ನಾಟಕ ಮೂರನೆಯ ಸ್ಥಾನದಲ್ಲಿದೆ. ಇಂದಿನವರೆಗೂ ಜಾಗತಿಕ ಮಟ್ಟದಲ್ಲಿ ಬಲಾಢ್ಯ ದೇಶಗಳಿಗೆ ಸರಿಯಾದ ಲಸಿಕೆಯನ್ನು ಕಂಡು ಹಿಡಿಯುವುದು ಕಷ್ಟಕರವಾಗಿದೆ.

ಕೊಲ್ಲಾಪುರದ ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ|| ಸ್ವಾಗತ್ ತೋಡಕರ್‍ರವರ ಪ್ರಕಾರ ಇದು ಒಂದು ಸಾಮಾನ್ಯ ಫ್ಲ್ಯೂ. ಪ್ರತಿವರ್ಷ ಮಳೆಗಾಲದಲ್ಲಿ ಚಿಕನ್‍ಗುನ್ಯ, ಶೀತಜ್ವರ, ಮಲೇರಿಯ, ಕಾಣಿಸಿಕೊಳ್ಳುವ ರೀತಿಯಲ್ಲಿಯೇ ಇನ್‍ಫ್ಲ್ಯುಯನ್ಜದ ಸಾಮಾನ್ಯ ಲಕ್ಷಣಗಳು ಕರೋನದಲ್ಲಿ ಕಂಡುಬರುತ್ತವೆ. ಇದಕ್ಕೆ ಯಾವ ಔಷಧವೂ ಇಲ್ಲ. ಆದ್ದರಿಂದ ನಾವೆಲ್ಲರೂ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಡಾಕ್ಟರ್ ಸ್ವಾಗತ್‍ರವರು ಕಂಡುಹಿಡಿದ ಟೋನೋ16 (ಸರಕಾರದಿಂದ ಮಾನ್ಯತೆ ಪಡೆದಿದೆ) ಅನೇಕ ರೋಗಿಗಳಿಗೆ ವರದಾನವಾಗಿದೆ. ಬಾಬಾ ರಾಮದೇವ್‍ರವರ ಪತಂಜಲಿ ಔಷಧಗಳಿಗೆ ಆಯೂಷ್ ಮಂತ್ರಾಲಯವು ಮಾನ್ಯತೆ ನೀಡಿದೆ. ಪುತ್ತೂರಿನ ಕಬಕದ ನಿವಾಸಿ ಆಯುರ್ವೇದ ತಜ್ಞರಾದ ಗಿರಿಧರ ಕಜೆಯವರು ಕರೋನಗೆ ಔಷಧಿಯನ್ನು ಬಿಡುಗಡೆ ಮಾಡಲಾಗಿಲ್ಲ. ಇದರ ಹಿಂದೆ ಮಾಫಿಯಾ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜೈವಿಕ ನಾವೀನ್ಯತೆ ಕೇಂದ್ರ (ಬಿ.ಬಿ.ಸಿ) ದಿಂದ ಕರೋನ ವಿರುದ್ಧ ಹೋರಾಡಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು 8 ಉತ್ಪನ್ನಗಳನ್ನು ಇತ್ತೀಚೆಗೆ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣರವರು ಲೋಕಾರ್ಪಣೆ ಮಾಡಿದ್ದಾರೆ.

ಫರಿದಾಬಾದ್‍ನ ಸಕ್ಕರೆಕಾಯಿಲೆ ತಜ್ಞರಾದ ಡಾ|| ಬಿಸ್ವರೂಪ್‍ರಾಯ್ ಚೌಧರಿಯವರು ಹೇಳುವ ಪ್ರಕಾರ ಇದು ಭಯದಿಂದ ಹಣ ವಸೂಲಿ ಮಾಡುವ ಧಂದೆಯಾಗಿದೆ. ಇದರಲ್ಲಿ ವೈದ್ಯರು, ಔಷಧ ತಯಾರಕರು ಮತ್ತು ಶಾಮೀಲಾಗಿದ್ದಾರೆ. ಪ್ರತಿ ವರ್ಷ ನಮ್ಮ ದೇಶದಲ್ಲಿ ಇನ್‍ಫ್ಲ್ಯೂಯಂಜಾದಿಂದ ಸುಮಾರು 6 ಲಕ್ಷ ಜನರು ಸಾಯುತ್ತಿದ್ದಾರೆ. ಸಕ್ಕರೆ ಕಾಯಿಲೆ, ಹೃದಯರೋಗ, ರಕ್ತದೊತ್ತಡ, ಮಲೇರಿಯ ಮುಂತಾದ ಕಾಯಿಲೆಗಳಲ್ಲಿ ಸಾಯುವವರಿಗಿಂತ ಕರೋನಗೆ ಒಳಗಾಗಿ ಸಾಯುವವರ ಸಂಖ್ಯೆಯು ಬಹಳ ಕಡಿಮೆ ಇದೆ. ಕರೋನ ಸಾಮಾನ್ಯವಾಗಿ ಬಂದು ಹೋಗುವ ಕಾಯಲೆಯಾಗಿದ್ದು , ರೋಗ ನಿರೋಧಕ ಶಕ್ತಿ ಜಾಸ್ತಿ ಇರುವರು ಯಾವುದೇ ಔಷಧವಿಲ್ಲದೇ ಗುಣಮುಖರಾಗುತ್ತಾರೆ. ಟಿ.ವಿ. ಚಾನೆಲ್‍ಗಳು, ಸಾಮಾಜಿಕ ಮಾಧ್ಯಮಗಳು, ಮೀಡಿಯಾ ಮತ್ತು ಅನೇಕ ಪತ್ರಿಕೆಗಳ ಮುಖಾಂತರ ಭಯ ಹುಟ್ಟಿಸಲಾಗುತ್ತಿದೆ. ದಿನನಿತ್ಯ ಕರೋನ ಭಯದಿಂದ ಸಾಯುವ ಪ್ರಮಾಣ ಜಾಸ್ತಿ ಆಗುತ್ತಾ ಇದೆ. ಎಡ್ಸ್ ಕಾಯಿಲೆಗೂ ಸಹ ಇನ್ನುವರೆಗೆ ಯಾವುದೇ ಔಷಧ ಇಲ್ಲ.

ಭಯ ಬೇಡ ನಿರ್ಭಯವಾಗಿರಿ, ಕರೋನ ವಿರುದ್ಧ ಹೋರಾಡಿ, ಆದರೆ ರೋಗಿಯೊಂದಿಗೆ ಹೋರಾಡಬೇಡಿ. ಆತ್ಮಬಲವನ್ನು ವೃದ್ಧಿಮಾಡಿಕೊಳ್ಳಲು ಸಕಾರಾತ್ಮಕ ಚಿಂತನೆ ಮಾಡಿ, ಚಿಂತೆ ಬೇಡ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಲವಂಗ, ಚಕ್ಕಿ, ಶುಂಠಿ, ಕಾಳುಮೆಣಸು, ತುಳಸಿ, ಜೀರಿಗೆ, ದನಿಯಾ, ಇತರೆ ಮಸಾಲೆ ಪದಾರ್ಥಗಳಿಂದ ಮಾಡಿದ ಕಷಾಯವನ್ನು ದಿನಕ್ಕೆ 2-3 ಸಾರಿ ಕುಡಿಯಿರಿ. ಬಿಸಿ ನೀರು ಮತ್ತು ಉಗಿಯಿಂದ ಗಂಟಲು ಮತ್ತು ಮೂಗನ್ನು ಸ್ವಚ್ಛ ಮಾಡಿ. ಸಾಬೂನಿನಿಂದ ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು ಇತರೆ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕಾಗಿದೆ.

ಮನೋವಿಜ್ಞಾನಿಗಳ ಪ್ರಕಾರ ಯಾವುದೇ ವಿಚಾರವನ್ನು ಬಾರಿ-ಬಾರಿಗೂ ಮಾಡಿದರೆ ಅದರ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಕರೋನ ಬಗೆ ಇರುವ ವಿಚಾರಗಳನ್ನು ಬಿಟ್ಟು, ಆರೋಗ್ಯವಂತರಾಗಲು ಸುವಿಚಾರ, ಧ್ಯಾನ, ಯೋಗಾಸನ, ವ್ಯಾಯಾಮ, ಶುದ್ಧ ಆಹಾರ ಮತ್ತು ವಿಹಾರದ ಅವಶ್ಯಕತೆ ಇದೆ. ಸರ್ವರ ರಕ್ಷಕನಾದ ಪರಮಾತ್ಮನ ಅತಿ ಶ್ರ್ರೇಷ್ಠ ಸಂತಾನರಾದ ನಾವುಗಳು ಅವನಿಂದ ಸರ್ವಶಕ್ತಿಗಳನ್ನು ಪಡೆದು ಅನುಭವ ಮಾಡಬೇಕಾಗಿದೆ. ದಿನಕ್ಕೆ 3-4 ಬಾರಿ ಮನಸ್ಸಿನಲ್ಲಿ ಈ ಶ್ರೇಷ್ಠ ವಿಚಾರಗಳನ್ನು ಮಾಡಿದರೆ ನಮ್ಮ ರಕ್ಷಣೆಯೊಂದಿಗೆ ವಿಶ್ವದ ರಕ್ಷಣೆಯೂ ಸಹ ಆಗುವುದು.

“ನಾನು ಆರೋಗ್ಯವಂತನಾಗಿದ್ದೇನೆ, ನನ್ನ ಪರಿವಾರ ಆರೋಗ್ಯವಾಗಿದೆ, ನನ್ನ  ಮನೆ ನಿರೋಗಿಯಾಗಿದೆ, ನನ್ನ ಓಣಿ, ಊರು, ಜಿಲ್ಲೆ, ರಾಜ್ಯ, ದೇಶ, ಜಗತ್ತು ಸುದೃಢವಾಗಿದೆ. ಪರಮಾತ್ಮನ ರಕ್ಷಣೆ-ಕವಚದಲ್ಲಿ ನಾವುಗಳು ನಿರ್ಭಯ, ಸುಖಿ, ಆರೋಗ್ಯವಂತರಾಗಿದ್ದೇವೆ.”

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English